ಮುಂಬೈ: 2020ರ ಮಹಿಳಾ ಟಿ-20 ಚಾಲೆಂಜ್ ಟೂರ್ನಮೆಂಟ್ನ ಟೈಟಲ್ ಪ್ರಾಯೋಜಕತ್ವವನ್ನು ಜಿಯೋ ಸಂಸ್ಥೆ ಪಡೆದುಕೊಂಡಿದೆ ಎಂದು ಬಿಸಿಸಿಐ ಭಾನುವಾರ ತಿಳಿಸಿದೆ.
ಪುರುಷರ ಲೀಗ್ ಹಂತದ ಪಂದ್ಯಗಳು ನಡೆದ ನಂತರ 4 ಪಂದ್ಯಗಳ ಮಹಿಳಾ ಟಿ 20 ಚಾಲೆಂಜ್ ಟೂರ್ನಮೆಂಟ್ ಶಾರ್ಜಾ ಮೈದಾನದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಮೂರು ತಂಡಗಳು ಭಾಗವಹಿಸಲಿವೆ. ಸೂಪರ್ನೋವಾಸ್ ಮತ್ತು ವೆಲಾಸಿಟಿ ಮತ್ತು ಟ್ರೈಲ್‌ಬ್ಲೇಜರ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಈ ತಂಡಗಳನ್ನು ಕ್ರಮವಾಗಿ ಹರ್ಮನ್ ಪ್ರೀತ್ ಕೌರ್, ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂಧಾನ ಮುನ್ನಡೆಸಲಿದ್ದಾರೆ.
-
NEWS : BCCI announce Jio as Title Sponsor for 2020 Women’s T20 Challenge
— IndianPremierLeague (@IPL) November 1, 2020 " class="align-text-top noRightClick twitterSection" data="
Moe details here - https://t.co/xvV0TNZUHr #JioWomensT20Challenge
">NEWS : BCCI announce Jio as Title Sponsor for 2020 Women’s T20 Challenge
— IndianPremierLeague (@IPL) November 1, 2020
Moe details here - https://t.co/xvV0TNZUHr #JioWomensT20ChallengeNEWS : BCCI announce Jio as Title Sponsor for 2020 Women’s T20 Challenge
— IndianPremierLeague (@IPL) November 1, 2020
Moe details here - https://t.co/xvV0TNZUHr #JioWomensT20Challenge
" ಮಹಿಳಾ ಟಿ20 ಚಾಲೆಂಜ್ನ 2020ರ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಜಿಯೋ ಪಡೆದಿದೆ. ಜಿಯೋಗೆ ರಿಲಯನ್ಸ್ ಪೌಂಡೇಷನ್ ಎಜುಕೇಶನ್ ಮತ್ತು ಸ್ಪೋರ್ಟ್ಸ್ ಫಾರ್ ಆಲ್ನ ಬೆಂಬಲವಿದೆ " ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.
ಜೊತೆಗೆ ಮಹಿಳಾ ಟೂರ್ನಮೆಂಟ್ಗಳಿಗೆ ಇದೇ ಮೊದಲ ಬಾರಿಗೆ ಪ್ರಾಯೋಜಕರು ಪ್ರತ್ಯೇಕವಾಗಿ ಬಿಸಿಸಿಐ ಜೊತೆ ಒಪ್ಪಂದಕ್ಕೆ ಸಹಿಯಾಕಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನವೆಂಬರ್ 4, 5, 7 ರಂದು ಲೀಗ್ ಪಂದ್ಯಗಳು ಮತ್ತು ನವೆಂಬರ್ 9 ರಂದು ಫೈನಲ್ ಪಂದ್ಯ ನಡೆಯಲಿದೆ.