ETV Bharat / sports

ವಿಶ್ವಕಪ್‌ನಲ್ಲಿ ಆಡಬೇಕಂದ್ರೆ ಫಾರ್ಮ್‌ಗೆ ಮರಳಿ... ಪ್ಲೇಯರ್ಸ್‌ಗೆ ಕಪ್ತಾನ ಕೊಹ್ಲಿ ವಾರ್ನ್‌! - ವಿಶ್ವಕಪ್‌

ಈಗ ಉಳಿದ 2 ಪಂದ್ಯಗಳಲ್ಲಿ ಕೆಲ ಮಹತ್ವದ ಬದಲಾವಣೆ ಸೂಚನೆಯನ್ನ ವಿರಾಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವಕಪ್‌ ಟೂರ್ನಿಯಲ್ಲಿ ಆಡಬೇಕಂದ್ರೆ ಒಳ್ಳೇ ಫಾರ್ಮ್‌ ಹೊಂದಿರಲೇಬೇಕು ಅಂತ ಆಟಗಾರರಿಗೆ ಸ್ಪಷ್ಟ ಸಂದೇಶವನ್ನೂ ಕಪ್ತಾನ್‌ ಕೊಹ್ಲಿ ನೀಡಿದ್ದಾರೆ.

ವಿರಾಟ್‌ ಕೊಹ್ಲಿ
author img

By

Published : Mar 10, 2019, 11:45 AM IST

ಮೊಹಾಲಿ : ಟೀಂ ಇಂಡಿಯಾ ಆಟಾಗರರಿಗೆ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಸ್ಟ್ರಿಕ್ಟಾಗಿಯೇ ಒಂದು ವಾರ್ನ್‌ ಮಾಡಿದ್ದಾರೆ. ಲಂಡನ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಡಬೇಕಿದ್ರೆ ಬೇಗ ಫಾರ್ಮ್‌ಗೆ ಮರಳಿ, ಇಲ್ಲದಿದ್ರೇ ನೀವು ಸೆಲೆಕ್ಟಾಗಲ್ಲ ಅಂತ ತಮ್ಮ ಸಹ ಆಟಗಾರರಿಗೆ ದಿಲ್ಲಿವಾಲಾ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಪಂದ್ಯದ ಸಂಕಷ್ಟದ ಸಮಯದಲ್ಲೂ ಬೌಲರ್‌ಗಳು ತಂಡಕ್ಕೆ ಆಸರೆಯಾಗುತ್ತಿರುವುದು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿಗೆ ಹೆಮ್ಮೆಯಿದೆ. ಆದರೆ, ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ್ದೇ ದೊಡ್ಡ ಚಿಂತೆಯಾಗಿದೆ. ರಾಂಚಿಯಲ್ಲಿ ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯ ಸೋತ ಮೇಲಂತೂ ಆ ಚಿಂತೆ ಮತ್ತಷ್ಟು ಹೆಚ್ಚಿದೆ.

ಆಸ್ಟ್ರೇಲಿಯಾ ವಿರುದ್ಧ 32 ರನ್‌ಗಳಿಂದ 3ನೇ ಪಂದ್ಯ ಸೋತಿರುವುದು ಕೊಹ್ಲಿ ಚಿಂತೆಗೆ ಕಾರಣವಾಗಿದೆ. ಮೊದಲು ಬ್ಯಾಟ್‌ ಮಾಡಿದ್ದ ಆಸೀಸ್‌ 5 ವಿಕೆಟ್‌ಗೆ 313 ರನ್‌ ಪೇರಿಸಿತ್ತು. ಆದರೆ, ವಿರಾಟ್‌ ಕೊಹ್ಲಿ ಅದ್ಭುತ ಬ್ಯಾಟಿಂಗ್‌ನಿಂದ 123 ಅಮೂಲ್ಯ ಕಾಣಿಕೆ ನೀಡಿದ್ದರೂ ತಂಡ 48.2 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 281 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

'ನಾವೀಗ ಉಳಿದ ಪಂದ್ಯಗಳಲ್ಲಿ ಕೆಲ ಬದಲಾವಣೆ ಮಾಡಬೇಕಿದೆ. ಎಲ್ಲಕ್ಕಿಂತ ಆಟಗಾರರು ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಇಂಗ್ಲೆಂಡ್‌ ಪ್ರವಾಸಕ್ಕೂ ಮೊದಲೇ ಸರ್ವಶ್ರೇಷ್ಠ ಪ್ರದರ್ಶನ ನೀಡಲೇಬೇಕು. ಇಲ್ಲದಿದ್ರೇ ಅಂಥವರು ವಿಶ್ವಕಪ್‌ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತೆ. ಸಿಕ್ಕಿರುವ ಈ ಅವಕಾಶ ಬಳಸಿಕೊಳ್ಳಬೇಕು. ಆಸೀಸ್‌ ವಿರುದ್ಧದ 3ನೇ ಪಂದ್ಯದಲ್ಲಿ 3 ವಿಕೆಟ್‌ ಕಳೆದುಕೊಂಡಿದ್ದಾಗಲೂ ಗೆಲ್ಲುವ ನಿರೀಕ್ಷೆಯೇ ಇತ್ತು. ಆದರೆ, ಐದು ವಿಕೆಟ್ ಉರುಳಿದ ಮೇಲೆ ನಾವು ಸಂಕಷ್ಟಕ್ಕೆ ಸಿಲುಕಿದೆವು. ನಾನು ಮತ್ತು ವಿಜಯ್ ಶಂಕರ್ ಔಟಾದ ಮೇಲೆ ಬೇಗ ಬೇಗ ವಿಕೆಟ್ ಕಳೆದುಕೊಂಡೆವು. ಈ ರೀತಿ ಬ್ಯಾಟಿಂಗ್‌ ವೈಫಲ್ಯ ಕಾಣಬಾರದಿತ್ತು' ಅಂತ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದಾರೆ.

ಈಗ ಕ್ಯಾಪ್ಟನ್‌ ವಿರಾಟ್‌ ಬ್ಯಾಟ್ಸ್‌ಮನ್‌ಗಳಿಗೆ ಸ್ಟ್ರಿಕ್ಟಾಗಿ ವಾರ್ನ್‌ ಮಾಡಿದ್ದಾರೆ. ಇದನ್ನ ಅರಿತು ಆಡಿದ್ರೆ ಬ್ಯಾಟ್ಸ್‌ಮನ್‌ಗಳು ವಿಶ್ವಕಪ್‌ ಟೂರ್ನಿಗಾಗಿ ಲಂಡನ್‌ ಫ್ಲೈಟ್ ಏರುತ್ತಾರೆ. ಇಲ್ಲದಿದ್ರೇ ಹ್ಯಾಪ್‌ ಮೋರೆ ಹಾಕಿಕೊಂಡು ಇರಬೇಕಾಗುತ್ತೆ ಅಂತ ಖಡಕ್ ಸಂದೇಶವನ್ನಂತೂ ಕೊಹ್ಲಿ ನೀಡಿದ್ದಾರೆ.

Intro:Body:

1 Captain Virat Kohli to Warn CoPlayers March 10.txt   

close

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.