ETV Bharat / sports

ಫಿಂಚ್​ ಆರ್ಭಟ... ಪಾಕಿಸ್ತಾನವನ್ನು 8 ವಿಕೆಟ್​ಗಳಿಂದ ಬಗ್ಗುಬಡಿದ ಆಸೀಸ್​​​​ ಪಡೆ - ಭಾರತ

ದುಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 280 ರನ್​ಗಳ ಗುರಿಯನ್ನು 49 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ಚೇಸ್​ ಮಾಡುವ ಮೂಲಕ ಆಸೀಸ್​ ಸರಣಿ ಶುಭಾರಂಭ ಮಾಡಿದೆ.

aus
author img

By

Published : Mar 23, 2019, 2:55 PM IST

ದುಬೈ: ಭಾರತ ವಿರುದ್ಧ ಏಕದಿನ ಸತತ 3 ಪಂದ್ಯ ಗೆಲ್ಲುವ ಮೂಲಕ ಸರಣಿ ಗೆದ್ದಿದ್ದ ಆಸೀಸ್​ ಪಡೆ ತನ್ನ ಗೆಲುವಿನ ಓಟವನ್ನು ಪಾಕಿಸ್ತಾನ ವಿರುದ್ಧವೂ ಮುಂದುವರಿಸಿದೆ.

ನಿನ್ನೆ ದುಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 280 ರನ್​ಗಳ ಗುರಿಯನ್ನು 49 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ಚೇಸ್​ ಮಾಡುವ ಮೂಲಕ ಆಸೀಸ್​ ಸರಣಿ ಶುಭಾರಂಭ ಮಾಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಾಕಿಸ್ತಾನ ತಂಡಕ್ಕೆ ಶಾನ್​ ಮಸೂದ್​ 40, ಹ್ಯಾರಿಸ್​ ಶೊಯೆಲ್​ 101, ಉಮರ್​ ಅಕ್ಮಲ್​ 48 ಹಾಗೂ ಫಹೀಮ್​ ಆಶ್ರಫ್​ ಔಟಾಗದೇ 28, ಇಮಾದ್​ ವಾಸಿಂ ಔಟಾಗದೆ 28 ರನ್ ​ಗಳಿಸುವ ಮೂಲಕ 280 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಜೇ ರಿಚರ್ಡ್ಸನ್​ 64ಕ್ಕೆ 1, ನಥನ್​ ಕೌಲ್ಟರ್​ ನೈಲ್​​ 61ಕ್ಕೆ 2, ನಥನ್​ ಲೈನ್​ 38ಕ್ಕೆ 1, ಮ್ಯಾಕ್ಸ್​ವೆಲ್​ 57ಕ್ಕೆ 1 ವಿಕೆಟ್​ ಪಡೆಯುವ ಮೂಲಕ 300 ರ ಗಡಿ ದಾಟದಂತೆ ನೋಡಿಕೊಂಡಿರು.

281 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ, ಉಸ್ಮಾನ್​ ಖವಾಜ್​ 24, ಆ್ಯರೋನ್​ ಫಿಂಚ್​ 116, ಶಾನ್​ ಮಾರ್ಶ್ ಔಟಾಗದೆ​ 91, ಪೀಟರ್​ ಹ್ಯಾಂಡ್ಸ್​ಕಂಬ್ ಔಟಾಗದೇ​ 30 ರನ್​ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯ ಮಾರ್ಚ್​ 24 ರಂದು ನಡೆಯಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.