ETV Bharat / sports

ಲಂಕಾಗೆ ತವರಿನಲ್ಲೇ ಮುಖಭಂಗ: ಇಂಗ್ಲೆಂಡ್​ ವಿರುದ್ಧ 135ಕ್ಕೆ ಸಿಂಹಳೀಯರು ಆಲೌಟ್‌

ವಿಶ್ವ ಚಾಂಪಿಯನ್​ಶಿಪ್ ಭಾಗವಾಗಿ ತವರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್​ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 135 ರನ್​ಗಳಿಗೆ ಸರ್ವಪತನ ಕಂಡಿದೆ.

ಇಂಗ್ಲೆಂಡ್ vs ಶ್ರೀಲಂಕಾ
ಇಂಗ್ಲೆಂಡ್ vs ಶ್ರೀಲಂಕಾ
author img

By

Published : Jan 14, 2021, 3:55 PM IST

ಗಾಲೆ(ಶ್ರೀಲಂಕಾ): ಇಂಗ್ಲೆಂಡ್​ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಶ್ರೀಲಂಕಾ ತಂಡ ಕೇವಲ 135 ರನ್​ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಮುಖಭಂಗ ಅನುಭವಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಆರಂಭದಿಂದಲೇ ಪೆವಿಲಿಯನ್ ಪರೇಡ್​ ನಡೆಸಿತು. ಆರಂಭಿಕರಾಗಿ ಲಹಿರು ತಿರುಮನ್ನೆ ಕೇವಲ 4 ರನ್​ ಹಾಗೂ ಕುಸಾಲ್ ಮೆಂಡಿಸ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಕೇವಲ 10 ರನ್​ಗಳ ಅಂತರದಲ್ಲಿ ಕುಸಾಲ್​ ಪೆರೆರಾ ಕೂಡ ಡಾಮ್​ ಬೆಸ್​ ಬೌಲಿಂಗ್​ನಲ್ಲಿ ರೂಟ್​ಗೆ ಕ್ಯಾಚಿತ್ತು ಪೆವಿಲಿಯನ್​ ಸೇರಿಕೊಂಡರು.

25 ರನ್ನುಗಳಿಗೆ 3 ವಿಕೆಟ್​ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದ ಲಂಕಾ ತಂಡಕ್ಕೆ ಮ್ಯಾಥ್ಯೂಸ್​ (27) ಹಾಗೂ ಚಂಡಿಮಾಲ್ ​(28) 56 ರನ್​ಗಳ ಜೊತೆಯಾಟ ನೀಡಿದರು. ಆದರೆ ಇವರಿಬ್ಬರೂ ಔಟಾಗುತ್ತಿದ್ದಂತೆ ಬಂದಂತಹ ಬ್ಯಾಟ್ಸ್​ಮನ್​ಗಳು ಕ್ರೀಸ್​ಗೆ ಬಂದಷ್ಟೇ ವೇಗವಾಗಿ ವಾಪಸ್​ ತೆರಳಿದರು.

ಶನಾಕ 23, ಹಸರಂಗ 19, ಡಿಕ್ವೆಲ್ಲಾ 12, ದಿಲ್ರುವಾನ್ ಪೆರೆರಾ 0 ಹಾಗು ಎಂಬುಲ್ದೇನಿಯಾ ಕೂಡ ಸೊನ್ನೆ ಸುತ್ತಿದರು.

ಇಂಗ್ಲೆಂಡ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಡೊಮೆನಿಕ್ ಬೆಸ್​ 30 ರನ್ ನೀಡಿ 5 ವಿಕೆಟ್​ ಪಡೆದರು. ಇವರಿಗೆ ಸಾಥ್ ನೀಡಿದ ಸ್ಟುವರ್ಟ್​ ಬ್ರಾಡ್​ 20 ಕ್ಕೆ 3 ವಿಕೆಟ್​ ಹಾಗೂ ಜಾಕ್ ಲೀಚ್​ ಕೇವಲ 1 ವಿಕೆಟ್​ ಪಡೆದು ಮಿಂಚಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.