ನವದೆಹಲಿ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾರ ಪ್ರದರ್ಶನ ತೃಪ್ತಿದಾಯಕವಾಗಿದೆಯಾದರೂ ಅವರ ನಿಜವಾದ ಪರೀಕ್ಷೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎದುರಾಗಲಿದೆ.
ಬುಮ್ರಾ 13ನೇ ಆವೃತ್ತಿಯಲ್ಲಿ 27 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಅವರೂ ಕೋವಿಡ್ ಲಾಕ್ಡೌನ್ಗಿಂತ ಮುಂಚಿತವಾಗಿ ನಡೆದಿದ್ದ ಅಂತಾರಾಷ್ಟ್ರೀಯ ಟಿ20 ಟೂರ್ನಿಯಲ್ಲೂ ವಿಕೆಟ್ ಪಡೆದಿದ್ದರು. ಆದರೆ ಅವರ ಏಕದಿನ ಪಂದ್ಯಗಳಲ್ಲಿನ ಪ್ರದರ್ಶನ ಮಾತ್ರ ಭಾರತ ತಂಡದಕ್ಕೆ ದೊಡ್ಡ ಚಿಂತೆಯಾಗಿ ಕಾಡುತ್ತಿದೆ. ಏಕೆಂದರೆ ಗಾಯದಿಂದ ಹೊರಬಂದ ನಂತರ ಅವರು ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಪಡೆಯುವ ಬೌಲರ್ ಆಗಿ ಕಾಣಿಸಿಕೊಳ್ಳುತ್ತಿಲ್ಲ.
ಕಳೆದ ವರ್ಷ ಬಲಗೈ ವೇಗಿ ಬುಮ್ರಾ ಬೆನ್ನಿನ ನೋವಿಗೆ ತುತ್ತಾಗಿದ್ದರು. ಅವರ 2019ರ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಒಂದು ಅಂತಾರಾಷ್ಟ್ರೀಯ ಪಂದ್ಯವಾಡಿರಲಿಲ್ಲ. ಅವರು ಮತ್ತೆ ಈ ವರ್ಷ ಜನವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದರು. ಈ ಸೀಮಿತ ಓವರ್ಗಳ ಸರಣಿಯಲ್ಲಿ ಅವರ ಪ್ರದರ್ಶನ ವ್ಯತಿರಿಕ್ತವಾಗಿ ಕಂಡುಬಂದಿದೆ.
ಅವರು ಕಮ್ಬ್ಯಾಕ್ ಮಾಡಿದ ನಂತರ 8 ಟಿ20 ಪಂದ್ಯಗಳಲ್ಲಿ 6.38 ಎಕಾನಮಿಯಲ್ಲಿ 8 ವಿಕೆಟ್ ಪಡೆದಿದ್ದಾರೆ. ಇದು ಅವರ ವೃತ್ತಿ ಜೀವನದ ಅತ್ಯುತ್ತಮ ಎಕಾನಮಿಯಾಗಿದೆ. ಆದರೆ ಏಕದಿನ ಕ್ರಿಕೆಟ್ಗೆ ಹೋಲಿಸಿದರೆ ಬುಮ್ರಾ ಫಾರ್ಮ್ ಸಮಸ್ಯೆಯಾಗಿ ಕಂಡುಬಂದಿದೆ. ಅವರು ಈ ವರ್ಷ ಆಡಿರುವ 6 ಏಕದಿನ ಪಂದ್ಯಗಳಲ್ಲಿ 5.1 ಎಕಾನಮಿಯಲ್ಲಿ ಕೇವಲ 1 ವಿಕೆಟ್ ಪಡೆದಿದ್ದಾರೆ. ಅವರ ಎಕಾನಮಿ ಕೂಡ ಸರಾಸರಿ ಎಕಾನಮಿಗಿಂತಲೂ ಹೆಚ್ಚಾಗಿದೆ.
ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಪ್ರಕಾರ, ಬುಮ್ರಾ ಬೌಲಿಂಗ್ನಲ್ಲಿ ಬ್ಯಾಟ್ಸ್ಮನ್ ರಕ್ಷಣಾತ್ಮವಾಗಿ ಆಡಿದರೂ ಅವರನ್ನು ಮಣಿಸುವ ಸಾಮರ್ಥ್ಯವನ್ನು ಹೊಂದಿದೆ. ಅದು ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಸಾಧ್ಯವಾಗುತ್ತದೆ. ಆದರೆ ಏಕದಿನ ಪಂದ್ಯಗಳಲ್ಲಿ ಅವರ ಇತ್ತೀಚಿನ ದಾಖಲೆ ಪರಿಗಣಿಸಿದರೆ ಅವರು ವಿಕೆಟ್ ಪಡೆಯಲು ಕಷ್ಟಪಡುತ್ತಿದ್ದಾರೆ ಎಂದಿದ್ದಾರೆ.
ಆದರೆ 1983 ವಿಶ್ವಕಪ್ ವಿಜೇತ ತಂಡದ ಬೌಲರ್ ಮದನ್ ಲಾಲ್ ಬುಮ್ರಾ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಬೌಲಿಂಗ್ಗೆ ಐಪಿಎಲ್ನಲ್ಲಿ ಯಾರೊಬ್ಬರು ಸುಲಭವಾಗಿ ಆಡಲು ಸಾಧ್ಯವಾಗಿಲ್ಲ. ಆದರೆ ಏಕದಿನ ಕ್ರಿಕೆಟ್ನಲ್ಲಿ ಬುಮ್ರಾ ವಿಕೆಟ್ ಪಡೆಯಲು ವಿಫಲರಾಗುತ್ತಿರುವ ಕಾರಣ ಅವರ ಬೌಲಿಂಗ್ನಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುತ್ತಿದ್ದಾರೆ. ಇತರೆ 40 ಓವರ್ಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದಿದ್ದಾರೆ.
ಆದರೆ ಏಕದಿನ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳು ಉತ್ತಮ ಬೌಲರ್ಗಳನ್ನು ಬಿಡಬಹುದು, ಆದರೆ ಟಿ20 ಕ್ರಿಕೆಟ್ನಲ್ಲಿ ಹಾಗಾಗುವುದಿಲ್ಲ ಹಾಗಾಗಿ ಬುಮ್ರಾ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ. ಆದೆ ಐಪಿಎಲ್ನಲ್ಲಿ ಉತ್ತಮ ಫಾರ್ಮನಲ್ಲಿರುವ ಬುಮ್ರಾ ಆಸ್ಟ್ರೇಲಿಯಾ ನೆಲದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.