ETV Bharat / sports

ಕ್ವಾರಂಟೈನ್​ ಅವಧಿ ವಿಸ್ತರಣೆ: ಶ್ರೀಲಂಕಾ ಪ್ರವಾಸದಿಂದ ಬಾಂಗ್ಲಾದೇಶ ಹಿಂದೆ ಸರಿಯುವ ಸಾಧ್ಯತೆ

author img

By

Published : Sep 15, 2020, 7:17 PM IST

ಶ್ರೀಲಂಕಾ ಕ್ರಿಕೆಟ್​ ಕ್ವಾರಂಟೈನ್ ದಿನಗಳನ್ನು 7 ರಿಂದ 14 ದಿನಗಳಿಗೆ ಹೆಚ್ಚಿಸಿದ ನಂತರ ಪ್ರವಾಸದ ಬಗ್ಗೆ ಚರ್ಚಿಸಿರುವ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್​ ಎಸ್​ಎಲ್​ಸಿಯ ನಿಯಮಗಳು ಮತ್ತು ಷರತ್ತುಗಳು ನಮಗೆ ಹತ್ತಿರವಾಗಿಲ್ಲ ಎಂದು ಹೇಳಿದ್ದಾರೆ.

ಶ್ರೀಲಂಕಾ -ಬಾಂಗ್ಲಾದೇಶ ಶ್ರೀಲಂಕಾ -ಬಾಂಗ್ಲಾದೇಶ ಟೆಸ್ಟ್​ ಸರಣಿ
ಶ್ರೀಲಂಕಾ -ಬಾಂಗ್ಲಾದೇಶ ಟೆಸ್ಟ್​ ಸರಣಿ

ನವದೆಹಲಿ: ಶ್ರೀಲಂಕಾದಲ್ಲಿ ಕೋವಿಡ್​ -19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕ್ವಾರಂಟೈನ್ ಅವಧಿಯನ್ನು ಹೆಚ್ಚಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ . ಆದರೆ ಈ ನಿರ್ಧಾರದಿಂದ ಬಾಂಗ್ಲಾದೇಶ ತಂಡ ಶ್ರೀಲಂಕಾ ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಶ್ರೀಲಂಕಾ ಕ್ರಿಕೆಟ್​ ಕ್ವಾರಂಟೈನ್ ದಿನಗಳನ್ನು 7 ರಿಂದ 14 ದಿನಗಳಿಗೆ ಹೆಚ್ಚಿಸಿದ ನಂತರ ಪ್ರವಾಸದ ಬಗ್ಗೆ ಚರ್ಚಿಸಿರುವ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್​ ಎಸ್​ಎಲ್​ಸಿಯ ನಿಯಮಗಳು ಮತ್ತು ಷರತ್ತುಗಳು ನಮಗೆ ಹತ್ತಿರವಾಗಿಲ್ಲ ಎಂದು ಹೇಳಿದ್ದಾರೆ.

ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಸರಣಿಯ ಭಾಗವಾಗಿ ಬಾಂಗ್ಲಾದೇಶ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿತ್ತು. ಶ್ರೀಲಂಕಾದ ಕೊರೊನಾ ಪ್ರೋಟೋಕಾಲ್​ಗಳ ಅನ್ವಯ ತರಬೇತಿ ಆರಂಭಿಸುವ ಮುನ್ನ ಒಂದು ವಾರ ಕ್ವಾರಂಟೈನ್​ನಲ್ಲಿರಬೇಕು ಎಂದು ಬಾಂಗ್ಲಾದೇಶದ ಆಟಗಾರರಿಗೆ ಮೊದಲು ಮಾಹಿತಿ ನೀಡಿತ್ತು.

ಆದರೀಗ, ಎಸ್​ಎಲ್​ಸಿ ಕ್ವಾರಂಟೈನ್​ ಅವಧಿಯನ್ನು ಹೆಚ್ಚಿಸಿದೆ. ಹಾಗಾಗಿ ನಮ್ಮ ತಂಡ ಈ ನಿಯಮಗಳ ನಡುವೆ ಆಡಲು ಸಾಧ್ಯವಿಲ್ಲ ಎಂದು ಹಸನ್​ ತಿಳಿಸಿದ್ದಾರೆ.

" ಎಸ್​ಎಲ್​ಸಿ ಈಗಾಗಲೆ ಡೊಮೆಸ್ಟಿಕ್ ಕ್ರಿಕೆಟ್​ ಆರಂಭಿಸಿರುವುದನ್ನು ಕಾಣಬಹುದು. ಆದರೆ ನಾವು ದೊಡ್ಡ ತಂಡದೊಂದಿಗೆ ಬಂದು ಅಲ್ಲಿ ತರಬೇತಿ ಶಿಬಿರ ನಡೆಸುತ್ತೇವೆ ಎಂದು ತಿಳಿಸಿದೆವು. ಆದರೆ ನಮ್ಮ ಆಟಗಾರರು ಆರೇಳು ತಿಂಗಳಿನಿಂದ ಚಟುವಟಿಕೆ ರಹಿತಾಗಿದ್ದರೂ, ಅವರು ನಮಗೆ ತರಬೇತಿಗೆ ಅವಕಾಶ ನೀಡುತ್ತಿಲ್ಲ. ಅದರಲ್ಲೂ ಅವರೂ ನೆಟ್​ ಬೌಲರ್​ಗಳನ್ನು ಕರೆದೊಯ್ಯಲು ಬಿಡುತ್ತಿಲ್ಲ, ನಮಗೆ ಅಲ್ಲಿಯೂ ಕೂಡ ಯಾವುದೇ ನೆಟ್​ ಬೌಲರ್​ಗಳನ್ನು ಒದಗಿಸಲು ಒಪ್ಪಿಲ್ಲ. ಹೀಗಿರುವಾಗ ನಾವು ತರಬೇತಿಯಿಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡುವುದಾದರೂ ಹೇಗೆ? ಹಾಗಾಗಿ ಇದು ನಮಗೆ ಸಾಧ್ಯವಿಲ್ಲ ಎಂದು ಹಸನ್​ ಹೇಳಿದ್ದಾರೆ.

ಬಿಸಿಬಿ , ಶ್ರೀಲಂಕಾ ಬೋರ್ಡ್​ನ ನಿಯಮಗಳನ್ನು ತಿರಸ್ಕರಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಲಂಕಾದ ಕ್ರೀಡಾ ಸಚಿವಾ ನಮಲ್ ರಾಜಪಕ್ಷ " ಕೋವಿಡ್​ 19 ತಡೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಅದಾಗ್ಯೂ ಕ್ರಿಕೆಟ್​ಗೆ ವಿಶೇಷ ಆಧ್ಯತೆಯನ್ನು ನೀಡುವ ಸಲುವಾಗಿ ತಾವೂ ಕೋವಿಡ್​ 19 ಟಾಸ್ಕ್​ಫೊರ್ಸ್​ ಜೊತೆ ಮಾತನಾಡಲು ಎಸ್​ಎಲ್​ಸಿಗೆ ತಿಳಿಸುತ್ತೇನೆ. ಜೊತೆಗೆ ಬಿಸಿಬಿಗೆ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಲು ಸೂಚಿಸುತ್ತೇನೆ" ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.