ಕೋಲ್ಕತ್ತಾ: ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೆಷನ್ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾದ ಮೇಲೆ ತೆರವಾಗಿದ್ದ ಸ್ಥಾನಕ್ಕೆ ಇದೀಗ ಹೊಸ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ. ಕೇವಲ 38ನೇ ವಯಸ್ಸಿಗೆ ಅವಿಶೇಕ್ ದಾಲ್ಮಿಯಾ ಈ ಹುದ್ದೆ ಅಲಂಕರಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ.
-
BCCI President Sourav Ganguly with newly-appointed president and secretary of Cricket Association of Bengal (CAB), Avishek Dalmiya (middle) and Snehasish Ganguly (right) respectively. https://t.co/rlUn5Yy52E pic.twitter.com/kRy1o8KqFn
— ANI (@ANI) February 5, 2020 " class="align-text-top noRightClick twitterSection" data="
">BCCI President Sourav Ganguly with newly-appointed president and secretary of Cricket Association of Bengal (CAB), Avishek Dalmiya (middle) and Snehasish Ganguly (right) respectively. https://t.co/rlUn5Yy52E pic.twitter.com/kRy1o8KqFn
— ANI (@ANI) February 5, 2020BCCI President Sourav Ganguly with newly-appointed president and secretary of Cricket Association of Bengal (CAB), Avishek Dalmiya (middle) and Snehasish Ganguly (right) respectively. https://t.co/rlUn5Yy52E pic.twitter.com/kRy1o8KqFn
— ANI (@ANI) February 5, 2020
ಬಿಸಿಸಿಐ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರರಾಗಿರುವ ಅವಿಶೇಕ್ ದಾಲ್ಮಿಯಾ 2012-13ರಲ್ಲಿ ಭಾರತೀಯ ಫುಟ್ಬಾಲ್ ಅಸೋಸಿಯೇಷನ್‌ನ ಆಡಳಿತ ಮಂಡಳಿಯ ಸದಸ್ಯರಾದ ನಂತರ ಕ್ರೀಡಾ ಆಡಳಿತಕ್ಕೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಸೌರವ್ ಗಂಗೂಲಿ ಜೊತೆಗೂಡಿ, 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಯೋಜಿಸುವಲ್ಲಿ ಅವಿಶೇಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಇನ್ನು ಸೌರವ್ ಗಂಗೂಲಿಯ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ ಸಿಎಬಿಯ ಹೊಸ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವಿಶೇಕ್, ಈಡನ್ ಗಾರ್ಡನ್ ಒಂದು ದೇವಾಲಯ ಇದ್ದ ಹಾಗೆ, ದೇವಾಲಯದ ಪೂಜಾರಿಯಾಗಿ ನಾನು ಸೇವೆ ಸಲ್ಲಿಸಲ್ಲಿದ್ದೇನೆ ಎಂದು ಭರವಸೆ ನೀಡಿದ್ದಾರೆ.