ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಹೊಸ ದಾಖಲೆ ನಿರ್ಮಾಣವಾಗುತ್ತಿದ್ದು, ಈ ಹಿಂದೆ ಉದ್ಭವವಾಗಿರುವ ಅನೇಕ ರೆಕಾರ್ಡ್ ಬ್ರೇಕ್ ಆಗುತ್ತಿವೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ 10 ವರ್ಷದ ಹಿಂದಿನ ಐಪಿಎಲ್ ದಾಖಲೆವೊಂದನ್ನ ಬ್ರೇಕ್ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಇನ್ನಿಂಗ್ಸ್ವೊಂದರಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಹಾಕಿರುವ ಕೀರ್ತಿ ಇದೀಗ ದೀಪಕ್ ಚಹರ್ ಪಾಲಾಗಿದೆ. ನಿನ್ನೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಎಸೆದ 4 ಓವರ್ಗಳಲ್ಲಿ ಬರೋಬ್ಬರಿ 20 ಎಸೆತ ಡಾಟ್ ಬಾಲ್ ಹಾಕಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಲ್ ಬಾಲ್ ಎಂಬ ದಾಖಲೆಯಾಗಿದೆ. ಇದಕ್ಕೂ ಮುನ್ನ 2009ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನೇಹ್ರಾ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ 19 ಡಾಟ್ ಬಾಲ್ ಎಸೆದಿದ್ದರು. ಅದೇ ವರ್ಷ ರಾಜಸ್ಥಾನದ ಮುನಾಫ್ ಪಟೇಲ್ ಕೆಕೆಆರ್ ವಿರುದ್ಧ 19 ಡಾಟ್ ಬಾಲ್ ಎಸೆದಿದ್ದರು.
ನಿನ್ನೆ ದೀಪಕ್ ಚಹರ್ ಎಸೆದ 4 ಓವರ್ಗಳಲ್ಲಿ ಕೇವಲ 20ರನ್ ಮೂಡಿ ಬಂದಿದ್ದವು. ಜತೆಗೆ ಅವರು ಪ್ರಮುಖ ಮೂರು ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.