ಮುಂಬೈ: ವೆಸ್ಟ್ ಇಂಡೀಸ್ನ ಮಾಜಿ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾಗೆ ಎದೆನೋವು ಕಾಣಿಸಿಕೊಂಡಿರುವ ಕಾರಣ ಅವರನ್ನ ಮುಂಬೈನ ಗ್ಲೋಬಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಆಸ್ಪತ್ರೆ ಮೂಲಗಳು ನಿರಾಕರಿಸಿವೆ ಎಂದು ತಿಳಿದು ಬಂದಿದೆ. ಈ ಹಿಂದೆ ಹೃದಯಾಘಾತಕ್ಕೊಳಗಾಗಿ ಬ್ರಿಯಾನ್ ಲಾರಾ ಚಿಕಿತ್ಸೆ ಪಡೆದುಕೊಂಡಿದ್ದಾರೆ.
2007ರಲ್ಲೇ ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ಲಾರಾ, ವೆಸ್ಟ್ ಇಂಡೀಸ್ನ ದಿಗ್ಗಜ ಕ್ರಿಕೆಟ್ರ ಆಗಿದ್ದಾರೆ. 299 ಏಕದಿನ ಕ್ರಿಕೆಟ್ನಿಂದ ಲಾರಾ 10,405 ರನ್ ಗಳಿಸಿದ್ದು, ಅದರಲ್ಲಿ 19 ಶತಕ ಹಾಗೂ 63 ಅರ್ಧಶತಕ ಸೇರಿವೆ. 131 ಟೆಸ್ಟ್ ಪಂದ್ಯಗಳ 232 ಇನ್ನಿಂಗ್ಸ್ಗಳಿಂದ 11,953 ರನ್ ಗಳಿಸಿದ್ದಾರೆ. ಬ್ರಿಯಾನ್ ಲಾರಾ ತಂದೆ 1989ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಐಸಿಸಿ ವಿಶ್ವಕಪ್ನ ನೇರ ಪ್ರಸಾರ ನೀಡುತ್ತಿರುವ ಸ್ಟಾರ್ ಸ್ಪೋರ್ಟ್ಸ್ನಲ್ಲಿ ವೀಕ್ಷಕ ವಿವರಣೆಗಾರರಾಗಿ ಬ್ರಿಯಾನ್ ಲಾರಾ ಕಾರ್ಯನಿರ್ವಹಿಸುತ್ತಿದ್ದಾರೆ.
ನಾನು ಹುಷಾರಾಗಿರುವೆ: ನಾಳೆ ಹೋಟೆಲ್ಗೆ ತೆರಳುವೆ
ಆಸ್ಪತ್ರೆಗೆ ದಾಖಲಾಗಿದ್ದ ಬ್ರಿಯಾನ್ ಲಾರಾ ತಾವೂ ಆರಾಮಾಗಿದ್ದು, ನಾಳೆ ಸಂಜೆ ವೇಳೆಗೆ ಹೋಟೆಲ್ಗೆ ತೆರಳುವೆ ಎಂದು ಟ್ವೀಟ್ ಮಾಡಿದ್ದಾರೆ.