ETV Bharat / sports

ಬಾಬರ್​ ಅಜಮ್ ಈಗ ಕೊಹ್ಲಿ- ಸ್ಮಿತ್​ ಲೆವೆಲ್​ಗೆ ಬೆಳೆದಿದ್ದಾರೆ: ನಾಸಿರ್​ ಹುಸೇನ್​

author img

By

Published : Aug 6, 2020, 1:21 PM IST

ಇಂಗ್ಲೆಂಡ್​ ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್​ನಲ್ಲಿ ಬಾಬರ್​ ಅಜಮ್​(69) ಆಕರ್ಷಕ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ. 25 ವರ್ಷದ ಬ್ಯಾಟ್ಸ್​ಮನ್​ ಆರಂಭದ ದಿನದಲ್ಲೇ ತಮ್ಮ 14 ನೇ ಅರ್ಧಶತಕ ಪೂರೈಸಿದ್ದಾರೆ.

ನಾಸಿರ್​ ಹುಸೇನ್​
ನಾಸಿರ್​ ಹುಸೇನ್​

ಮ್ಯಾಂಚೆಸ್ಟರ್​: ಪಾಕಿಸ್ತಾನದ ಯುವ ಆಟಗಾರ ಬಾಬರ್​ ಅಜಮ್​ ಭಾರತದ ವಿರಾಟ್​ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​ಗೆ ಸರಿಸಮನಾದ ಆಟಗಾರ ಎಂದು ಇಂಗ್ಲೆಂಡ್​ ಮಾಜಿ ನಾಯಕ ನಾಸಿರ್ ಹುಸೇನ್​ ಅಭಿಪ್ರಾಯ ಪಟ್ಟಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್​ನಲ್ಲಿ ಬಾಬರ್​ ಆಜಮ್​(69) ಆಕರ್ಷಕ ಅರ್ಧಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ. 25 ವರ್ಷದ ಬ್ಯಾಟ್ಸ್​ಮನ್​ ಆರಂಭದ ದಿನದಲ್ಲೇ ತಮ್ಮ 14 ನೇ ಅರ್ಧಶತಕ ಪೂರೈಸಿದ್ದಾರೆ.

2018ರಿಂದ ಅವರ ಬ್ಯಾಟಿಂಗ್ ಪ್ರದರ್ಶನ ಗಮನಿಸಿದರೆ ಎಲ್ಲ ಬ್ಯಾಟ್ಸ್​ಮನ್​ಗಳಿಗಿಂತ ಮುಂದಿದ್ದಾರೆ. ಈ ಕಾರಣದಿಂದ ನಾಸಿರ್​ ಬಾಬರ್​ ಕೂಡ ಕೊಹ್ಲಿ, ರೂಟ್​, ವಿಲಿಯಮ್ಸನ್ ಹಾಗೂ ಸ್ಮಿತ್​​ಗೆ​ ತಕ್ಕನಾದ ಪ್ರತಿಸ್ಪರ್ಧಿ ಎಂದು ಭಾವಿಸಿದ್ದಾರೆ.

ಪಾಕಿಸ್ತಾನ ತಂಡದ ಬಾಬರ್​ ಅಜಮ್​ರಂತಹ ಒಬ್ಬ ಅದ್ಭುತ ಬ್ಯಾಟ್ಸ್​ಮನ್ ಪಡೆದುಕೊಂಡಿದೆ. ಇದು ಕೇವಲ ಅವರ ಅಂಕಿ ಅಂಶಗಳನ್ನು ನೋಡಿ ಹೇಳುತ್ತಿಲ್ಲ, ಅವರ ಆಡುವ ಶೈಲಿಯಿಂದ ಆತ ಎಂತಹ ಶ್ರೇಷ್ಠ ಬ್ಯಾಟ್ಸ್​ಮನ್ ಎಂದು ಹೇಳಬಹುದು ಎಂದು ನಾಸಿರ್​ ಸ್ಕೈ ಸ್ಪೋರ್ಟ್ಸ್​ಗೆ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.

ಬಾಬರ್​ ಅಜಮ್​
ಬಾಬರ್​ ಅಜಮ್​

ನನ್ನ ಪ್ರಕಾರ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದರೆ ಅದರಕ್ಕೆ ಬಾಬರ್​ ಅಜಮ್​ ಪಾಲು ಸಾಕಷ್ಟಿರುತ್ತದೆ. ಆತ ಉತ್ತಮವಾಗಿ ಆಡಿದರೆ ಈ ಸರಣಿಯನ್ನು ನಾವು ನೋಡುವುದಕ್ಕೆ ಅರ್ಹವಾಗಿರುತ್ತದೆ. ಆತ ನಿಜಕ್ಕೂ ಗನ್​ ಪ್ಲೇಯರ್​ ಎಂದು ಬಣ್ಣಿಸಿದ್ದಾರೆ.

ಕ್ರಿಕೆಟ್​ ಪ್ರತಿಸ್ಪರ್ಧಿಗಳ ಲಿಸ್ಟ್​ನಲ್ಲಿ ಇನ್ನು ನಾಲ್ವರು ಬ್ಯಾಟ್ಸ್​ಮನ್​ಗಳು ಮಾತ್ರ ಇದ್ದಾರೆ. ಆದರೆ ಬಾಬರ್ ಆಟ ನೋಡಿದ ಮೇಲೂ ಶ್ರೇಷ್ಠ 4 ರಲ್ಲೇ ಚರ್ಚೆ ಮುಂದುವರಿದರೆ ನಾಚಿಕೆಯಾಗುತ್ತದೆ. ಏಕೆಂದರೆ ಬಾಬರ್​ ಕೂಡ ಪ್ರತಿಸ್ಪರ್ಧಿಯಾಗಿದ್ದಾರೆ. ಮುಂದೆ ಕ್ರಿಕೆಟ್ ಜಗತ್ತಿನ ಚರ್ಚೆಯಲ್ಲಿ ಕೊಹ್ಲಿ, ಸ್ಮಿತ್​, ರೂಟ್​ ಹಾಗೂ ವಿಲಿಯಮ್ಸನ್​ ಜೊತೆಗೆ ಬಾಬರ್​ ಕೂಡ ಇರಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.