ಸಿಡ್ನಿ: ತಮ್ಮ ಕರಾರುವಾಕ್ ಫೀಲ್ಡಿಂಗ್ನಿಂದ ಅದೆಷ್ಟೋ ರನ್ ಔಟ್ ಮಾಡಿ ಪಂದ್ಯದ ಗತಿಯನ್ನೇ ಬದಲಾಯಿಸುವ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ತಾವೂ ಕೂಡ ರನ್ಔಟ್ ಆಗುವುದರಲ್ಲಿ ಮತ್ತು ತಮ್ಮ ಜೊತೆಗಾರರನ್ನು ರನ್ಔಟ್ ಮಾಡುವುದರಲ್ಲಿಯೂ ಹಿಂದೆ ಬಿದ್ದಿಲ್ಲ.
ಗುರುವಾರ ಸ್ಟೀವ್ ಸ್ಮಿತ್ರನ್ನು ತಮ್ಮ ಡೈರೆಕ್ಟ್ ಹಿಟ್ ಮೂಲಕ ರನ್ಔಟ್ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದ ಜಡೇಜಾ, ಇಂದು ತಮ್ಮ ಜೊತೆ ಬ್ಯಾಟಿಂಗ್ ಮಾಡುತ್ತಿದ್ದ ಇಬ್ಬರು ಬ್ಯಾಟ್ಸ್ಮನ್ಗಳ ರನ್ಔಟ್ನಲ್ಲೂ ಭಾಗಿಯಾದರು. ಶುಕ್ರವಾರ ಜಡೇಜಾ 10 ರನ್ ಗಳಿಸಿದ್ದ ಅಶ್ವಿನ್ ಮತ್ತು ಖಾತೆ ತೆರೆಯದ ಬುಮ್ರಾರ ರನ್ಔಟ್ಗೆ ಕಾರಣರಾದರು.
ಜಡೇಜಾ ತಮ್ಮ 73 ಟೆಸ್ಟ್ ಇನ್ನಿಂಗ್ಸ್ನಲ್ಲಿ 20 ಬಾರಿ ರನ್ಔಟ್ಗಳಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ 13 ಬಾರಿ ತಮ್ಮ ಜೊತೆಗಾರರ ರನ್ಔಟ್ಗೆ ಕಾರಣರಾಗಿದ್ದರೆ, 7 ಬಾರಿ ತಾವೇ ರನ್ಔಟ್ ಆಗಿದ್ದಾರೆ. ಅಂದರೆ ಅವರು ಪ್ರತಿ 3.5 ಇನ್ನಿಂಗ್ಸ್ಗಳಿಗೊಮ್ಮೆ ತಾವೂ ರನ್ಔಟ್ ಆಗುತ್ತಾರೆ, ಇಲ್ಲವೇ ತಮ್ಮ ಜೊತೆಗಾರರ ರನ್ಔಟ್ನಲ್ಲಿ ಭಾಗಿಯಾಗುತ್ತಾರೆ.
ಇದಕ್ಕೆ ಕಾರಣವೆಂದರೆ ಜಡೇಜಾ ತಮ್ಮ ಜೊತೆಗಾರರಿಗಿಂತ ವೇಗವಾಗಿ ಓಡುತ್ತಾರೆ. ಶನಿವಾರ ಕೂಡ ತಾವು ತ್ವರಿತ ಒಂದು ರನ್ ಕದಿಯಲು ಬಯಸಿ ಚೆಂಡನ್ನು ಟಚ್ ಮಾಡಿದ ಕೂಡಲೇ ಓಡಿದ್ದಾರೆ. ಆದರೆ ಅಶ್ವಿನ್ ಇವರಷ್ಟು ವೇಗವಾಗಿ ಓಡದ ಕಾರಣ ರನ್ಔಟ್ ಆಗಿ ಪೆವಿಲಿಯನ್ಗೆ ಹಿಂತಿರುಗಿದರು. ಇನ್ನು 2 ರನ್ ಕದಿಯುವ ವೇಳೆ ಫೀಲ್ಡರ್ ಜಡೇಜಾರನ್ನು ಬಿಟ್ಟು ಬುಮ್ರಾ ಓಡುತ್ತಿದ್ದ ಸ್ಟಂಪ್ ಕಡೆಗೆ ಚೆಂಡು ನೀಡಿದ್ದರಿಂದ ರನ್ಔಟ್ ಮಾಡಿದ್ದರು.
2017ರ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಅದ್ಭುತವಾಗಿ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ ರನ್ಔಟ್ ಆಗುವಂತೆ ಮಾಡಿ ಜಡೇಜಾ ಭಾರಿ ಟೀಕೆಗೆ ಗುರಿಯಾಗಿದ್ದರು.
ಇದನ್ನು ಓದಿ:ಸೋಲಿನ ಸುಳಿಯಲ್ಲಿರುವ ಭಾರತಕ್ಕೆ ಮತ್ತೊಂದು ಆಘಾತ: ಗಾಯಾಳು ಜಡೇಜಾ 4ನೇ ಟೆಸ್ಟ್ನಿಂದ ಔಟ್