ಅಡಿಲೇಡ್: ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಕ್ಷೇತ್ರ ರಕ್ಷಣೆ ಬಗ್ಗೆ ಮಾಜಿ ಕ್ರಿಕೆಟರ್ ವಾಸೀಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳಪೆ ಫೀಲ್ಡಿಂಗ್ ಮಾಡಿದ ಪಾಕ್ ಆಟಗಾರರಾದ ಶಹೀನ್ ಶಾ, ಯಾಸಿರ್ ಶಾ ಹಾಗೂ ಶಾನ್ ಮಸೂದ್ ಬಗ್ಗೆ ವಾಸೀಂ ಅಕ್ರಂ ಕಿಡಿಕಾರಿದ್ದಾರೆ.
ಪಾಕ್ ಬೌಲರ್ಗಳ ದಾಳಿ ಪುಡಿಗಟ್ಟಿದ ವಾರ್ನರ್... ತ್ರಿಶತಕ ಸಿಡಿಸಿ ನಾಟೌಟ್
"ಶಹೀನ್ ಶಾ ಫೈನ್ ಲೆಗ್ನಲ್ಲಿ ಯಾವುದೋ ಯೋಚನೆಯಲ್ಲಿ ಮುಳುಗಿದ್ದರು. ಯಾಸಿರ್ ಶಾ ಹಾಗೂ ಶಾನ್ ಮಸೂದ್ ಬಹುಶಃ ಆಕಳಿಸುತ್ತಿದ್ದರು. ಪಾಕ್ ಕ್ರಿಕೆಟಿಗರು ಚೆಂಡಿನತ್ತ ಗಮನಹರಿಸುವುದಿಲ್ಲ. ಇದೇ ಪಾಕಿಸ್ತಾನ ಕ್ರಿಕೆಟ್ ತಂಡದ ಸಮಸ್ಯೆ" ಎಂದು ವಾಸೀಂ ಅಕ್ರಂ ಪಾಕ್ ಕ್ರಿಕೆಟ್ ಬಗ್ಗೆ ಬೇಸರ ಹೊರಹಾಕಿದ್ದಾರೆ.
-
Whoops! #AUSvPAK | https://t.co/0QSefkJERk pic.twitter.com/HpEwgwlm1H
— cricket.com.au (@cricketcomau) November 29, 2019 " class="align-text-top noRightClick twitterSection" data="
">Whoops! #AUSvPAK | https://t.co/0QSefkJERk pic.twitter.com/HpEwgwlm1H
— cricket.com.au (@cricketcomau) November 29, 2019Whoops! #AUSvPAK | https://t.co/0QSefkJERk pic.twitter.com/HpEwgwlm1H
— cricket.com.au (@cricketcomau) November 29, 2019
"ಫೀಲ್ಡಿಂಗ್ ವಿಚಾರದಲ್ಲಿ ನಿಮ್ಮನ್ನು ನೀವೇ ಉತ್ತಮಗೊಳಿಸಬೇಕು. ನೀವು ಅನುಭವಸ್ಥ ಆಟಗಾರನೋ ಇಲ್ಲವೋ ಎನ್ನುವುದು ಗಣನೆಗೆ ಬರುವುದಿಲ್ಲ. ಬೌಂಡರಿ ಗೆರೆಯ ಐದರಿಂದ ಹತ್ತು ಯಾರ್ಡ್ನಲ್ಲಿ ನಿಂತು ಫೀಲ್ಡಿಂಗ್ ಮಾಡಬೇಕೇ ಹೊರತು ಗೆರೆ ಸಮೀಪದಲ್ಲಿ ಅಲ್ಲ" ಎಂದು ಅಕ್ರಂ ಪಾಕ್ ತಂಡಕ್ಕೆ ಸಲಹೆ ನೀಡಿದ್ದಾರೆ.
-
😳🙈#AUSvPAK pic.twitter.com/FKkW2VDDFY
— cricket.com.au (@cricketcomau) November 29, 2019 " class="align-text-top noRightClick twitterSection" data="
">😳🙈#AUSvPAK pic.twitter.com/FKkW2VDDFY
— cricket.com.au (@cricketcomau) November 29, 2019😳🙈#AUSvPAK pic.twitter.com/FKkW2VDDFY
— cricket.com.au (@cricketcomau) November 29, 2019
ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ನಲ್ಲಿ ಡೇವಿಡ್ ವಾರ್ನರ್ ಭರ್ಜರಿ ತ್ರಿಶತಕ ಸಿಡಿಸಿದ್ದಾರೆ. ಈ ಮೂಲಕ ಆತಿಥೇಯರ ತಂಡ 3 ವಿಕೆಟ್ ನಷ್ಟಕ್ಕೆ 589 ರನ್ ಗಳಿಸಿ ಡಿಕ್ಲೇರ್ ಮಾಡಿದೆ. ಅತ್ತ ಬ್ಯಾಟಿಂಗ್ ಆರಂಭಿಸಿರುವ ಪಾಕ್ 115 ರನ್ನಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.