ಲಂಡನ್: ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಹೊಸದೊಂದು ದಾಖಲೆ ನಿರ್ಮಾಣಗೊಂಡಿದ್ದು, ಆಸ್ಟ್ರೇಲಿಯಾ ಮಹಿಳಾ ತಂಡದ ಕ್ಯಾಪ್ಟನ್ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಈ ರೆಕಾರ್ಡ್ ಬರೆದಿದ್ದಾರೆ.
![Australia Meg Lanning](https://etvbharatimages.akamaized.net/etvbharat/prod-images/eabqoqsxuae0xuz_2707newsroom_1564237187_814.jpg)
ಇಂಗ್ಲೆಂಡ್ನ ಚೆಲಿಮ್ಸ್ಪೋರ್ಡ್ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಅಬ್ಬರಿಸಿರುವ ಕ್ಯಾಪ್ಟನ್ ಕೇವಲ 63 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 17 ಬೌಂಡರಿ ಸೇರಿ ಅಜೇಯ 133 ರನ್ಗಳಿಸಿ, ಹೊಸ ದಾಖಲೆ ಬರೆದಿದ್ದಾರೆ. ಇದು ಮಹಿಳಾ ಟಿ-20 ಕ್ರಿಕೆಟ್ನಲ್ಲಿ ಇಲ್ಲಿಯವರೆಗೆ ಮೂಡಿ ಬಂದಿರುವ ಅತಿದೊಡ್ಡ ಮೊತ್ತ ಇದಾಗಿದೆ.
ಈ ಹಿಂದೆ 2019ರಲ್ಲೇ ನೆದರ್ಲ್ಯಾಂಡ್ನ ಸ್ಟೋರಿ ಕಾಲೀಸ್ ಜರ್ಮನ್ ವಿರುದ್ಧದ ಪಂದ್ಯದಲ್ಲಿ ಅಜೇಯ 126 ರನ್ಗಳಿಕೆ ಮಾಡಿದ್ದರು. ಅದಕ್ಕೂ ