ETV Bharat / sports

ಜಮ್ಮು-ಕಾಶ್ಮೀರ ಮಹಿಳಾ ಪೊಲೀಸರ ಕ್ರಿಕೆಟ್​ ಟೂರ್ನಿ ಉದ್ಘಾಟಿಸಿದ ಸುರೇಶ್​ ರೈನಾ

author img

By

Published : Sep 19, 2020, 11:52 PM IST

ಕಾಶ್ಮೀರ ವಿಭಾಗದಲ್ಲಿ ಐದು ಶಾಲೆಗಳನ್ನು ಸ್ಥಾಪಿಸಲು ರೈನಾ ಒಪ್ಪಿದ್ದಾರೆಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶುಕ್ರವಾರ ಮಾಹಿತಿ ನೀಡಿದ್ದರು.

ಸುರೇಶ್​ ರೈನಾ
ಸುರೇಶ್​ ರೈನಾ

ಅನಂತ್​ನಾಗ್​(ಜಮ್ಮು ಕಾಶ್ಮೀರ್​): ಐಪಿಎಲ್​ನಿಂದ ಹೊರ ಬಂದಿರುವ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಶನಿವಾರ ಅನಂತ್​ನಾಗ್​ನಲ್ಲಿ ಜಮ್ಮು ಮತ್ತು ಕಾಶ್ಮೀರ್ ಮಹಿಳಾ 2020ರ ಕ್ರಿಕೆಟ್ ಟೂರ್ನಾಮೆಂಟ್​ ಉದ್ಘಾಟನೆ ಮಾಡಿದ್ದಾರೆ.

ಆಗಸ್ಟ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದ್ದ ಟೀಂ ಇಂಡಿಯಾ ಆಲ್​ರೌಂಡರ್​ ಸುರೇಶ್​ ರೈನಾ ವೈಯಕ್ತಿಕ ಕಾರಣದಿಂದ 2020 ಆವೃತ್ತಿಯ ಐಪಿಎಲ್​ನಿಂದ ಹೊರ ಬಂದು ಆಭಿಮಾನಿಗಳಿಗೆ ಬ್ಯಾಕ್​ ಟು ಬ್ಯಾಕ್​​ ಶಾಕ್ ನೀಡಿದ್ದರು. ಇದೀಗ ತವರಿಗೆ ಮರಳಿರುವ ರೈನಾ ಸಮಾಜಮುಖ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶನಿವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳಾ ಪೊಲೀಸರ ಕ್ರಿಕೆಟ್ ಟೂರ್ನಾಮೆಂಟ್​​​ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಪ್ರೋತ್ಸಾಹ ನೀಡಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಲೆಫ್ಟಿನೆಂಟ್​ ಗವರ್ನರ್​​ ಮನೋಜ್​ ಸಿನ್ಹಾ ಅವರ ಜೊತೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಿಳಾ 2020ರ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯ ಭಾಗವಾಗಲು ಉತ್ಸುಕನಾಗಿದ್ದೇನೆ. ಇದು ಕೇವಲ ವಿನಮ್ರ ಆರಂಭವಷ್ಟೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತುಂಬಾ ಇದೆ" ಎಂದು ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ, ಕಾಶ್ಮೀರ ವಿಭಾಗದಲ್ಲಿ ಐದು ಶಾಲೆಗಳನ್ನು ಸ್ಥಾಪಿಸಲು ರೈನಾ ಒಪ್ಪಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶುಕ್ರವಾರ ಮಾಹಿತಿ ನೀಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಭೇಟಿಯಾಗಿದ್ದೇನೆ. ಮಹತ್ವಾಕಾಂಕ್ಷೆಯುಳ್ಳ ಕ್ರಿಕೆಟಿಗರಿಗೆ, ವಿಶೇಷವಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಯುವಕರಿಗೆ ತರಬೇತಿ ನೀಡಲು ಕಾಶ್ಮೀರ ವಿಭಾಗದಲ್ಲಿ ಐದು ಶಾಲೆಗಳು ಮತ್ತು ಜಮ್ಮು ವಿಭಾಗದಲ್ಲೂ ಶಾಲೆ ಸ್ಥಾಪಿಸಲು ಅವರು ಒಪ್ಪಿಕೊಂಡಿದ್ದಾರೆ" ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

ತಮ್ಮ ಮಾತಿನಂತೆ ರೈನಾ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಭವಿಷ್ಯದಲ್ಲಿ ಅಲ್ಲಿನ ಬಡ ಮಕ್ಕಳು, ಸಾಮರ್ಥ್ಯವಿರುವ ಯುವ ಕ್ರಿಕೆಟಿಗರನ್ನು ಬೆಳೆಸುವ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.