ಸಿಡ್ನಿ: ಆಸ್ಟ್ರೇಲಿಯಾದ ವೇಗದ ಬೌಲರ್ ಬೆನ್ ಲಾಗ್ಲಿನ್ ಬಿಗ್ ಬ್ಯಾಶ್ ಇತಿಹಾಸದಲ್ಲೇ 100 ವಿಕೆಟ್ ಸಾಧನೆ ಮಾಡಿದ ಮೊದಲ ಹಾಗೂ ಏಕೈಕ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಹೆಚ್ಚು ಪ್ರಸಿದ್ದಿಯಾಗಿರುವ 2019-20ರ ಬಿಗ್ಬ್ಯಾಶ್ ಲೀಗ್ನಲ್ಲಿ ಬ್ರಿಸ್ಬೇನ್ ಹೀಟ್ಸ್ ತಂಡದ ಪರ ಆಡುತ್ತಿರುವ ಬೆನ್ ಲಾಗ್ಲಿನ್ ಪರ್ತ್ ಸ್ಕಾಚರ್ಸ್ ತಂಡದ ವಿರುದ್ದ ವಿಕೆಟ್ಗಳ ಶತಕ ಬಾರಿಸಿದ್ದಾರೆ.
-
Ben Laughlin becomes the first bowler to take 100 @BBL wickets. #BBL09 pic.twitter.com/v1haatnuFv
— Doordarshan Sports (@ddsportschannel) January 1, 2020 " class="align-text-top noRightClick twitterSection" data="
">Ben Laughlin becomes the first bowler to take 100 @BBL wickets. #BBL09 pic.twitter.com/v1haatnuFv
— Doordarshan Sports (@ddsportschannel) January 1, 2020Ben Laughlin becomes the first bowler to take 100 @BBL wickets. #BBL09 pic.twitter.com/v1haatnuFv
— Doordarshan Sports (@ddsportschannel) January 1, 2020
ಬಿಬಿಎಲ್ ಇತಿಹಾಸದಲ್ಲಿ 79 ಪಂದ್ಯಗಳನ್ನಾಡಿದ್ದು, 100 ವಿಕೆಟ್ ಪಡೆದಿದ್ದಾರೆ. ಇವರ ನಂತರ ಸಿಡ್ನಿ ಸಿಕ್ಸರ್ನ ಸೀನ್ ಅಬಾಟ್ 74 ಪಂದ್ಯಗಳಲ್ಲಿ 96 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದಾರೆ. ಕೇನ್ ರಿಚರ್ಡ್ಸನ್ 84 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಲಾಗ್ಲಿನ್ ಪರ್ತ್ ಸ್ಕಾಚರ್ಸ್ನ ಆಶ್ಟನ್ ಅಗರ್ ವಿಕೆಟ್ ಪಡೆಯುವ ಮೂಲಕ ತಮ್ಮ 100 ವಿಕೆಟ್ ಸಾಧನೆ ಮಾಡಿದ್ದರು. ದುರದೃಷ್ಟವಶಾತ್ 168 ರನ್ ಚೇಸ್ ಮಾಡಲಾಗದೆ ಬ್ರಿಸ್ಬೇನ್ ಹೀಟ್ 40 ರನ್ಗಳ ಸೋಲನುಭವಿಸಿತು.