ಸಿಡ್ನಿ: ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದ ಕಾರಣ ಕ್ರೀಡಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಆದರೀಗ ಕೆಲವು ದೇಶಗಳಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಅವಕಾಶ ನೀಡಲಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ಕೆಲವು ಷರತ್ತುಗಳನ್ನು ಪಾಲಿಸುವುದರ ಮೂಲಕ ಜುಲೈ ತಿಂಗಳಿಂದ ಕ್ರೀಡಾಕೂಟಗಳನ್ನು ನಡೆಸಲು ಪ್ರಧಾನಿ ಸ್ಕಾಟ್ ಮಾರಿಸನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕ್ರೀಡಾಕೂಟಗಳನ್ನು ನಡೆಸಿ, ಆದ್ರೆ ಷರತ್ತುಗಳು ಅನ್ವಯ:
- 40 ಸಾವಿರ ಜನರು ಕುಳಿತುಕೊಳ್ಳುವ ಕ್ರಿಕೆಟ್ ಮೈದಾನಗಳಲ್ಲಿ 10 ಸಾವಿರ ಜನ ಸೇರಲು ಅವಕಾಶ
- ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಹಸಿರು ನಿಶಾನೆ
- ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭ ನಡೆಸಲು ಅನುಮತಿ.
ಕಾಂಗರೂ ನಾಡಲ್ಲಿ ಹೇಗಿದೆ ಕೊರೊನಾ ಚಿತ್ರಣ?:
ಆಸ್ಟ್ರೇಲಿಯಾದಲ್ಲಿ ಸದ್ಯ 7,288 ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 6,200 ಜನರು ಗುಣಮುಖರಾಗಿದದ್ದಾರೆ. ಇದೀಗ ಕೇವಲ 539 ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಕೊರೊನಾ ತೀವ್ರತೆ ಕಡಿಮೆಯಾಗಿರುವುದರಿಂದ ಕ್ರೀಡಾಕೂಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಜೊತೆಗೆ ನಿರ್ಬಂಧಗಳನ್ನೂ ಸಡಿಸಲಾಗಿದೆ.
ಟಿ-20 ವಿಶ್ವಕಪ್ ನಡೆಯುತ್ತಾ?
ಪ್ರಸಕ್ತ ಸಾಲಿನ ಟಿ-20 ವಿಶ್ವಕಪ್ ಕೂಡ ಇದೇ ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಂಡಿದ್ದು, ಟೂರ್ನಿ ನಡೆಯುವುದು ಪಕ್ಕಾ ಆಗಿದೆ.