ನವದೆಹಲಿ : ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಅದ್ಭುತ ಫಾರ್ಮ್ ಕಾಯ್ದುಕೊಂಡಿದ್ದಾರೆ. ಅದೇ ಬ್ಯಾಟಿಂಗ್ ಲಯವನ್ನ ಈ ವರ್ಷಪೂರ್ತಿ ಕಂಡುಕೊಂಡ್ರೇ ಕ್ಯಾಪ್ಟನ್ ಕೊಹ್ಲಿ 3 ವರ್ಲ್ಡ್ ರೆಕಾರ್ಡ್‌ಗಳನ್ನ ಪುಡಿ ಪುಡಿ ಮಾಡಲಿದ್ದಾರೆ.
ಬರೀ ಕ್ಯಾಪ್ಟನಾಗಿ ಅಷ್ಟೇ ಕಮಾಲ್ ಮಾಡ್ತಿಲ್ಲ ದಿಲ್ಲಿವಾಲಾ ವಿರಾಟ್ ಕೊಹ್ಲಿ. ಬ್ಯಾಟಿಂಗ್‌ನ ಸರಾಸರಿಯನ್ನ ಮಜಭೂತಾಗಿ ಮೆಂಟೈನ್ ಮಾಡಿದ್ದಾರೆ. ಈ ವರ್ಷವೂ ಅದೇ ಜೋಶ್‌ನಲ್ಲಿ ಬ್ಯಾಟಿಂಗ್ ಬೀಸಿದ್ರೇ, ಸಚಿನ್, ಲಾರಾ, ಧೋನಿ ಹಾಗೂ ರಿಕಿ ಪಾಂಟಿಂಗ್ ರೆಕಾರ್ಡ್ಸ್‌ನ ಬ್ರೇಕ್ ಮಾಡಲಿದ್ದಾರೆ.
ಇಂಗ್ಲೆಂಡ್ ನೆಲದೊಳಗೆ ಮೇ ತಿಂಗಳಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮೊದಲೇ ಬ್ಲ್ಯೂಬಾಯ್ಸ್ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಲಿದ್ದಾರೆ. ಸಾಲುಸಾಲು ವಿಶ್ರಾಂತಿ ಬಳಿಕ ಧೋನಿ ಈಗ ಮತ್ತೆ ಆಸೀಸ್ ಜತೆಗಿನ ಟಿ-20 ಸಿರೀಸ್‌ನಲ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳುವ ಉತ್ಸಾಹದಲ್ಲಿದ್ದಾರೆ. ಕಳೆದ ವರ್ಷದಲ್ಲಂತೂ ಒಂದಲ್ಲಾ ನಾಲ್ಕಾರು ವರ್ಲ್ಡ್ ರೆಕಾರ್ಡ್ಸ್‌ನ ತುಂಡರಿಸಿದ್ದಾರೆ. ಒಳ್ಳೇ ಸ್ಟ್ರೈಕ್‌ರೇಟ್ ಕಾಯ್ದುಕೊಂಡ ಕೊಹ್ಲಿ ತಂಡಕ್ಕೂ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. 2019ರಲ್ಲಿ ವರ್ಲ್ಡ್ ರೆಕಾರ್ಡ್ಸ್‌ನ ತಮ್ಮ ಹೆಸರಿನಲ್ಲಿ ಬರೆದುಕೊಳ್ಳಲು ದೊಡ್ಡ ಚಾನ್ಸ್ ದಿಲ್ಲಿವಾಲಾಗಿದೆ.
ಕೊಹ್ಲಿ 20 ಸಾವಿರ ರನ್ ಗಡಿ ತಲುಪಲು ಬೇಕು 687 ರನ್:
ಅಂತಾರಾಷ್ಟ್ರೀಯ ಏಕ ದಿನ ಪಂದ್ಯದಲ್ಲಿ 20 ಸಾವಿರ ರನ್ ಗಡಿ ಮುಟ್ಟೋದಕ್ಕೆ ಕೊಹ್ಲಿಗೆ ಈಗ ಬೇಕಿರೋದು ಬರೀ 687 ರನ್. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮತ್ತು ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಒನ್‌ಡೇ ಇಂಟರ್ ನ್ಯಾಷನಲ್‌ನಲ್ಲಿ 20 ಸಾವಿರ ರನ್ ಪೇರಿಸಿದ್ದಾರೆ. ಲಾರಾ 553 ಪಂದ್ಯವಾಡಿ ಈ ದಾಖಲೆಯ ರನ್ ಪೇರಿಸಿದ್ದಾರೆ. ಇಷ್ಟೊಂದು ಕಡಿಮೆ ಪಂದ್ಯಗಳಿಂದ 20 ಸಾವಿರ ರನ್ ಗಡಿ ಮುಟ್ಟಲು ಸಚಿನ್, ಲಾರಾ ಬಿಟ್ರೇ ವಿಶ್ವದ ಯಾವೊಬ್ಬ ಆಟಗಾರನಿಗೂ ಸಾಧ್ಯವಾಗಿಲ್ಲ. ಈ ವರ್ಷ ಕೊಹ್ಲಿ ಅತ್ಯಂತ ಸ್ಪೀಡಾಗಿ ಈ ದಾಖಲೆ ಮಾಡಬಹುದು. ಸಚಿನ್ ಮತ್ತು ಲಾರಾಗೆ ಆಡಿದಕ್ಕಿಂತ 47 ಪಂದ್ಯ ಕಡಿಮೆ ಆಡಿದ್ದಾರೆ ಕೊಹ್ಲಿ. 453 ಪಂದ್ಯ ಆಡೋದಕ್ಕೂ ಮೊದಲೇ ಕೊಹ್ಲಿ ಈ ದಾಖಲೆ ಬರೆದರೆ, ವಿಶ್ವದಲ್ಲೇ ಅತ್ಯಂತ ಕಡಿಮೆ ಪಂದ್ಯವಾಡಿ ಅತೀ ಹೆಚ್ಚು 20 ಸಾವಿರ ರನ್ ಪೇರಿಸಿದ ಆಟಗಾರ ಎಂಬ ದಾಖಲೆ ಗರಿ ಕೊಹ್ಲಿ ಮುಕುಟಕ್ಕೇರಲಿದೆ.
