ಪೋರ್ಟ್ ಆಫ್ ಸ್ಪೇನ್: ಭಾನುವಾರ ನಡೆದ ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡದಿದ್ದ ಭುವನೇಶ್ವರ್ ಕುಮಾರ್ 35ನೇ ಓವರ್ನಲ್ಲಿ ಪಡೆದ ಅದ್ಭುತ ಕ್ಯಾಚ್ ಮೂಲಕ ಪಂದ್ಯಕ್ಕೆ ತಿರುವು ತಂದುಕೊಟ್ಟರು.
ಭಾರತ ತಂಡ 2ನೇ ಏಕದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಆಲೋಚನೆಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿ 279 ರನ್ಗಳಿಸಿತ್ತು. ಆದರೆ, ವಿಂಡೀಸ್ ಚೇಸಿಂಗ್ ವೇಳೆ ಮಳೆ ಬಂದಿದ್ದರಿಂದ 4 ಓವರ್ ಕಡಿತ ಮಾಡಿ 46 ಓವರ್ಳಿಗೆ 270 ಟಾರ್ಗೆಟ್ ನೀಡಲಾಗಿತ್ತು.
ಒಂದು ಹಂತದಲ್ಲಿ 148 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸುಸ್ಥಿಯಲ್ಲಿದ್ದ ವಿಂಡೀಸ್ ತಂಡಕ್ಕೆ ಭುವಿ ಆಘಾತ ನೀಡಿದರು. 40 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಿಕೋಲಸ್ ಪೂರನ್ ವಿಕೆಟ್ ಪಡೆದ ಭುವಿ ಅದೇ ಓವರ್ನಲ್ಲೇ ಆಲ್ರೌಂಡರ್ ರಾಸ್ಟನ್ ಚೇಸ್ರನ್ನು ಕಾಟ್ ಅಂಡ್ ಬೌಲ್ಡ್ ಮಾಡಿದರು.
-
What a catch by #bhuvi @BhuviOfficial @BCCI pic.twitter.com/t9aHZBqMx3
— Prasad prabhudesai (@Prasadprabhude2) August 11, 2019 " class="align-text-top noRightClick twitterSection" data="
">What a catch by #bhuvi @BhuviOfficial @BCCI pic.twitter.com/t9aHZBqMx3
— Prasad prabhudesai (@Prasadprabhude2) August 11, 2019What a catch by #bhuvi @BhuviOfficial @BCCI pic.twitter.com/t9aHZBqMx3
— Prasad prabhudesai (@Prasadprabhude2) August 11, 2019
ಭುವನೇಶ್ವರ್ ಎಸೆತವನ್ನು ರಾಸ್ಟನ್ ಚೇಸ್ ಡಿಫೆಂಡ್ ಮಾಡಲು ಪ್ರಯತ್ನಿಸಿದಾಗ ಎಡ್ಜ್ ಆಯಿತು. ಇದನ್ನು ಗಮನಿಸಿದ ಭುವಿ ಎಡಭಾಗಕ್ಕೆ ಡೈವ್ ಮಾಡಿ ಒಂದೇ ಕೈಯಿಂದ ಕ್ಯಾಚ್ ಪಡೆದರು. ಒಂದೇ ಓವರ್ನಲ್ಲಿ ಇಬ್ಬರ ವಿಕೆಟ್ ಪಡೆದು ವಿಂಡೀಸ್ ಕೈಯಲ್ಲಿದ್ದ ಪಂದ್ಯವನ್ನು ಕಸಿದುಕೊಂಡರು.
ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 31 ರನ್ ನೀಡಿ 4 ವಿಕೆಟ್ ಪಡೆದು ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.