ETV Bharat / sports

ಕೆರಿಬಿಯನ್ ಮೇಲೆ ಸವಾರಿ: ಏಕದಿನ ಸರಣಿ ಕೈವಶ ಮಾಡಿಕೊಂಡ ಬಾಂಗ್ಲಾ!

ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಐಸಿಸಿ ಕ್ರಿಕೆಟ್ ವಿಶ್ವಕಪ್​ ಸೂಪರ್ ಲೀಗ್​ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

author img

By

Published : Jan 23, 2021, 2:15 AM IST

Bangladesh vs West indies
Bangladesh vs West indies

ಢಾಕಾ: ಮೂರು ಏಕದಿನ ಕ್ರಿಕೆಟ್​ ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ ಪಾರಮ್ಯ ಮೆರೆದಿದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್​ ಎರಡರಲ್ಲೂ ಮಿಂಚಿದ ಬಾಂಗ್ಲಾದೇಶ ವೆಸ್ಟ್ ಇಂಡೀಸ್​ ತಂಡದ ಮೇಲೆ ಸವಾರಿ ನಡೆಸಿತು. ಇಲ್ಲಿನ ಶೇರ್​ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ವೆಸ್ಟ್ ಇಂಡೀಸ್​ 43.3 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 148ರನ್​ಗಳಿಕೆ ಮಾಡಿತು. ತಂಡದ ಪರ ರೋವ್ಮನ್ ಪೊವೆಲ್ 44ರನ್​ಗಳಿಸಿ ಅತ್ಯಧಿಕ ಸ್ಕೋರ್​ರ ಎನಿಸಿಕೊಂಡರು.

ಬಾಂಗ್ಲಾ ತಂಡದ ಪರ ಬೌಲಿಂಗ್​ನಲ್ಲಿ ಮಿಂಚಿದ ಮೆಹದಿ ಹಸನ್​ 4ವಿಕೆಟ್​, ಶಕೀಬ್​ ಹಾಗೂ ಮುಸ್ತುಫೀಜುರ್​ ತಲಾ 2ವಿಕೆಟ್ ಪಡೆದುಕೊಂಡರು.

ಸುಲಭ ಟಾರ್ಗೆಟ್​ ಬೆನ್ನತ್ತಿದ್ದ ಬಾಂಗ್ಲಾದೇಶ ಕೇವಲ 3ವಿಕೆಟ್​ ಕಳೆದುಕೊಂಡು 33.2 ಓವರ್​ಗಳಲ್ಲಿ 149ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ. ತಂಡದ ಪರ ಕ್ಯಾಪ್ಟನ್​ ತಮಿಮ್ ಇಕ್ಬಾಲ್​ (50)ರನ್​, ಶಕೀಬ್​ ಅಲ್​ ಹಸನ್​ ಅಜೇಯ(43)ರನ್​ಗಳಿಕೆ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಕೊನೆಯ ಪಂದ್ಯ ಸೋಮವಾರ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.