ಎಂ.ಎಸ್ ಧೋನಿ ಒವರ್‌ಟೇಕ್ ಮಾಡ್ತಾರೆ ಕೊಹ್ಲಿ :
ಭಾರತದ ಟೆಸ್ಟ್ ಇತಿಹಾಸದಲ್ಲೇ ಧೋನಿ ಯಶಸ್ವಿ ನಾಯಕ. 60 ಟೆಸ್ಟ್ ಪಂದ್ಯಕ್ಕೆ ಕ್ಯಾಪ್ಟನಾಗಿದ್ದ ಮಹೇಂದ್ರ ಸಿಂಗ್ ಧೋನಿ, ಭಾರತಕ್ಕೆ 27 ಟೆಸ್ಟ್ ಮ್ಯಾಚ್ ಗೆದ್ದು ಕೊಟ್ಟಿದ್ದಾರೆ. ಆದ್ರೇ, ಬರೀ 40 ಟೆಸ್ಟ್ ಪಂದ್ಯಕ್ಕೆ ಕ್ಯಾಪ್ಟನಾಗಿರುವ ವಿರಾಟ್ ಕೊಹ್ಲಿ, ಅದರಲ್ಲಿ 26 ಟೆಸ್ಟ್ ಪಂದ್ಯ ದೇಶಕ್ಕೆ ಗೆದ್ದು ಕೊಟ್ಟಿದ್ದಾರೆ. ಹೆಲಿಕಾಪ್ಟರ್ ಶಾಟ್ ಖ್ಯಾತಿ ಎಂ.ಎಸ್ ಧೋನಿಯ ಟೆಸ್ಟ್ ಕ್ರಿಕೆಟ್ ದಾಖಲೆ ಉಡೀಸ್ ಮಾಡಲು ಕೊಹ್ಲಿ ಬರೀ 2 ಟೆಸ್ಟ್ ಪಂದ್ಯ ಗೆಲ್ಲಬೇಕಿದೆ. ಈ ವರ್ಷ ತುಂಬಾ ಸಲೀಸಾಗಿ ಧೋನಿ ಈ ರೆಕಾರ್ಡ್ ಬ್ರೇಕ್ ಮಾಡಲು ಅವಕಾಶವಿದೆ.
ರಿಕಿ ಪಾಂಟಿಂಗ್ ದಾಖಲೆಗೂ ಕೊಹ್ಲಿ ಎಳ್ಳುನೀರು :
ಒನ್ ಡೇ ಮ್ಯಾಚ್‌ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಕ್ಯಾಪ್ಟನ್ ಅನ್ನೋ ಶ್ರೇಯ ಕೂಡ ವಿರಾಟ್ ಕೊಹ್ಲಿಗೆ ಈ ವರ್ಷವೇ ಧಕ್ಕಲಿದೆ. ಆಸೀಸ್‌ಗೆ 2 ವಿಶ್ವಕಪ್ ಗೆದ್ದುಕೊಟ್ಟ ರಿಕಿ ಪಾಂಟಿಂಗ್ ಕ್ಯಾಪ್ಟನಾಗಿ 22 ಶತಕ ಸಿಡಿಸಿದ್ದಾರೆ. ಪಾಂಟಿಂಗ್ ಹಿಂದಿಕ್ಕಲು ಈಗ ಕೊಹ್ಲಿಗೆ 5 ಶತಕ ಬೇಕು. ಕ್ಯಾಪ್ಟನಾದ್ಮೇಲೆ ಕೊಹ್ಲಿ 17 ಶತಕ ಸಿಡಿಸಿದ್ದಾರೆ. ಇದೇ ವರ್ಷದಲ್ಲೇ ಕೊಹ್ಲಿ 6 ಶತಕ ಭಾರಿಸಲು ಸಾಧ್ಯವಾದ್ರೇ, ಪಾಂಟಿಂಗ್ ದಾಖಲೆಯನ್ನೂ ಕೊಹ್ಲಿ ಪೀಸ್‌ಪೀಸ್ ಮಾಡ್ತಾರೆ.
ವಿರಾಟ್ ಕೊಹ್ಲಿ ಈ ಎಲ್ಲ ವಿಶ್ವ ದಾಖಲೆಗಳನ್ನ ಮುರಿಯೋದಷ್ಟೇ ಅಲ್ಲ, ವಿಶ್ವಕಪ್ ಎತ್ತಿ ಹಿಡಿದು ಭಾರತೀಯರಿಗೆ ಉಡುಗೊರೆ ನೀಡಲು ದೊಡ್ಡ ಚಾನ್ಸ್ ಇದೆ. ಅದು ಈಡೇರಲಿ ಅನ್ನೋದು ಕ್ರಿಕೆಟ್ ಪ್ರೇಮಿಗಳ ಆಶಯ.