ETV Bharat / sports

ಮಾಜಿ ಕ್ರಿಕೆಟಿಗ ಸಿ.ಕೆ.ಭಾಸ್ಕರನ್ ನಾಯರ್ ನಿಧನಕ್ಕೆ ಬಿಸಿಸಿಐ ಸಂತಾಪ

ಸಿ.ಕೆ.ಭಾಸ್ಕರನ್ ನಾಯರ್ 1965 ರಲ್ಲಿ ಸಿಲೋನ್ (ಈಗ ಶ್ರೀಲಂಕಾ) ವಿರುದ್ಧ ಆಡಿದ ಮನ್ಸೂರ್ ಅಲಿ ಖಾನ್ ಪಟೌಡಿ ನೇತೃತ್ವದ ಭಾರತೀಯ ತಂಡದಲ್ಲಿ ಭಾಗವಾಗಿದ್ದರು. ಬಲಗೈ ಮಧ್ಯಮ ವೇಗದ ಬೌಲರ್ ಸಿ.ಕೆ.ಭಾಸ್ಕರನ್ ನಾಯರ್ ಆ ಪಂದ್ಯದಲ್ಲಿ 18 ಓವರ್​ರ ಎಸೆದು 51 ರನ್ ನೀಡಿ ಎರಡು ವಿಕೆಟ್ ಪಡೆದು ಮಿಂಚಿದ್ದರು.

BCCI mourns demise of former Kerala cricketer CK Bhaskaran Nair
ಮಾಜಿ ಕ್ರಿಕೆಟಿಗ ಸಿ.ಕೆ.ಭಾಸ್ಕರನ್ ನಾಯರ್ ನಿಧನಕ್ಕೆ ಬಿಸಿಸಿಐ ಸಂತಾಪ
author img

By

Published : Nov 24, 2020, 11:16 AM IST

ಮುಂಬೈ (ಮಹಾರಾಷ್ಟ್ರ): ಕೇರಳ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಸಿ.ಕೆ.ಭಾಸ್ಕರನ್ ನಾಯರ್ ಅವರ ನಿಧನಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಸಂತಾಪ ಸೂಚಿಸಿದೆ.

79 ವರ್ಷದ ಸಿ.ಕೆ.ಭಾಸ್ಕರನ್ ನಾಯರ್ ಅವರು ನವೆಂಬರ್ 21 ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ (ಯುಎಸ್ಎ) ಹೂಸ್ಟನ್​​​ನಲ್ಲಿ ನಿಧನರಾಗಿದ್ದರು.

ಸಿ.ಕೆ.ಭಾಸ್ಕರನ್ ನಾಯರ್ ಅವರು 1941 ರಲ್ಲಿ ತಲಶೇರಿಯಲ್ಲಿ ಜನಿಸಿದರು. ಕೇರಳ ರಣಜಿ ತಂಡದ ಸದಸ್ಯರಾಗಿದ್ದರು. 1957 ರಿಂದ 1969 ರವರೆಗೆ 12 ವರ್ಷಗಳ ಕಾಲ ಕ್ರಿಕೆಟ್​​ ಆಡಿದ್ದ ಅವರು, 42 ಪ್ರಥಮ ದರ್ಜೆ ಪಂದ್ಯಗಳಲ್ಲಿ 106 ವಿಕೆಟ್​ ಪಡೆದಿದ್ದು, ಇದರಲ್ಲಿ ಐದು ಬಾರಿ 5 ಐದು ವಿಕೆಟ್ ಗೊಂಚಲು ಪಡೆದಿದ್ದರು. ಬ್ಯಾಟಿಂಗ್​​ನಲ್ಲೂ ಉತ್ತಮ ಸಾಮರ್ಥ್ಯ ಹೊಂದಿದ್ದ ಅವರು 580 ರನ್ ಗಳಿಸಿದ್ದಾರೆ. 76 * ಇವರು ಗಳಿಸಿದ ಗರಿಷ್ಠ ಸ್ಕೋರ್.

ಜಾರ್ಜ್ ಅಬ್ರಹಾಂ, ಬಾಲನ್ ಪಂಡಿತ್, ಸಾಂತಿ ಆರನ್, ಆಚರತ್ ಬಾಬು, ಕೇಲಪ್ಪನ್ ತಂಪುರಾನ್, ಡಿ ರಾಮ್, ಆರ್.ವಿ.ಥಂಪುರನ್, ಮತ್ತು ಹೆಚ್. ದೇವರಾಜ್ ಅವರಂತಹ ಕೇರಳ ತಂಡದ ಪ್ರಮುಖ ಸದಸ್ಯರಲ್ಲಿ ಸಿ.ಕೆ.ಭಾಸ್ಕರನ್ ನಾಯರ್ ಒಬ್ಬರು.

ಅವರು 1965 ರಲ್ಲಿ ಸಿಲೋನ್ (ಈಗ ಶ್ರೀಲಂಕಾ) ವಿರುದ್ಧ ಆಡಿದ ಮನ್ಸೂರ್ ಅಲಿ ಖಾನ್ ಪಟೌಡಿ ನೇತೃತ್ವದ ಭಾರತೀಯ ತಂಡದಲ್ಲಿ ಭಾಗವಾಗಿದ್ದರು. ಬಲಗೈ ಮಧ್ಯಮ ವೇಗದ ಬೌಲರ್ ಸಿ.ಕೆ.ಭಾಸ್ಕರನ್ ನಾಯರ್ ಆ ಪಂದ್ಯದಲ್ಲಿ 18 ಓವರ್​ರ ಎಸೆದು 51 ರನ್ ನೀಡಿ ಎರಡು ವಿಕೆಟ್ ಪಡೆದು ಮಿಂಚಿದ್ದರು.

ಕ್ರಿಕೆಟ್ ವೃತ್ತಿಜೀವನವನ್ನು ಮುಗಿಸಿದ ನಂತರ, ಅವರು ಯುಎಸ್ಎದಲ್ಲಿ ಮೆಡಿಸಿನ್ ಅಭ್ಯಾಸ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.