ETV Bharat / sports

ಐಪಿಎಲ್​ನಲ್ಲಿ ಭಾರತೀಯ ಆಲ್​ರೌಂಡರ್​ಗೆ 'ಮ್ಯಾನ್​ ಆಫ್ ದಿ ಟೂರ್ನಮೆಂಟ್'​ ಅವಾರ್ಡ್​: ಬ್ರಾಡ್​ ಹಾಗ್​ ಭವಿಷ್ಯ - ಐಪಿಎಲ್​ ಯುಎಇ

ಮೊದಲಿಗೆ ಯುಎಇಯಲ್ಲಿ ಈ ಬಾರಿ ಐಪಿಎಲ್​ ನಡೆಯುವುದರಿಂದ ಆರ್​ಸಿಬಿ ಮತ್ತು ಮುಂಬೈ ಐಪಿಎಲ್​ ಎತ್ತಿ ಹಿಡಿಯಬಹುದಾದ ನೆಚ್ಚಿನ ತಂಡಗಳು ಎಂದಿರುವ ಅವರು ಟೂರ್ನಿಯಲ್ಲಿ ಹಾರ್ದಿಕ್​ ಪಾಂಡ್ಯ ಮ್ಯಾನ್​ ಆಫ್​ ದ ಟೂರ್ನಮೆಂಟ್​ ಪ್ರಶಸ್ತಿ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಬ್ರಾಡ್​ ಹಾಗ್​
ಬ್ರಾಡ್​ ಹಾಗ್​
author img

By

Published : Jul 27, 2020, 2:42 PM IST

ನವದೆಹಲಿ: ಭಾರತದ ಸ್ಟಾರ್​ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಅವರಿಗೆ 2020ರ ಐಪಿಎಲ್​ನಲ್ಲಿ ಟೂರ್ನಿ ಶ್ರೇಷ್ಠ ಅವಾರ್ಡ್​ ಒಲಿಯಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್​ ಬ್ರಾಡ್​ ಹಾಗ್​ ಭವಿಷ್ಯ ನುಡಿದಿದ್ದಾರೆ.

ಮೊದಲಿಗೆ ಯುಎಇಯಲ್ಲಿ ಈ ಬಾರಿ ಐಪಿಎಲ್​ ನಡೆಯುವುದರಿಂದ ಆರ್​ಸಿಬಿ ಮತ್ತು ಮುಂಬೈ ಐಪಿಎಲ್​ ಎತ್ತಿ ಹಿಡಿಯಬಹುದಾದ ನೆಚ್ಚಿನ ತಂಡಗಳು ಎಂದಿರುವ ಅವರು ಟೂರ್ನಿಯಲ್ಲಿ ಹಾರ್ದಿಕ್​ ಪಾಂಡ್ಯ ಮ್ಯಾನ್​ ಆಫ್​ ದಿ ಟೂರ್ನಮೆಂಟ್​ ಪ್ರಶಸ್ತಿ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಭವಿಷ್ಯ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್​ 4 ಬಾರಿ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿದೆ. ಇದರಲ್ಲಿ ಹಾರ್ದಿಕ್​ ಪಾಂಡ್ಯ ಕೂಡ ಬಾಲ್​ ಮತ್ತು ಬ್ಯಾಟ್​ ಎರಡರಲ್ಲೂ ಅದ್ಭುತ ಕಾಣಿಕೆ ನೀಡಿದ್ದಾರೆ.

'ಮುಂಬೈ ತಂಡದಲ್ಲಿ ಟಾಪ್​ 4ರಲ್ಲಿ ಉತ್ತಮ ಬ್ಯಾಟ್ಸ್​​ಮನ್​ಗಳಿದ್ದಾರೆ. ಜೊತೆಗೆ ಅತ್ಯುತ್ತಮ ಆಲ್​ರೌಂಡರ್​ಗಳನ್ನು ಹೊಂದಿದ್ದಾರೆ. ಇನ್ನು ಬೌಲಿಂಗ್​ನಲ್ಲಿ ಬುಮ್ರಾ ಮತ್ತು ಮಾಲಿಂಗ ಅವರಂತಹ ಚಾಣಕ್ಷ್ಯ ಬೌಲರ್​ಗಳನ್ನು ಹೊಂದಿರುವುದರಿಂದ ಈ ಬಾರಿ ಮುಂಬೈ ತಂಡಕ್ಕೂ ಆರ್​ಸಿಬಿಗೆ ಇರುವಷ್ಟು ಅವಕಾಶ ಇದೆ' ಎಂದು ಹಾಗ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

'ಜೊತೆಗೆ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಕ್ರಿಕೆಟ್ ಮರಳುವ ಉತ್ಸಾಹದಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಅವರು ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ಇಂತಹ ಕ್ಷಣಗಳಲ್ಲಿ ಹಾರ್ದಿಕ್​ ಹೆಚ್ಚು ಶಕ್ತಿ ಪಡೆಯಲಿದ್ದಾರೆ. ಅದೇ ಕಾರಣಗಳಿಂದ ನಾನು ಅವರು ಈ ಬಾರಿ ಐಪಿಎಲ್​ ಮ್ಯಾನ್​ ಆಫ್​ ದಿ ಟೂರ್ನಮೆಂಟ್ ಆಗಲಿದ್ದಾರೆ' ಎಂದು ಭಾವಿಸಿದ್ದೇನೆ ಎಂದು ಹಾಗ್ ತಿಳಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್​ 19ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ರನ್ನರ್​ ಆಪ್​ ಚೆನ್ನೈ ಸೂಪರ್ ಕಿಂಗ್ಸ್​ ಸೆಣಸಾಡಲಿವೆ. ಫೈನಲ್​ ಪಂದ್ಯ ನವೆಂಬರ್​ 8ರಂದು ನಡೆಯಲಿದೆ. ಮುಂದಿನ ವಾರ ಬಿಸಿಸಿಐ ಐಪಿಎಲ್​ನ ಸಂಪೂರ್ಣ ವೇಳಾಪಟ್ಟಿಯನ್ನು ಘೋಷಿಸುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.