ದುಬೈ: ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ 8ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದೆ.
ಉದ್ಘಾಟನಾ ಪಂದ್ಯ ಹಾಗೂ ಪಂಜಾಬ್ ವಿರುದ್ಧ ಹೊರೆತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಸೋತಿರುವ ಚೆನ್ನೈ ತಂಡ ಟೂರ್ನಿಯಲ್ಲಿ ಪ್ಲೇ ಆಫ್ ಕನಸನ್ನು ಗಟ್ಟಿಗೊಳಿಸಬೇಕೆಂದರೆ ಈ ಪಂದ್ಯ ಕೊನೆಯ ಅವಕಾಶವಾಗಿದೆ. ಇಂದಿನ ಪಂದ್ಯದಲ್ಲಿ ಯುವ ಬ್ಯಾಟ್ಸ್ಮನ್ ಜಗದೀಶನ್ ಬದಲಿಗೆ ಸ್ಪಿನ್ನರ್ ಪಿಯೂಷ್ ಚಾವ್ಲಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
-
#CSK wins the toss and they will bat first against #SRH.#SRHvCSK #Dream11IPL pic.twitter.com/btTuiqftUJ
— IndianPremierLeague (@IPL) October 13, 2020 " class="align-text-top noRightClick twitterSection" data="
">#CSK wins the toss and they will bat first against #SRH.#SRHvCSK #Dream11IPL pic.twitter.com/btTuiqftUJ
— IndianPremierLeague (@IPL) October 13, 2020#CSK wins the toss and they will bat first against #SRH.#SRHvCSK #Dream11IPL pic.twitter.com/btTuiqftUJ
— IndianPremierLeague (@IPL) October 13, 2020
ಇತ್ತ ಆಡಿರು 7 ಪಂದ್ಯಗಳಲ್ಲಿ 3 ಗೆಲುವು ಹಾಗೂ 4 ಸೋಲುಗಳೊಂದಿಗೆ 5ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡಕ್ಕೂ ಕೂಡ ಗೆಲುವಿನ ಹಾದಿಗೆ ಮರಳಬೇಕಿದೆ. ಹಾಗಾಗಿ ಈ ಪಂದ್ಯ ಎರಡೂ ತಂಡಗಳಿಗೂ ಮಹತ್ವವಾಗಿದೆ. ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ ಬದಲಿಗೆ ನದೀಮ್ಗೆ ಅವಕಾಶ ನೀಡಿದೆ.
ಎರಡು ತಂಡಗಳು ಐಪಿಎಲ್ ಇತಿಹಾಸದಲ್ಲಿ 13 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 9 ಹಾಗೂ ಹೈದರಾಬಾದ್ ತಂಡ 4 ಬಾರಿ ಜಯ ಸಾಧಿಸಿದೆ. 13ನೇ ಆವತ್ತಿಯಲ್ಲಿ ಧೋನಿ ಬಳಗದ ವಿರುದ್ಧ ಹೈದರಾಬಾದ್ ತಂಡ 7ರನ್ಗಳ ಜಯ ಸಾಧಿಸಿತ್ತು.
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಪ್ಲೆಸಿಸ್, ಎಂಎಸ್ ಧೋನಿ (ವಿ.ಕೀ, ನಾಯಕ), ಸ್ಯಾಮ್ ಕರ್ರನ್, ಪಿಯೂಷ್ ಚಾವ್ಲಾ, ಡ್ವೇನ್ ಬ್ರಾವೊ, ರವೀಂದ್ರ ಜಡೇಜಾ, ಕರ್ನ್ ಶರ್ಮ, ಶಾರ್ದೂಲ್ ಠಾಕೂರ್, ದೀಪಕ್ ಚಹರ್.
ಸನ್ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್ ಸ್ಟೋ (ವಿಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್ , ವಿಜಯ್ ಶಂಕರ್, ಪ್ರಿಯಂ ಗರ್ಗ್, ಶಹಬಾಜ್ ನದೀಮ್, ರಶೀದ್ ಖಾನ್, ಸಂದೀಪ್ ಶರ್ಮ, ಖಲೀಲ್ ಅಹ್ಮಮ್, ಟಿ.ನಟರಾಜನ್