ಮುಂಬೈ: ಮುಂದಿನ ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಗಮನದಲ್ಲಿಟ್ಟುಕೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗಾಗಿ 15 ಸದಸ್ಯರನ್ನೊಳಗೊಂಡ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಂಡಿದೆ.
ವಿಂಡೀಸ್ ಕ್ರಿಕೆಟ್ ಸರಣಿಯಿಂದ ಹೊರಗುಳಿದಿದ್ದ ಅನುಭವಿ ಧೋನಿ ದಕ್ಷಿಣ ಆಫ್ರಿಕಾ ಸರಣಿ ವೇಳೆಗೆ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆಂದು ಭಾವಿಸಲಾಗಿತ್ತು. ಆದರೆ, ಆಯ್ಕೆ ಸಮಿತಿ ಹರಿಣಗಳ ವಿರುದ್ಧದ ಟಿ-20 ಸರಣಿಗಾಗಿ ಅವರನ್ನ ಕೈಬಿಟ್ಟಿದ್ದು, ಯುವ ಪ್ರತಿಭೆಗಳಿಗೆ ಮಣೆ ಹಾಕಿದೆ. ಪ್ರಮುಖವಾಗಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿದಿದ್ದ ತಂಡವೇ ಇಲ್ಲೂ ಚಾನ್ಸ್ ಪಡೆದುಕೊಂಡಿರುವುದು ಗಮನಾರ್ಹ ಸಂಗತಿ.
ತಂಡ ಇಂತಿದೆ: ವಿರಾಟ್ ಕೊಹ್ಲಿ(ಕ್ಯಾಪ್ಟನ್), ರೋಹಿತ್ ಶರ್ಮಾ(ಉಪನಾಯಕ), ಕೆ.ಎಲ್.ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್(ವಿ,ಕೀ), ಹಾರ್ದಿಕ್ ಪಾಂಡ್ಯಾ, ರವೀಂದ್ರ ಜಡೇಜಾ, ಕೃನಾಲ್ ಪಾಂಡ್ಯಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಖಲೀಲ್ ಅಹ್ಮದ್, ದೀಪಕ್ ಚಹರ್, ನವದೀಪ್ ಸೈನಿ.
-
India’s squad for 3 T20Is against South Africa: Virat(Capt), Rohit (vc), KL Rahul, Shikhar Dhawan, Shreyas, Manish Pandey, Rishabh Pant (WK), Hardik Pandya, Ravindra Jadeja, Krunal Pandya, Washington Sundar, Rahul Chahar, Khaleel Ahmed, Deepak Chahar, Navdeep Saini#INDvSA
— BCCI (@BCCI) August 29, 2019 " class="align-text-top noRightClick twitterSection" data="
">India’s squad for 3 T20Is against South Africa: Virat(Capt), Rohit (vc), KL Rahul, Shikhar Dhawan, Shreyas, Manish Pandey, Rishabh Pant (WK), Hardik Pandya, Ravindra Jadeja, Krunal Pandya, Washington Sundar, Rahul Chahar, Khaleel Ahmed, Deepak Chahar, Navdeep Saini#INDvSA
— BCCI (@BCCI) August 29, 2019India’s squad for 3 T20Is against South Africa: Virat(Capt), Rohit (vc), KL Rahul, Shikhar Dhawan, Shreyas, Manish Pandey, Rishabh Pant (WK), Hardik Pandya, Ravindra Jadeja, Krunal Pandya, Washington Sundar, Rahul Chahar, Khaleel Ahmed, Deepak Chahar, Navdeep Saini#INDvSA
— BCCI (@BCCI) August 29, 2019
ಪ್ರಮುಖವಾಗಿ ತಂಡದಿಂದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಸೇರಿ ಯಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿದ್ದು, ಯುವ ಬೌಲರ್ಗಳಿಗೆ ಆಯ್ಕೆ ಸಮಿತಿ ಚಾನ್ಸ್ ನೀಡಿದೆ.
ಮೂರು ಟಿ-20 ಪಂದ್ಯಗಳ ವೇಳಾಪಟ್ಟಿ
- ಮೊದಲ ಟಿ20: ಸೆಪ್ಟೆಂಬರ್ 15
- ದ್ವಿತೀಯ ಟಿ20: ಸೆಪ್ಟೆಂಬರ್ 18
- ತೃತೀಯ ಟಿ20: ಸೆಪ್ಟೆಂಬರ್ 22
ಈಗಾಗಲೇ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯಂತೆ ಟಿ-20 ವಿಶ್ವಕಪ್ ಹತ್ತಿರ ಬರುತ್ತಿದ್ದು, ಇನ್ನು ಕೇವಲ 22 ಪಂದ್ಯಗಳಲ್ಲಿ ಮಾತ್ರ ಭಾರತ ತಂಡ ಆಡಲಿದೆ. ಅಷ್ಟರಲ್ಲಿ ಉತ್ತಮ ವಿಕೆಟ್ ಕೀಪರ್ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಮುಂದಾಗಿದೆ. ರಿಷಭ್ ಪಂತ್ಗೆ ಎಲ್ಲ ವಿಭಾಗದ ಕ್ರಿಕೆಟ್ಗೂ ಮೊದಲ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.