ನವದೆಹಲಿ : ವರ್ಷಾರಂಭದಲ್ಲಿ ನಡೆದಿದ್ದ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿತ್ತು. ಶೆಫಾಲಿ ವರ್ಮಾ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಹಾಗೂ ಪೂನಮ್ ಯಾದವ್ ಪ್ರಮುಖ ಪಾತ್ರವಹಿಸಿದ್ದರು. ಇದೀಗ 2020 ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುವ ಸಾಧ್ಯತೆ ಇದೆ.
ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ದೀಪ್ತಿ ಶರ್ಮಾ ಹಾಗೂ ಶಿಖಾ ಪಾಂಡೆಯವರ ಹೆಸರು ಈಗಾಗಲೇ ಬಿಸಿಸಿಐ ಪದಾಧಿಕಾರಿಗಳಿಗೆ ರವಾನೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ನೀಡಿದ ಉತ್ತಮ ಪ್ರದರ್ಶನ ಮಾತ್ರವನ್ನು ಪರಿಗಣಿಸಿದೆ ಅವರ ಕಳೆದ ಆವೃತ್ತಿಯಲ್ಲಿ ನೀಡಿದ ಸ್ಥಿರ ಪ್ರದರ್ಶನವನ್ನು ಪರಿಗಣಿಸಿ ಶಿಖಾ ಪಾಂಡೆ ಹಾಗೂ ದೀಪ್ತಿ ಶರ್ಮಾ ಅವರ ಹೆಸರನ್ನು ಕಾರ್ಯಾಚರಣೆ ತಂಡ ಪದಾಧಿಕಾರಿಗಳಿಗೆ ಹೆಸರನ್ನು ನೀಡಿದ್ದು, ಅರ್ಜುನ ಪ್ರಶಸ್ತಿಗಾಗಿ ಕ್ರೀಡಾ ಸಚಿವಾಲಯಕ್ಕೆ ರವಾನಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಶಿಖಾ ಪಾಂಡೆ ಟೂರ್ನಿಯಲ್ಲಿ 7 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 116 ರನ್ 4 ವಿಕೆಟ್ ಪಡೆದಿದ್ದರು. ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದ್ದ ಭಾರತ ತಂಡ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 85 ರನ್ಗಳಿಂದ ಸೋಲನುಭವಿಸಿ ನಿರಾಶೆ ಅನುಭವಿಸಿತ್ತು. 2020ರ ಕ್ರೀಡಾ ಪ್ರಶಸ್ತಿಗಳಿಗೆ ಆನ್ಲೈನ್ ಮೂಲಕ ಅರ್ಜಿಸಲ್ಲಿಸಲು ಮೇ 5ರಂದು ಕ್ರೀಡಾ ಸಂಸ್ಥೆಗಳಿಗೆ ಸಚಿವಾಲಯ ಸೂಚನೆ ನೀಡಿತ್ತು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 3 ಆಗಿದೆ. ಕೋವಿಡ್-19 ಲಾಕ್ಡೌನ್ ಇರುವುದರಿಂದ ಸಂಬಂಧಪಟ್ಟ ಕ್ರೀಡಾ ಸಂಸ್ಥೆಗಳು ಆನ್ಲೈನ್ ಮೂಲಕ ಸ್ಕ್ಯಾನ್ ಕಾಪಿಗಳನ್ನುಇ-ಮೇಲ್ ವಿಳಾಸಕ್ಕೆ ಕಳುಹಿಸಲು ಸೂಚನೆ ನೀಡಿದೆ. ಕೊನೆಯ ದಿನಾಂಕ ಮೀರಿ ಬರುವ ಅರ್ಜಿಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಕ್ರೀಡಾಸಚಿವಾಲಯ ಸ್ಪಷ್ಟಪಡಿಸಿದೆ.