ಚೆನ್ನೈ : ಇಂಗ್ಲೆಂಡ್ ವಿರುದ್ಧ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. 420 ರನ್ಗಳ ಗುರಿ ಬೆನ್ನತ್ತಿರುವ ಭಾರತ ತಂಡ 31ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿದೆ.
3ನೇ ದಿನ 257 ರನ್ಗಳಿಸಿದ್ದ ಭಾರತ ತಂಡ ಇಂದು ಆ ಮೊತ್ತಕ್ಕೆ 70 ರನ್ ಸೇರಿಸಿ 337ರನ್ಗಳಿಗೆ ಆಲೌಟ್ ಆಯಿತು. ನಿನ್ನೆ 33 ರನ್ಗಳಿಸಿದ್ದ ವಾಷಿಂಗ್ಟನ್ ಸುಂದರ್ ಅಜೇಯ 85 ರನ್ಗಳಿಸಿದರೆ, ಅಶ್ವಿನ್ 31 ರನ್ಗಳಿಸಿದ್ದರು. ಇಂಗ್ಲೆಂಡ್ ಪರ ಆರ್ಚರ್ 2, ಬೆಸ್ 4, ಜ್ಯಾಕ್ ಲೀಚ್ 2, ಆಂರ್ಡಸನ್ 2 ವಿಕೆಟ್ ಪಡೆದು ಮಿಂಚಿದರು.
ಇನ್ನು, ಬರೋಬ್ಬರಿ 241 ರನ್ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಅಶ್ವಿನ್ ಬೌಲಿಂಗ್ ದಾಳಿಗೆ ತತ್ತರಿಸಿ ರನ್ಗಳಿಸಲು ಪರದಾಡಿ ಕೇವಲ 178ರನ್ಗಳಿಗೆ ಆಲೌಟ್ ಆಯಿತು. ರೂಟ್ 40ರನ್ಗಳಿಸಿದ್ದೇ ತಂಡದ ಗರಿಷ್ಠ ಮೊತ್ತವಾಯಿತು. ಆಲ್ಲಿ ಪೋಪ್ 28, ಜಾಸ್ ಬಟ್ಲರ್ 24, ಡೊಮಿನಿಕ್ ಥೀಮ್ 25 ರನ್ಗಳಿಸಿದರು. ಇಂಗ್ಲೆಂಡ್ 46.3 ಓವರ್ಗಳಿಗೆ 178 ಆಲೌಟ್ ಆಗುವ ಮೂಲಕ ಭಾರತಕ್ಕೆ 420 ರನ್ಗಳ ಟಾರ್ಗೆಟ್ ನೀಡಿದೆ.
-
STUMPS 🏏
— ICC (@ICC) February 8, 2021 " class="align-text-top noRightClick twitterSection" data="
India finish day four on 39/1
They need 381 more to win. England need nine wickets.#INDvENG ➡️ https://t.co/gnj5x4GOos pic.twitter.com/2lon38JptO
">STUMPS 🏏
— ICC (@ICC) February 8, 2021
India finish day four on 39/1
They need 381 more to win. England need nine wickets.#INDvENG ➡️ https://t.co/gnj5x4GOos pic.twitter.com/2lon38JptOSTUMPS 🏏
— ICC (@ICC) February 8, 2021
India finish day four on 39/1
They need 381 more to win. England need nine wickets.#INDvENG ➡️ https://t.co/gnj5x4GOos pic.twitter.com/2lon38JptO
ಭಾರತದ ಪರ ಅಶ್ವಿನ್ 4, ಶಹಬಾಜ್ ನದೀಮ್ 3, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು. 420 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ ತಂಡ 39ರನ್ಗಳಿಗೆ ಒಂದು ವಿಕೆಟ್ ಕೇಳದುಕೊಂಡಿದೆ. 12 ರನ್ಗಳಿಸಿದ್ದ ರೋಹಿತ್ ಶರ್ಮಾ ಜ್ಯಾಕ್ ಲೀಚ್ಗೆ ವಿಕೆಟ್‌ವೊಪ್ಪಿಸಿ ನಿರಾಶೆ ಮೂಡಿಸಿದರು.
ಕೊನೆಯ ದಿನ 90 ಓವರ್ಗಳ ಆಟ ನಡೆಯಲಿದ್ದು, ಭಾರತಕ್ಕೆ ಗೆಲ್ಲಲು 381 ರನ್ಗಳ ಅವಶ್ಯಕತೆಯಿದೆ. ಪ್ರಸ್ತುತ ಚೇತೇಶ್ವರ್ ಪೂಜಾರ ಅಜೇಯ 12 ಮತ್ತು ಶುಭಮನ್ ಗಿಲ್ ಅಜೇಯ 15 ರನ್ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಇದೇ ಕ್ರೀಡಾಂಗಣದಲ್ಲಿ 387ರನ್ ಚಚ್ಚಿ ಗೆದ್ದಿದ್ದ ಭಾರತ
ಭಾರತ ತಂಡ 2008ರಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 387 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಗಂಭೀರ್ 66, ವಿರೇಂದ್ರ ಸೆಹ್ವಾಗ್ (83) ಸಚಿನ್ ಅಜೇಯ 103, ಯುವರಾಜ್ ಸಿಂಗ್ ಅಜೇಯ 85 ರನ್ಗಳಿಸಿ ಗಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ, ನಾಳಿನ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.