ETV Bharat / sports

ಕೆರಿಬಿಯನ್ ಪ್ರೀಮಿಯರ್‌ ಲೀಗ್‌ಗೆ ದಿನಾಂಕ ಫಿಕ್ಸ್​: ಆಗಸ್ಟ್​​ 18ರಂದು ಪಂದ್ಯಾರಂಭ

author img

By

Published : Jul 28, 2020, 9:38 PM IST

ಕೆರಿಬಿಯನ್ ಪ್ರೀಮಿಯರ್​ ಲೀಗ್ (ಸಿಪಿಎಲ್) 2020 ರ ಪಂದ್ಯಾವಳಿಗಳು ಆಗಸ್ಟ್​ 18 ರಂದು ಪ್ರಾರಂಭವಾಗಲಿವೆ. ​ಆರಂಭಿಕ ಪಂದ್ಯವು ಕಳೆದ ವರ್ಷದ ರನ್ನರ್​ ಅಪ್ ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವೆ ನಡೆಯಲಿದೆ.

Caribbean Premier League
ಆಗಸ್ಟ್​ನಲ್ಲಿ ಸಿಪಿಎಲ್​

ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2020 ರ ಪಂದ್ಯಗಳು ಆಗಸ್ಟ್ 18 ರಂದು ಶುರುವಾಗಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 10 ರಂದು ನಡೆಯಲಿದೆ.

ಆರು ತಂಡಗಳ ನಡುವೆ 33 ಪಂದ್ಯಗಳು ನಡೆಯಲಿವೆ. ತಾರೌಬಾದ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಮತ್ತು ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್​ನಲ್ಲಿ ಎಲ್ಲಾ ಪಂದ್ಯಗಳು ನಿಗದಿಯಾಗಿವೆ.

​ಆರಂಭಿಕ ಪಂದ್ಯವು ಕಳೆದ ವರ್ಷದ ರನ್ನರ್​ ಅಪ್ ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಹಾಲಿ ಚಾಂಪಿಯನ್ ಬಾರ್ಬಡೋಸ್ ಟ್ರೈಡೆಂಟ್ಸ್ ಎರಡನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಜತೆ ಆಡಲಿದೆ. ಕೊರೊನಾ ಹಿನ್ನೆಲೆಯಲ್ಲಿ ಪ್ರೇಕ್ಷಕರಿಲ್ಲದೆ ಕಠಿಣ ಪ್ರೋಟೋಕಾಲ್​ಗಳೊಂದಿಗೆ ಪಂದ್ಯಗಳು ನಡೆಯಲಿವೆ ಎಂದು ಸಿಪಿಎಲ್ ತಿಳಿಸಿದೆ.

Caribbean Premier League
ಸಿಪಿಎಲ್ ವೇಳಾಪಟ್ಟಿ ಹೀಗಿದೆ..

'ಈ ವರ್ಷ ವಿಭಿನ್ನ ಸಿಪಿಎಲ್​ ನಡೆಯಲಿದೆ. ದೀರ್ಘಕಾಲದ ವಿಶ್ರಾಂತಿಯ ಬಳಿಕ ಕ್ರಿಕೆಟ್‌ ಆಟಗಳು ಪುನರಾರಂಭವಾಗಿದ್ದು ಆಸಕ್ತಿ ಹೆಚ್ಚಿಸಿದೆ' ಎಂದು ಸಿಪಿಎಲ್ ಸಿಇಒ ಡೇಮಿಯನ್ ಒ ಡೊನೊಹೋ ಹೇಳಿದ್ದಾರೆ.

'ಇಂತಹ ಸಂದಿಗ್ಧ ಸಂದರ್ಭದಲ್ಲಿ ಪಂದ್ಯಾವಳಿ ನಡೆಸಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಟ್ರಿನಿಡಾಡ್ ಮತ್ತು ಟೊಬಾಗೊ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಸಾರ್ವಜನಿಕರು ಮತ್ತು ಆಟಗಾರರ ಸುರಕ್ಷತೆ ಕಾಪಾಡುವ ಮೂಲಕ ಪಂದ್ಯಾವಳಿ ನಡೆಸಲು ನಾವು ಬದ್ದರಾಗಿದ್ದೇವೆ' ಎಂದು ಸಿಪಿಎಲ್ ಸಿಒಒ ಪೀಟ್ ರಸ್ಸೆಲ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.