ETV Bharat / sports

ಮುಖ್ಯ ಕೋಚ್​, ಬೌಲಿಂಗ್​ ಹಾಗೂ ಫೀಲ್ಡಿಂಗ್​ ಕೋಚ್​ಗಾಗಿ ಹೊಸ ಅರ್ಜಿ... ರವಿಶಾಸ್ತ್ರಿಗೆ ಕೊಕ್​!? - ಕೋಚ್​ ರವಿಶಾಸ್ತ್ರಿ

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಸೋಲುತ್ತಿದ್ದಂತೆ ಬಿಸಿಸಿಐ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದು, ಇದೀಗ ತಂಡದ ಸಹಾಯಕ ಸಿಬ್ಬಂದಿ ಸಹ ಬದಲಾವಣೆಯಾಗಲಿದ್ದಾರೆ.

ರವಿಶಾಸ್ತ್ರಿ
author img

By

Published : Jul 15, 2019, 8:15 PM IST

ನವದೆಹಲಿ: ಲಂಡನ್​​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​​ನ ಸೆಮಿಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಅಭಿಯಾನ ಮುಗಿಸಿದೆ. ಇದೀಗ ಬಿಸಿಸಿಐ, ತಂಡದ ಜತೆಗೆ ಮುಖ್ಯ ಕೋಚ್​, ಸಹಾಯಕ ಕೋಚ್​​ಗಳ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿ, ಬೌಲಿಂಗ್​ ಕೋಚ್​​ ಭರತ್​ ಅರುಣ್​ ಹಾಗೂ ಬ್ಯಾಟಿಂಗ್​ ಕೋಚ್​​ ಸಂಜಯ್​ ಬಂಗಾರ್​ ಅವರ ಅವಧಿ ಮುಕ್ತಾಯಗೊಂಡಿದ್ದು, ವಿಶ್ವಕಪ್​ ದೃಷ್ಠಿಯಿಂದ 45 ದಿನಗಳ ಕಾಲ ಹುದ್ದೆಯ ಅವಧಿ ವಿಸ್ತರಣೆ ಮಾಡಲಾಗಿತ್ತು. ಅದು ಮುಕ್ತಾಯಗೊಳ್ಳಲು ಕೆಲ ದಿನಗಳು ಮಾತ್ರ ಬಾಕಿ ಇರುವ ಕಾರಣ ಬಿಸಿಸಿಐ ವಿವಿಧ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಆಹ್ವಾನ ಮಾಡಲು ಮುಂದಾಗಿದೆ.

BCCI
ಟೀಂ ಇಂಡಿಯಾ

ಆಗಸ್ಟ್​ 3ರಿಂದ ಸೆಪ್ಟೆಂಬರ್​​ 3ರವರೆಗೆ ವೆಸ್ಟ್​ ಇಂಡೀಸ್​ ಟೂರ್​ ಮಾಡಲಿರುವ ಟೀಂ ಇಂಡಿಯಾ, ತದನಂತರ ಸೆಪ್ಟೆಂಬರ್​​ 15ರಿಂದ ಭಾರತದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ವೇಳೆಗೆ ತಂಡದ ಕೋಚ್​, ಬೌಲಿಂಗ್​ ಹಾಗೂ ಫೀಲ್ಡಿಂಗ್​ ಕೋಚ್​​ ಹುದ್ದೆಗಾಗಿ ಅರ್ಜಿ ಆಹ್ವಾನ ಮಾಡಲು ಬಿಸಿಸಿಐ ನಿರ್ಧರಿಸಿದೆ. ಇನ್ನು ರವಿಶಾಸ್ತ್ರಿ, ಭರತ್​ ಅರುಣ್​, ಸಂಜಯ್​ ಬಂಗಾರ್​ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಟೀಂ ಮ್ಯಾನೇಜರ್​ ಹಾಗೂ ಫಿಸಿಯೋ ಹುದ್ದೆಗೆ ಬಿಸಿಸಿಐ ಹೊಸದಾಗಿ ಅರ್ಜಿ ಆಹ್ವಾನ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

2017ರಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ ತಂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಮಾತ್ರ ತಂಡ ಯಶಸ್ವಿಯಾಗಿದೆ.

