ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಗೆ ಮೂವರು ನೂತನ ಸದಸ್ಯರು ಆಯ್ಕೆಗೊಂಡಿದ್ದು, ಮುಂದಿನ ಒಂದು ವರ್ಷಗಳ ಕಾಲ ಅವರು ಕೆಲಸ ನಿರ್ವಹಿಸಲಿದ್ದಾರೆ.
ಟೀಂ ಇಂಡಿಯಾ ಪುರುಷರು ಹಾಗೂ ಮಹಿಳಾ ತಂಡಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ, ಮಹಿಳಾ ತಂಡಕ್ಕೆ ಮುಖ್ಯ ಕೋಚ್ ಆಯ್ಕೆ ಮಾಡುವುದು ಇವರ ಕರ್ತವ್ಯವಾಗಿದೆ.
-
🚨News Alert 🚨
— BCCI (@BCCI) January 31, 2020 " class="align-text-top noRightClick twitterSection" data="
📰BCCI appoints 3-member Cricket Advisory Committee
Full Details here 👉👉 https://t.co/nMMbAUBtki pic.twitter.com/lnYSARUEXo
">🚨News Alert 🚨
— BCCI (@BCCI) January 31, 2020
📰BCCI appoints 3-member Cricket Advisory Committee
Full Details here 👉👉 https://t.co/nMMbAUBtki pic.twitter.com/lnYSARUEXo🚨News Alert 🚨
— BCCI (@BCCI) January 31, 2020
📰BCCI appoints 3-member Cricket Advisory Committee
Full Details here 👉👉 https://t.co/nMMbAUBtki pic.twitter.com/lnYSARUEXo
ರುದ್ರಪ್ರತಾಪ್ ಸಿಂಗ್, ಮದನ್ ಲಾಲ್ ಹಾಗೂ ಸುಲಕ್ಷನಾ ನಾಯಕ್ ಆಯ್ಕೆಯಾಗಿದ್ದು, ರುದ್ರಪ್ರತಾಪ್ ಸಿಂಗ್ ಅತಿ ಕಡಿಮೆ ವಯಸ್ಸಿನ ಸದ್ಯಸರಾಗಿ ಈ ಸಮಿತಿ ಸೇರಿಕೊಂಡಿದ್ದಾರೆ. ಆರ್ಪಿ ಸಿಂಗ್ 14 ಟೆಸ್ಟ್ ಪಂದ್ಯ, 58 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನಾಡಿದ್ದು, 2007ರಲ್ಲಿ ಟೀಂ ಇಂಡಿಯಾ ಟಿ-20 ವಿಶ್ವಕಪ್ ವಿಜೇತ ತಂಡದಲ್ಲಿ ಆರ್ಪಿ ಸಿಂಗ್ ಇದ್ದರು. ಇನ್ನು ಮದನ್ ಲಾಲ್ 39 ಟೆಸ್ಟ್, 67 ಏಕದಿನ ಪಂದ್ಯಗಳನ್ನಾಡಿದ್ದು, 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ವೇಳೆ ಇವರು ತಂಡದ ಸದಸ್ಯರಾಗಿದ್ದರು. ಇನ್ನು ನಾಯಕ್ 2ಟೆಸ್ಟ್, 46 ಏಕದಿನ ಹಾಗೂ 31 ಟಿ-20 ಪಂದ್ಯಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದಾರೆ.