ನವದೆಹಲಿ: ಟಿ-20 ವಿಶ್ವಕಪ್ ಹತ್ತಿರ ಬರುತ್ತಿದ್ದಂತೆ ಐರ್ಲೆಂಡ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಎಲ್ಲಾ ಮಾದರಿಯ ಕ್ರಿಕೆಟ್ಗೆ ಯುವ ಬ್ಯಾಟ್ಸ್ಮನ್ ಆ್ಯಂಡಿ ಬಾಲ್ಬಿರ್ನಿಯನ್ನು ನಾಯಕನನ್ನಾಗಿ ನೇಮಿಸಿದೆ.
11 ವರ್ಷಗಳಿಂದ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿರಾಗಿದ್ದ ವಿಲಿಯಂ ಫೋರ್ಟ್ಫೀಲ್ಡ್ ನಾಯಕತ್ವದಿಂದ ಕೇಳಗಿಳಿದ ಬೆನ್ನಲ್ಲೇ ಬಾಲ್ಬಿರ್ನಿಯನ್ನು ಎರಡೂ ಮಾದರಿಯ ತಂಡಕ್ಕೆ ನಾಯಕನಾಗಿ ನೇಮಿಸಲಾಗಿತ್ತು. ಇಂದು ಟಿ-20 ತಂಡಕ್ಕೂ ನಾಯಕನನ್ನಾಗಿ ಆಯ್ಕೆ ಮಾಡಿದೆ.
-
📡 NEWS: Andrew Balbirnie assumes the Ireland T20 International captaincy.
— Cricket Ireland (@Irelandcricket) November 29, 2019 " class="align-text-top noRightClick twitterSection" data="
Read the story -- https://t.co/OzL4IwmKmS#BackingGreen ☘️🏏 pic.twitter.com/hu0iT6vEQx
">📡 NEWS: Andrew Balbirnie assumes the Ireland T20 International captaincy.
— Cricket Ireland (@Irelandcricket) November 29, 2019
Read the story -- https://t.co/OzL4IwmKmS#BackingGreen ☘️🏏 pic.twitter.com/hu0iT6vEQx📡 NEWS: Andrew Balbirnie assumes the Ireland T20 International captaincy.
— Cricket Ireland (@Irelandcricket) November 29, 2019
Read the story -- https://t.co/OzL4IwmKmS#BackingGreen ☘️🏏 pic.twitter.com/hu0iT6vEQx
ಕಳೆದ 18 ತಿಂಗಳಿನಿಂದ ನಾಯಕರಾಗಿದ್ದ 33 ವರ್ಷದ ಗ್ಯಾರಿ ವಿಲ್ಸನ್ರ ಜೊತೆ ಚರ್ಚೆ ನಡೆಸಿ ಐರ್ಲೆಂಡ್ ಕ್ರಿಕೆಟ್ ಕ್ಲಬ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಆ್ಯಂಡಿ ಬಾಲ್ಬಿರ್ನಿ 64 ಏಕದಿನ ಪಂದ್ಯ, 37 ಟಿ-20 ಹಾಗೂ 3 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ನಲ್ಲಿ 146, ಏಕದಿನ ಕ್ರಿಕೆಟ್ನಲ್ಲಿ 1813 ಹಾಗೂ ಟಿ-20ಯಲ್ಲಿ 790 ರನ್ ಗಳಿಸಿದ್ದಾರೆ.
ಬಾಲ್ಬಿರ್ನಿ ನಾಯಕತ್ವದಲ್ಲಿ ಜನವರಿ 7ರಂದು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ-20 ಪಂದ್ಯ ನಡೆಯಲಿದೆ.