ಹ್ಯಾಮಿಲ್ಟನ್: ವೆಸ್ಟ್ ಇಂಡೀಸ್ ತಂಡದ ಬೌಲರ್ ಕೆಮರ್ ರೋಚ್ ಅವರ ತಂದೆ ನಿಧನರಾಗಿದ್ದರು, ಆದರೂ ನೋವಿನ ನಡುವೆಯೂ ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿದು ಬೌಲಿಂಗ್ ಮಾಡಿ ಗಟ್ಟಿತನ ಮೆರೆದಿದ್ದಾರೆ.
ಇದೇ ಸಂದರ್ಭದಲ್ಲಿ ರೋಚ್ ತಂದೆಗೆ ಸಂತಾಪ ಸೂಚಿಸುವ ಸಲುವಾಗಿ ಎರಡೂ ತಂಡದ ಆಟಗಾರರು ತೋಳಿಗೆ ಕಪ್ಪುಪಟ್ಟಿ ಕಟ್ಟುಕೊಂಡು ಆಡಿದ್ದಾರೆ. ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಗುರುವಾರದಿಂದ ಮೊದಲ ಟಸ್ಟ್ ಪಂದ್ಯ ಶುರುವಾಗಿದೆ. ಆದರೆ, ಈ ಪಂದ್ಯಕ್ಕೆ ತಯಾರಿಯಲ್ಲಿದ್ದಾಗಲೇ ರೋಚ್ಗೆ ತಂದೆ ಸಾವಿನ ಆಘಾತಕಾರಿ ಸುದ್ದಿ ತಿಳಿದಿದೆ.
-
CWI extends deepest condolences to Kemar Roach and his family on the passing of his father.
— Windies Cricket (@windiescricket) December 3, 2020 " class="align-text-top noRightClick twitterSection" data="
Both the #MenInMaroon and the @BLACKCAPS teams wore black armbands on the opening day of the 1st Test in his honour.
More here⬇️https://t.co/qG8GtiO7h4 pic.twitter.com/nIwjfl3vq7
">CWI extends deepest condolences to Kemar Roach and his family on the passing of his father.
— Windies Cricket (@windiescricket) December 3, 2020
Both the #MenInMaroon and the @BLACKCAPS teams wore black armbands on the opening day of the 1st Test in his honour.
More here⬇️https://t.co/qG8GtiO7h4 pic.twitter.com/nIwjfl3vq7CWI extends deepest condolences to Kemar Roach and his family on the passing of his father.
— Windies Cricket (@windiescricket) December 3, 2020
Both the #MenInMaroon and the @BLACKCAPS teams wore black armbands on the opening day of the 1st Test in his honour.
More here⬇️https://t.co/qG8GtiO7h4 pic.twitter.com/nIwjfl3vq7
ಆದರೂ ಪಂದ್ಯದಲ್ಲಿ ಪಾಲ್ಗೊಂಡ ಅವರು ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಟಾಪ್ ಲಾಥಮ್(86) ವಿಕೆಟ್ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಲಾಥಮ್ ವಿಕೆಟ್ ಪಡೆಯುತ್ತಿದ್ದಂತೆ ನೆಲಕ್ಕೆ ಮಂಡಿಯೂರಿ ಕುಳಿತು ತಂದೆ ಗೌರವ ಸಮರ್ಪಿಸಿದರು.
ಈ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡದ ಮ್ಯಾನೇಜರ್ ರಾಲ್ ಲೂಯಿಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, " ಕ್ರಿಕೆಟ್ ವೆಸ್ಟ್ ಇಂಡೀಸ್ ಹಾಗೂ ವಿಂಡೀಸ್ ತಂಡದ ಪರವಾಗಿ ಕೆಮರ್ ಮತ್ತು ಅವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇವೆ, ಈ ಕಷ್ಟದ ಸಮಯದಲ್ಲಿ ಕೆಮರ್ಗೆ ನಮ್ಮ ಬೆಂಬಲ ಸಂಪೂರ್ಣ ನೀಡಲು ಬಯಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 243 ರನ್ಗಳಿಸಿದೆ. ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಮುರಿಯದ 3ನೇ ವಿಕೆಟ್ಗೆ 75 ರನ್ ಸೇರಿಸಿ 2ನೇ ದಿನದಾಟಕ್ಕೆ ಆಟ ಮುಂದುವರಿಸಿದ್ದಾರೆ. ವಿಲಿಯಮ್ಸನ್ 219 ಎಸೆತಗಳಲ್ಲಿ 16 ಬೌಂಡರಿ ಸಹಿತ 97 ರನ್, ಟೇಲರ್ 61 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ಗಳಿಸಿದ್ದಾರೆ.