ETV Bharat / sports

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕನ್ನಡಿಗ ಸುನೀಲ್​ ಜೋಶಿ ಆಯ್ಕೆ - India selector

ಕನ್ನಡಿಗ ಸುನೀಲ್​ ಜೋಶಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ, ಪಂಜಾಬ್​ನ ಹರ್ವಿಂದರ್​ ಸಿಂಗ್​ ಕೇಂದ್ರ ವಲಯ ಆಯ್ಕೆಗಾರರಾಗಿ ಬುಧವಾರ ಆಯ್ಕೆಯಾಗಿದ್ದಾರೆ.

Sunil Joshi as new chairman of selectors
ಸುನಿಲ್​ ಜೋಶಿ
author img

By

Published : Mar 4, 2020, 6:44 PM IST

Updated : Mar 4, 2020, 7:15 PM IST

ಮುಂಬೈ: ಕರ್ನಾಟಕದ ಮಾಜಿ ಸ್ಪಿನ್ನರ್​ ಸುನೀಲ್ ಜೋಶಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

ಭಾರತದ ಮಾಜಿ ಆಟಗಾರರಾದ ಮದನ್ ಲಾಲ್, ಆರ್‌.ಪಿ.ಸಿಂಗ್ ಮತ್ತು ಮಾಜಿ ಆಟಗಾರ್ತಿ ಸುಲಕ್ಷಣ ನಾಯ್ಕ್ ಅವರ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಬುಧವಾರ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರವಲಯದ ಆಯ್ಕೆಗಾರ ಸ್ಥಾನಕ್ಕೆ ಸಂದರ್ಶನ ನಡೆಸಿತ್ತು. ಈ ಸಂದರ್ಶನದಲ್ಲಿ ಕನ್ನಡಿಗ ಸುನೀಲ್​ ಜೋಶಿ ಅವರು ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ, ಮಾಜಿ ವೇಗದ ಬೌಲರ್ ಹರ್ವಿಂದರ್ ಸಿಂಗ್ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ. ಆದರೆ ಮತ್ತೋರ್ವ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರು ಮೂರನೇ ಹಂತದ ಸಂದರ್ಶನದಲ್ಲಿ ತಿರಸ್ಕೃತರಾಗಿದ್ದಾರೆ.

ಅಂತಿಮ​ ಸುತ್ತಿನಲ್ಲಿ ಕನ್ನಡಿಗರಾದ ಸುನೀಲ್ ಜೋಶಿ, ವೆಂಕಟೇಶ್ ಪ್ರಸಾದ್ ಸೇರಿದಂತೆ ಐವರು ಮಾಜಿ ಆಟಗಾರರಿದ್ದರು.

ಕಳೆದೆರಡು ವರ್ಷಗಳಿಂದ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಎಂ.ಎಸ್.​ಕೆ ಪ್ರಸಾದ್​ ಸ್ಥಾನವನ್ನು ಸುನೀಲ್ ಜೋಶಿ ಹಾಗೂ ಗಗನ್ ಖೋಡಾ ಸ್ಥಾನವನ್ನು ಹರ್ವಿಂದರ್ ಸಿಂಗ್ ತುಂಬಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತಿಳಿಸಿದ್ದಾರೆ.

49 ವರ್ಷದ ಜೋಶಿ ಭಾರತ ತಂಡದ ಪರ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಟೆಸ್ಟ್​ನಲ್ಲಿ 41 ಹಾಗೂ ಏಕದಿನ ಕ್ರಿಕೆಟ್​ನಲ್ಲಿ 69 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ನು ಕರ್ನಾಟಕ ತಂಡದ ಪರ 160 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, ಇದರಲ್ಲಿ 616 ವಿಕೆಟ್ ಕಬಳಿಸಿದ್ದಾರೆ. 163 ಲಿಸ್ಟ್​ ಎ ಪಂದ್ಯಗಳಿಂದ 192 ವಿಕೆಟ್​ ಪಡೆದು ರಣಜಿ ಇತಿಹಾಸದ ಅತ್ಯಂತ ಯಶಸ್ವಿ ಬೌಲರ್​ ಎನಿಸಿಕೊಂಡಿದ್ದಾರೆ.

Last Updated : Mar 4, 2020, 7:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.