ಬ್ರಿಸ್ಬೇನ್: ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಮೊರ್ನೆ ಮಾರ್ಕೆಲ್ ಬ್ರಿಸ್ಬೇನ್ ತಂಡದ ಪರ ಕಣಕ್ಕಿಳಿಯಲಿದ್ದು, ಅದಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಆಫ್ರಿಕಾ ಪರ 86 ಟೆಸ್ಟ್, 117 ಏಕದಿನ ಹಾಗೂ 44 ಟಿ-20 ಪಂದ್ಯಗನ್ನಾಡಿರುವ ಮಾರ್ಕೆಲ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಪ್ರಸಕ್ತ ಸಾಲಿನ ಬಿಗ್ ಬ್ಯಾಷ್ ಲೀಗ್ ಬ್ರಿಸ್ಬೇನ್ ಫ್ರಾಂಚೈಸಿ ಅತ್ಯಂತ ಅನುಭವಿ ಸ್ಥಳೀಯ ಆಟಗಾರನಿಗೆ ಮಣೆ ಹಾಕಿದ್ದು, ಇದರ ಬಗ್ಗೆ ಬ್ರಿಸ್ಬೇನ್ ಖುದ್ದಾಗಿ ಮಾಹಿತಿ ಹಂಚಿಕೊಂಡಿದೆ.
ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮಾರ್ಕೆಲ್ ಸದ್ಯ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದು, ಕಳೆದ ಬಿಗ್ ಬ್ಯಾಶ್ ಲೀಗ್ನಲ್ಲಿ ಪರ್ತ್ ಸ್ಕಾರ್ಚರ್ಸ್ಗಾಗಿ ಕೇವಲ ಒಂದು ಪಂದ್ಯ ಆಡಿದ್ದರು. 2018ರಲ್ಲಿ ಇವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಡಿಸೆಂಬರ್ 10ರಿಂದ ಬಿಬಿಎಲ್ ಆರಂಭಗೊಳ್ಳಲಿದ್ದು, 36 ವರ್ಷದ ಮಾರ್ಕೆಲ್ ಈಗಲೂ ಕ್ರಿಕೆಟ್ ಆಡುವುದನ್ನು ಆನಂದಿಸುವುದಾಗಿ ಹೇಳಿದ್ದಾರೆ.