ಮೆಲ್ಬೋರ್ನ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಟೀಂ ಇಂಡಿಯಾ ನಾಯಕ ರಹಾನೆ ಶತಕ ಸಿಡಿಸಿ ಮಿಂಚಿದ್ದಾರೆ.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಆಜಿಂಕ್ಯಾ ರಹಾನೆ ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ್ರು. 195 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ ಟೆಸ್ಟ್ ಕ್ರಿಕೆಟ್ನಲ್ಲಿ 12ನೇ ಶತಕ ದಾಖಲಿಸಿದ್ರು. ಇದು ಆಸ್ಟ್ರೇಲಿಯಾ ವಿರುದ್ಧ ರಹಾನೆ ಸಿಡಿಸಿದ 2ನೇ ಶತಕವಾಗಿದೆ.
ಒಂದು ಶತಕ ಹಲವು ಮೈಲಿಗಲ್ಲು : ರಹಾನೆ ಆಸೀಸ್ ವಿರುದ್ಧ 2 ಶತಕ ಸಿಡಿಸಿದ್ದು, ಎರಡೂ ಕೂಡ ಎಂಸಿಜಿ ಮೈದಾನದಲ್ಲಿ ಎಂಬುದು ವಿಶೇಷ. ವಿನೋದ್ ಮಂಕಡ್ ನಂತರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 2 ಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಕೀರ್ತಿಗೆ ರಹಾನೆ ಪಾತ್ರರಾಗಿದ್ದಾರೆ. ಅಲ್ಲದೆ ಆಸೀಸ್ ವಿರುದ್ಧ ಶತಕ ಸಿಡಿಸಿದ ಟೀಂ ಇಂಡಿಯಾದ 12ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯೂ ರಹಾನೆ ಅವರದಾಗಿದೆ.