ರಾವಲ್ಫಿಂಡಿ: ಪಾಕಿಸ್ತಾನದ ಸೀಮಿತ ಓವರ್ಗಳ ನಾಯಕನಾಗಿರುವ ಬಾಬರ್ ಅಜಮ್ರನ್ನೇ ಟೆಸ್ಟ್ ತಂಡಕ್ಕೆ ನಾಯಕನಾಗಿ ನೇಮಕ ಮಾಡಿದೆ. ಇದೀಗ ಪಾಕಿಸ್ತಾನ ತಂಡದ ಎಲ್ಲಾ ಮಾದರಿಗೂ ಬಾಬರ್ ನೇತೃತ್ವ ವಹಿಸಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಅಜರ್ ಅಲಿ ಬದಲಿಗೆ ಬಾಬರ್ರನ್ನು ನೇಮಕ ಮಾಡಲಾಗಿದೆ. ಅಜರ್ ಅಲಿ ಜೊತೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಿಸಿಬಿ ಅಧ್ಯಕ್ಷ ಎಹಸಾನ್ ಮಣಿ ಮಂಗಳವಾರ ತಿಳಿಸಿದ್ದಾರೆ.
ಬಾಬರ್ ಅಜಮ್ ಐಸಿಸಿ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಬಾಬರ್ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿ ಡಿಸೆಂಬರ್ 26-30 ರವರೆಗೆ ಮೌಂಟ್ ಮೌಂಗನುಯಿ ಹಾಗೂ 2ನೇ ಟೆಸ್ಟ್ ಜನವರಿ 3-7 ರವರೆಗೆ ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ.
ಬಾಬರ್ ಅಜಮ್ ಅವರನ್ನು ಭವಿಷ್ಯದ ನಾಯಕನಾಗಿ ಚಿಕ್ಕವಯಸ್ಸಿನಲ್ಲೇ ಗುರುತಿಸಲಾಗಿದೆ. ಅವರ ಪ್ರಗತಿ ಮತ್ತು ಅಭಿವೃದ್ಧಿಯ ಭಾಗವಾಗಿ ಅವರನ್ನು ಕಳೆದ ವರ್ಷ ವೈಟ್ಬಾಲ್ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಅದರಲ್ಲಿ ಅವರ ಸ್ಥಿರ ಪ್ರದರ್ಶನ ಮತ್ತು ನಾಯಕತ್ವದ ಕೌಶಲ್ಯದಿಂದ, ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲು ತಾವೂ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಮಣಿ ತಿಳಿಸಿದ್ದಾರೆ.
-
JUST IN: Babar Azam has been appointed as Pakistan Test captain 🇵🇰
— ICC (@ICC) November 10, 2020 " class="align-text-top noRightClick twitterSection" data="
He is now skipper in all three formats 🙌 pic.twitter.com/wlbvKe3K1P
">JUST IN: Babar Azam has been appointed as Pakistan Test captain 🇵🇰
— ICC (@ICC) November 10, 2020
He is now skipper in all three formats 🙌 pic.twitter.com/wlbvKe3K1PJUST IN: Babar Azam has been appointed as Pakistan Test captain 🇵🇰
— ICC (@ICC) November 10, 2020
He is now skipper in all three formats 🙌 pic.twitter.com/wlbvKe3K1P
ದಶಕದ ನಂತರ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ್ದ ಅಜರ್ ಅಲಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ. ಅಜರ್ ಅವರಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಇದೆ. ಅವರು ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಆಗಿ ಪಾಕಿಸ್ತಾನ ಕ್ರಿಕೆಟ್ನಲ್ಲಿ ಮುಂದುವರಿಯಬಹುದು. ಅವರ ಅನುಭವ ತಂಡಕ್ಕೆ ಅಗತ್ಯವಿದೆ ಎಂದು ಪಿಸಿಬಿ ಪ್ರಕಟಿಸಿರುವ ಹೇಳಿಕೆಯಲ್ಲಿ ಮಣಿ ತಿಳಿಸಿದ್ದಾರೆ.
ಟೆಸ್ಟ್ ನಾಯಕನಾಗಿ ನೇಮಕಗೊಂಡಿರುವುದು ಮತ್ತು ಪಾಕಿಸ್ತಾನದ ನಾಯಕತ್ವದ ಮೂಲಕ ಸೇವೆ ಸಲ್ಲಿಸಿರುವ ಕೆಲವು ಅಪ್ರತಿಮ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ ಎಂದು ಬಾಬರ್ ಅಜಮ್ ತಿಳಿಸಿದ್ದಾರೆ.