ETV Bharat / sports

ಕೊಹ್ಲಿ vs ಸ್ಮಿತ್:​ ಬ್ರೆಟ್​ ಲೀ ಪ್ರಕಾರ ಶ್ರೇಷ್ಠ ಬ್ಯಾಟ್ಸ್​ಮನ್ ಇವರಂತೆ

author img

By

Published : May 26, 2020, 1:47 PM IST

ಜಿಂಬಾಬ್ವೆಯ ಮಾಜಿ ವೇಗಿ ಎಂಬಾಗ್ವ ಜೊತೆ ಇನ್​​ಸ್ಟಾಗ್ರಾಮ್​ ಸಂದರ್ಶನದಲ್ಲಿ ಬ್ರೆಟ್​ ಲೀ ಮಾತನಾಡಿದ್ದು, ಕೊಹ್ಲಿ-ಸ್ಮಿತ್​ ಇಬ್ಬರಲ್ಲಿ ಯಾರನ್ನು ನೀವು ಆಯ್ಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ತಮ್ಮ ದೇಶದ ಸ್ಟಿವ್​ ಸ್ಮಿತ್​ರನ್ನು ಆಯ್ಕೆ ಮಾಡಿದ್ದಾರೆ.

Virat Kohli and Steve Smith
ಕೊಹ್ಲಿ vs ಸ್ಮಿತ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿಗಿಂತ ಅಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​ ಉತ್ತಮ ಬ್ಯಾಟ್ಸ್​ಮನ್​ ಎಂದು ಆಸೀಸ್​ ಮಾಜಿ ವೇಗಿ ಬ್ರೆಟ್​ ಲೀ ಅಭಿಪ್ರಾಯಪಟ್ಟಿದ್ದಾರೆ.

ಜಿಂಬಾಬ್ವೆಯ ಮಾಜಿ ವೇಗಿ ಎಂಬಾಗ್ವ ಜೊತೆ ಇನ್​​ಸ್ಟಾಗ್ರಾಮ್​​ ಸಂದರ್ಶನದಲ್ಲಿ ಮಾತನಾಡಿರುವ ಬ್ರೆಟ್​ ಲೀ ಅವರು, ಕೊಹ್ಲಿ-ಸ್ಮಿತ್​ ಇಬ್ಬರಲ್ಲಿ ಯಾರನ್ನು ನೀವು ಆಯ್ಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಬ್ರೆಟ್​ ಲೀ ತಮ್ಮ ದೇಶದ ಸ್ಟಿವ್​ ಸ್ಮಿತ್​ರನ್ನು ಆಯ್ಕೆ ಮಾಡಿದ್ದಾರೆ.

ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ತುಂಬಾ ಕಠಿಣ. ಇಬ್ಬರೂ ತಮ್ಮದೇ ಆದ ಕೌಶಲಗಳನ್ನು ಹೊಂದಿದ್ದಾರೆ. ಬೌಲಿಂಗ್​ ಪಾಯಿಂಟ್​ನಲ್ಲಿ ನೋಡುವುದಾದರೆ, ನಾನು ಇಬ್ಬರಲ್ಲಿ ನ್ಯೂನ್ಯತೆಗಳನ್ನು ನೋಡಲು ಪ್ರಯತ್ನಿಸುತ್ತೇನೆ. ಆದರೆ, ಈ ಇಬ್ಬರು ಬ್ಯಾಟ್ಸ್​ಮನ್​ಗಳು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ.

Virat Kohli and Steve Smith
ಬ್ರೆಟ್​ ಲೀ

‘ಕೊಹ್ಲಿ ತಂತ್ರಗಾರಿಕೆಯಲ್ಲಿ ಉತ್ತಮರಾಗಿದ್ದಾರೆ. ಅವರು V ಮೂಲಕ ಅದ್ಭುತವಾಗಿ ಹೊಡೆಯುತ್ತಾರೆ. ಅದನ್ನು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಹೊಡೆಯುತ್ತಿದ್ದರು. ಅದನ್ನು ಆಡುವುದು ತುಂಬಾ ಕಷ್ಟ. ಇನ್ನು ಕೊಹ್ಲಿ ಶ್ರೇಷ್ಠ ನಾಯಕರೂ ಕೂಡ ಹೌದು. ನನ್ನ ಪ್ರಕಾರ ಅವರು ಐಪಿಎಲ್​ ಗೆಲ್ಲಲು ಇಷ್ಟ ಪಡುತ್ತಾರೆ’ ಎಂದು ಲೀ ಹೇಳಿದ್ದಾರೆ.

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್​ಮನ್​ ಸ್ಮಿತ್​ 2018ರಲ್ಲಿ ಬಾಲ್​ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಆದರೂ 2019ರ ಆ್ಯಶಸ್​ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

‘ಸ್ಟಿವ್​ ಸ್ಮಿತ್​ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಯಾತನೆ ಅನುಭವಿಸಿದ್ದಾರೆ. ಆದರೂ ಕಳೆದ 12 ತಿಂಗಳುಗಳಲ್ಲಿ ತಮ್ಮ ಆಟದ ಮೂಲಕವೇ ದಿನದಿಂದ ದಿನಕ್ಕೆ ತಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸಿಕೊಂಡಿದ್ದಾರೆ. ಕೆಲವೊಮ್ಮೆ ಗೊಂದಲಕ್ಕೊಳಗಾದರೂ ಅವರು ತಾಳ್ಮೆಯನ್ನು ತಮ್ಮ ಸಂಗಾತಿಯಂತೆ ಭಾವಿಸುತ್ತಾರೆ’.

‘ಪ್ರಸ್ತುತ ನಾನು ಕೊಹ್ಲಿಗಿಂತ ಸ್ಮಿತ್​ರನ್ನೇ ಆಯ್ಕೆ ಮಾಡುತ್ತೇನೆ. ಏಕೆಂದರೆ ಅವರು ಹಲವು ಸವಾಲುಗಳನ್ನು ಜಯಿಸಿ ಬಂದಿದ್ದಾರೆ. ಇಬ್ಬರು ಅದ್ಭುತ ಆಟಗಾರರು, ಆದರೆ ಸ್ಮಿತ್ ಡಾನ್​ ಬ್ರಾಡ್ಮನ್​ನಂತೆಯೇ ಉತ್ತಮರಾಗಿದ್ದಾರೆ. ಸ್ಮಿತ್​ ಆಟ ನೋಡಿದರೆ ಬ್ರಾಡ್ಮನ್​ ಆಟ ನೋಡಿದಂತಾಗುತ್ತದೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ’ ಎಂದು ಲೀ ತಿಳಿಸಿದ್ದಾರೆ.

ಪ್ರಸ್ತುತ ಸ್ಮಿತ್​ ಟೆಸ್ಟ್​ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್​ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಏಕದಿನ ಶ್ರೇಯಾಂಕದಲ್ಲಿ ವಿರಾಟ್​ ಮೊದಲ ಸ್ಥಾನದಲ್ಲಿದ್ದರೆ, ಸ್ಮಿತ್​ ಟಾಪ್​ 10ರಲ್ಲೂ ಕಾಣಿಸಿಕೊಂಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.