ETV Bharat / sports

ಯುಎಇಗೆ ಐಪಿಎಲ್​ ಸ್ಥಳಾಂತರ: ಕೇಂದ್ರ ಸರ್ಕಾರದ ಅನುಮತಿ ಕೋರಿದ ಬಿಸಿಸಿಐ - ಕೊರೊನಾ ವೈರಸ್​

ಕೋವಿಡ್​ 19 ಭೀತಿಯ ಕಾರಣ ಐಸಿಸಿ ಸೋಮವಾರದ ವರ್ಚುವಲ್​ ಮೀಟಿಂಗ್​ನಲ್ಲಿ 2020 ರ ಟಿ-20 ವಿಶ್ವಕಪ್​ ಅನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿತ್ತು. ಈ ನಿರ್ಧಾರ ಹೊರಬರುತ್ತಿದ್ದಂತೆ ಬಿಸಿಸಿಐ ಐಪಿಎಲ್​ ಸಿದ್ದತೆಯನ್ನು ಆರಂಭಿಸಿದೆ.

ಯುಎಇಗೆ ಐಪಿಎಲ್​ ಸ್ಥಳಾಂತರ
ಯುಎಇಗೆ ಐಪಿಎಲ್​ ಸ್ಥಳಾಂತರ
author img

By

Published : Jul 22, 2020, 1:03 PM IST

ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020 ಟಿ -20 ವಿಶ್ವಕಪ್ ಅನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಈ ವರ್ಷದ ಕೊನೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರದ ಅನುಮೋದನೆಗೆ ಕೋರಿಕೆ ಸಲ್ಲಿಸಿದೆ.

ಕೋವಿಡ್​ -19 ಭೀತಿಯ ಕಾರಣ ಐಸಿಸಿ ಸೋಮವಾರದ ವರ್ಚುವಲ್​ ಮೀಟಿಂಗ್​ನಲ್ಲಿ 2020ರ ಟಿ-20 ವಿಶ್ವಕಪ್​ ಅನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿತ್ತು. ಈ ನಿರ್ಧಾರ ಹೊರಬರುತ್ತಿದ್ದಂತೆ ಕಾಯುತ್ತಿದ್ದ ಬಿಸಿಸಿಐ ಐಪಿಎಲ್​ ಸಿದ್ದತೆ ಆರಂಭಿಸಿದೆ.

ಈ ಕುರಿತು ಮಾತನಾಡಿರುವ ಐಪಿಎಲ್​ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್​ ಪಟೇಲ್​, "ಯುಎಇಗೆ ಐಪಿಎಲ್​ ಸ್ಥಳಾಂತರ ಮಾಡಲು ಕೇಂದ್ರ ಸರ್ಕಾರಕ್ಕೆ ಇಂದು ಬೆಳಗ್ಗೆ ಔಪಾಚಾರಿಕವಾಗಿ ಅನುಮತಿ ಕೋರಿದ್ದೇವೆ. ಸರ್ಕಾರದ ಪ್ರತಿಕ್ರಿಯೆಯನ್ನು ಗಮನಿಸಿ , ಆಡಳಿತ ಮಂಡಳಿ ಲೀಗ್​ನ ವೇಳಾಪಟ್ಟಿ ಅಂತಿಮಗೊಳಿಸಲಿದೆ" ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ಸಂಜೆ 2020ರ ಟಿ-20 ವಿಶ್ವಕಪ್ ಅನ್ನು 2022 ಕ್ಕೆ ಮುಂದೂಡಿತ್ತು. ಐಸಿಸಿ ಈ ಘೋಷಣೆ ಮಾಡುತ್ತಿದ್ದಂತೆ ಇತ್ತ ಬಿಸಿಸಿಐ ಐಪಿಎಲ್​ ಸಿದ್ದತೆ ನಡೆಸಲು ಅಖಾಡಕ್ಕೆ ದುಮುಕಿದ್ದು, ಈಗಾಗಲೆ ಲೀಗ್​ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾರಂಭಿಸಿದೆ.

ಪ್ರಸಾರಕರ ಜೊತೆ ಮಾತುಕತೆ ನಡೆಸಿದ ನಂತರ್​ ಸೆಪ್ಟೆಂಬರ್​ 26ರಿಂದ ನವೆಂಬರ್​ 7ರವರೆಗೆ ಅಥವಾ ಸೆಪ್ಟೆಂಬರ್ 26ರಿಂದ ನವೆಂಬರ್​ 14ರ ಮಧ್ಯೆ ಐಪಿಎಲ್​ ನಡೆಸಲಾಗುತ್ತದೆಯೇ ಎಂಬ ಗೊಂದಲದ ಬಗ್ಗೆ ಪಟೇಲ್​ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.