ದುಬೈ: ರಶೀದ್ ಖಾನ್, ಸಂದೀಪ್ ಶರ್ಮಾರ ಅದ್ಭುತ ಬೌಲಿಂಗ್ ದಾಳಿ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಕೇವಲ 126 ರನ್ಗಳಿಗೆ ನಿಯಂತ್ರಿಸಿದೆ.
ಟಾಸ್ ಗೆದ್ದು ಪಂಜಾಬ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಹೈದರಾಬಾದ್ ತಂಡ ಆರಂಭಿದಿಂದ ಅಂತ್ಯದವರೆಗೂ ಪಂಜಾಬ್ ತಂಡವನ್ನು ತನ್ನ ಕರಾರುವಾಕ್ ಬೌಲಿಂಗ್ ದಾಳಿಯಿಂದ ಕಟ್ಟಿಹಾಕಿತು. ಆರಂಭಿಕನಾಗಿ ಕಣಕ್ಕಿಳಿದ ಮಂದೀಪ್ ಸಿಂಗ್ 17 ರನ್ಗಳಿಸಿ ಔಟಾದರೆ, ಕ್ರಿಸ್ ಗೇಲ್(20) ಹಾಗೂ ನಾಯಕ ರಾಹುಲ್ (27) ಸತತ 2 ಎಸೆತಗಳಲ್ಲಿ ವಿಕೆಟ್ ನೀಡಿದ್ದು ಪಂಜಾಬ್ ತಂಡಕ್ಕೆ ದೊಡ್ಡ ಹೊಡೆತ ನೀಡಿತು.
-
Innings Break!
— IndianPremierLeague (@IPL) October 24, 2020 " class="align-text-top noRightClick twitterSection" data="
Brilliant bowling and outstanding fielding by #SRH helps restrict #KXIP to a total of 126/7 on the board.
SRH need 127 runs to win the game.
Live - https://t.co/Tfcy5x6kie #Dream11IPL pic.twitter.com/cCoSxKn1fj
">Innings Break!
— IndianPremierLeague (@IPL) October 24, 2020
Brilliant bowling and outstanding fielding by #SRH helps restrict #KXIP to a total of 126/7 on the board.
SRH need 127 runs to win the game.
Live - https://t.co/Tfcy5x6kie #Dream11IPL pic.twitter.com/cCoSxKn1fjInnings Break!
— IndianPremierLeague (@IPL) October 24, 2020
Brilliant bowling and outstanding fielding by #SRH helps restrict #KXIP to a total of 126/7 on the board.
SRH need 127 runs to win the game.
Live - https://t.co/Tfcy5x6kie #Dream11IPL pic.twitter.com/cCoSxKn1fj
ಇವರಿಬ್ಬರ ವಿಕೆಟ್ ನಂತರ ಹೈದರಾಬಾದ್ ತಂಡ ಪಂಜಾಬ್ ಬ್ಯಾಟ್ಸ್ಮನ್ಗಳನ್ನು ಕ್ರೀಸ್ನಲ್ಲಿ ನೆಲೆಯೂರಲು ಅವಕಾಶ ನೀಡಲಿಲ್ಲ. ಪೂರನ್ ಮಾತ್ರ 28 ಎಸೆತಗಳಲ್ಲಿ 32 ರನ್ಗಳಿಸಿ ಔಟಾಗದೆ ಉಳಿದರು.
ಸ್ಫೋಟಕ ಬ್ಯಾಟಿಂಗ್ ಹೆಸರಾದ ಮ್ಯಾಕ್ಸ್ವೆಲ್ 12, ದೀಪಕ್ ಹೂಡ(0), ಜೋರ್ಡಾನ್(7) ಮುರುಗನ್ ಅಶ್ವಿನ್ 4 ರನ್ಗಳಿಸಿ ಔಟಾದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಹೈದರಾಬಾದ್ ತಂಡದ ಪರ ರಶೀದ್ ಖಾನ್ 14 ರನ್ ನೀಡಿ 2 ವಿಕೆಟ್, ಸಂದೀಪ್ ಶರ್ಮಾ 29ಕ್ಕೆ 2 ಹಾಗೂ ಜೇಸನ್ ಹೋಲ್ಡರ್ 27ಕ್ಕೆ 2 ವಿಕೆಟ್ ಪಡೆದರು ಪಂಜಾಬ್ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸುವಲ್ಲಿ ಸಫಲರಾದರು.