ಲಂಡನ್: ಮಾರ್ಚ್ 12ರಿಂದ 20ರವರೆಗೆ ಅಹಮದಾಬಾದ್ನಲ್ಲಿ ನಡೆಯಲಿರುವ 5 ಟಿ-20 ಸರಣಿಗಾಗಿ ಇಸಿಬಿ 16 ಸದಸ್ಯರ ತಂಡ ಪ್ರಕಟಿಸಿದ್ದು, ಸೀನಿಯರ್ ವಿಕೆಟ್ ಕೀಪರ್, ಬ್ಯಾಟ್ಸ್ಮನ್ಗಳಾದ ಜೋಸ್ ಬಟ್ಲರ್ ಮತ್ತು ಜಾನಿ ಬೈರ್ಸ್ಟೋವ್ ತಂಡಕ್ಕೆ ಮರಳಿದ್ದಾರೆ.
ಮೊದಲ ಟೆಸ್ಟ್ನ ನಂತರ ಬಟ್ಲರ್ ತವರಿಗೆ ಮರಳಿದ್ದಾರೆ. ಜಾನಿ ಬೈರ್ಸ್ಟೋವ್ ಶ್ರೀಲಂಕಾ ವಿರುದ್ಧದ ಸರಣಿಯ ಬಳಿಕ ತವರಿಗೆ ಮರಳಿದ್ದರು. ಅಲ್ಲದೆ ಅವರನ್ನು ರೊಟೇಷನ್ ಪದ್ಧತಿ ಅನುಸಾರ ಭಾರತ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು.
-
This should be some series! 🤩
— England Cricket (@englandcricket) February 11, 2021 " class="align-text-top noRightClick twitterSection" data="
🇮🇳 #INDvENG 🏴
">This should be some series! 🤩
— England Cricket (@englandcricket) February 11, 2021
🇮🇳 #INDvENG 🏴This should be some series! 🤩
— England Cricket (@englandcricket) February 11, 2021
🇮🇳 #INDvENG 🏴
ಇದೀಗ ಟಿ-20 ತಂಡಕ್ಕೆ ಇವರಿಬ್ಬರು ಮರಳಿದ್ದಾರೆ. ಇವರ ಜೊತೆಗೆ ಟೆಸ್ಟ್ ಸರಣಿಯಲ್ಲಿ ವಿಶ್ರಾಂತಿ ಪಡೆದಿರುವ ಸ್ಯಾಮ್ ಕರ್ರನ್ ಕೂಡ ಚುಟುಕು ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅಲ್ಲದೆ 14ನೇ ಐಪಿಎಲ್ನಲ್ಲಿ ಪ್ರಮುಖ ಆಕರ್ಷಣೆಯಾಗಿರುವ ನಂ.1 ಟಿ-20 ಬ್ಯಾಟ್ಸ್ಮನ್ ಡೇವಿಡ್ ಮಲನ್ ಕೂಡ ಟಿ-20 ತಂಡದಲ್ಲಿ ಆಡಲಿದ್ದಾರೆ.
ಇಂಗ್ಲೆಂಡ್ ಟಿ-20 ತಂಡ:
ಇಯಾನ್ ಮಾರ್ಗನ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜೊನಾಥನ್ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್ , ಟಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಮಾರ್ಕ್ ವುಡ್.
ಇದನ್ನು ಓದಿ: ಕೊಹ್ಲಿ ಭಾರತಕ್ಕೆ ಹೊರಟ ನಂತರ ಪ್ಯಾಟ್ ಕಮ್ಮಿನ್ಸ್ ಟಾರ್ಗೆಟ್ ಈ ಬ್ಯಾಟ್ಸ್ಮನ್ ಆಗಿದ್ರಂತೆ?