ETV Bharat / sports

ಬ್ರಾವೋ ಟೂರ್ನಿಯಿಂದ ಹೊರಬಿದ್ದರೂ, ಬದಲಿ ಆಟಗಾರನ ಆಯ್ಕೆ ಅಸಾಧ್ಯ: ಸಿಇಒ ವಿಶ್ವನಾಥನ್

ಸಿಎಸ್​ಕೆ ತಂಡದಲ್ಲಿ ಈಗಾಗಲೇ ಇಮ್ರಾನ್ ತಾಹೀರ್ ಹಾಗೂ ಜೋಶ್ ಹೆಜಲ್​ವುಡ್​ ಬೆಂಚ್​ ಕಾಯುತ್ತಿರುವುದರಿಂದ ಬ್ರಾವೋ ಬದಲು ಇವರಿಬ್ಬರಲ್ಲಿ ಯಾರಾದರೂ ತಂಡಕ್ಕೆ ಸೇರ್ಪಡೆಯಾಗಬಹುದು ಎಂದು ತಿಳಿದುಬಂದಿದೆ.

ಚೆನ್ನೈ ಸೂಪರ್ ಕಿಂಗ್ಸ್​
ಡ್ವೇನ್ ಬ್ರಾವೋ
author img

By

Published : Oct 18, 2020, 8:58 PM IST

ದುಬೈ: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೊಳಗಾಗಿರುವ ಡ್ವೇನ್​ ಬ್ರಾವೋಗೆ ಇನ್ನು 2 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿದುಬಂದಿದೆ. ಆದರೆ ಅವರು ಟೂರ್ನಿಯಿಂದ ಹೊರಬಿದ್ದರೂ ಅವರ ಬದಲಿ ಆಟಗಾರನನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎಂದು ಸಿಎಸ್​ಕೆ ಸಿಇಒ ತಿಳಿಸಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಬ್ರಾವೋ ಕೊನೆಯ ಓವರ್​ ಬೌಲ್‌ ಮಾಡಬೇಕಿತ್ತು. ಆದರೆ ತೊಡೆ ಸಂಧಿ ನೋವಿಗೆ ಒಳಗಾಗಿದ್ದ ಅವರಿಗೆ ಹೊರೆ ನೀಡಲು ಬಯಸದ ಧೋನಿ ಜಡೇಜಾಗೆ ಅವಕಾಶ ನೀಡಿದ್ದರು. ಪರಿಣಾಮ ಜಡೇಜಾ 18 ರನ್​ಗಳನ್ನು ಉಳಿಸಿಕೊಳ್ಳಲು ವಿಫಲರಾದರು. ಅಕ್ಸರ್​ ಪಟೇಲ್​ 3 ಸಿಕ್ಸರ್​ ಸಿಡಿಸಿ ಡೆಲ್ಲಿ ತಂಡಕ್ಕೆ 5 ವಿಕೆಟ್​ಗಳ ಜಯ ತಂದುಕೊಟ್ಟರು.

ಆದರೆ ಪಂದ್ಯದ ಮುಕ್ತಾಯದ ಬಳಿಕ ಈ ಬಗ್ಗೆ ಚೆನ್ನೈ ಕೋಚ್ ಸ್ಟೀಫನ್ ಪ್ಲೆಮಿಂಗ್ ಮಾತನಾಡಿದ್ದು ಬ್ರಾವೋ ಕೆಲ ದಿನಗಳ ಅಥವಾ ಕೆಲ ವಾರಗಳ ಕಾಲ ವಿಶ್ರಾಂತಿ ಬೇಕಾಗಬಹುದು ಎಂದು ತಿಳಿಸಿದ್ದಾರೆ.

ಇದೀಗ ಈ ಕುರಿತು ಮಾಹಿತಿ ನೀಡಿರುವ ಚೆನ್ನೈ ತಂಡದ ಸಿಇಒ ವಿಶ್ವನಾಥನ್, ಭಾನುವಾರ ಸಂಜೆಯೊಳಗೆ ನಾವು ಬ್ರಾವೋ ಗಾಯದ ಸಂಪೂರ್ಣ ವರದಿ ಪಡೆಯಲಿದ್ದೇವೆ. ಪ್ರಸ್ತುತ ಮಾಹಿತಿಯ ಪ್ರಕಾರ ಬ್ರಾವೋ ಮುಂದಿನ ಕೆಲವು ಪಂದ್ಯಗಳು ಅಥವಾ ಎರಡು ಮೂರು ವಾರಗಳ ವರೆಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ ಎಂದಿದ್ದಾರೆ.

ಬ್ರಾವೋ ಬದಲಿ ಆಟಗಾರನ ಸೇರ್ಪಡೆ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಅವರು "ಈ ಹಂತದಲ್ಲಿ ಬದಲಿ ಆಟಗಾರನ ಆಯ್ಕೆ ಉತ್ತಮ ಎಂದು ನಮಗೆ ಅನಿಸುತ್ತಿಲ್ಲ. ಏಕೆಂದರೆ ಹೊಸ ಆಟಗಾರ ತಂಡ ಸೇರಬೇಕಾದರೆ ಕ್ವಾರಂಟೈನ್ ಪೂರೈಸಬೇಕು. ಹಾಗಾಗಿ ಬ್ರಾವೋ ಟೂರ್ನಿಯಿಂದಲೇ ಹೊರಗುಳಿಯಬೇಕಾದ ಸಂದರ್ಭ ಬಂದರೂ ಬದಲಿ ಆಟಗಾರನ ಆಯ್ಕೆ ಅಸಾಧ್ಯ " ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.