Intro:Body:

ಮುಖ್ಯ ಕೋಚ್​, ಬೌಲಿಂಗ್​ ಹಾಗೂ ಫೀಲ್ಡಿಂಗ್​ ಕೋಚ್​ಗೆ  ಹೊಸ ಅರ್ಜಿ... ಕೋಚ್​ ರವಿಶಾಸ್ತ್ರಿಗೆ ಕೊಕ್​!? 

ನವದೆಹಲಿ: ಲಂಡನ್​​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​​ನ ಸೆಮಿಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಅಭಿಯಾನಕ್ಕೆ ವಿದಾಯ ಹೇಳಿತ್ತು. ಇದೀಗ ಬಿಸಿಸಿಐ ತಂಡ ಹಾಗೂ ಕೋಚ್​, ಸಹಾಯಕ ಕೋಚ್​​ಗಳ ಹುದ್ದೆಯಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. 

ಈಗಾಗಲೇ ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿ, ಬೌಲಿಂಗ್​ ಕೋಚ್​​ ಭರತ್​ ಅರುಣ್​ ಹಾಗೂ ಬ್ಯಾಟಿಂಗ್​ ಕೋಚ್​​ ಸಂಜಯ್​ ಬಂಗಾರ್​ ಅವರ ಅವಧಿ ಮುಕ್ತಾಯಗೊಂಡಿದ್ದು, ವಿಶ್ವಕಪ್​ ದೃಷ್ಠಿಯಿಂದ 45 ದಿನಗಳ ಕಾಲ ಹುದ್ದೆಯ ಅವಧಿ ವಿಸ್ತರಣೆ ಮಾಡಲಾಗಿತ್ತು. ಅದು ಮುಕ್ತಾಯಗೊಳ್ಳಲು ಕೆಲ ದಿನಗಳು ಮಾತ್ರ ಬಾಕಿ ಇರುವ ಕಾರಣ, ಬಿಸಿಸಿಐ ವಿವಿಧ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಆಹ್ವಾನ ಮಾಡಲು ಮುಂದಾಗಿದೆ. 

ಅಗಸ್ಟ್​ 3ರಿಂದ ಸೆಪ್ಟೆಂಬರ್​​ 3ರವರೆಗೆ ವೆಸ್ಟ್​ ಇಂಡೀಸ್​ ಟೂರ್​ ಮಾಡಲಿರುವ ಟೀಂ ಇಂಡಿಯಾ, ತದನಂತರ ಸೆಪ್ಟೆಂಬರ್​​ 15ರಿಂದ ಭಾರತದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ವೇಳೆಗೆ ತಂಡದ ಕೋಚ್​,ಬೌಲಿಂಗ್​ ಹಾಗೂ ಫೀಲ್ಡಿಂಗ್​ ಕೋಚ್​​ ಹುದ್ದೆಗೆ ಅರ್ಜಿ ಆಹ್ವಾನ ಮಾಡಲು ಬಿಸಿಸಿಐ ನಿರ್ಧರಿಸಿದೆ. ಇನ್ನು ರವಿಶಾಸ್ತ್ರಿ, ಭರತ್​ ಅರುಣ್​, ಸಂಜಯ್​ ಬಂಗಾರ್​ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಟೀಂ ಮ್ಯಾನೇಜರ್​ ಹಾಗೂ ಫಿಸಿಯೋ ಹುದ್ದೆಗೆ ಬಿಸಿಸಿಐ ಹೊಸದಾಗಿ ಅರ್ಜಿ ಆಹ್ವಾನ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. 

2017ರಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದು, ಅವರ ನೇತೃತ್ವದಲ್ಲಿ ತಂಡ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಮಾತ್ರ ತಂಡ ಯಶಸ್ವಿಯಾಗಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.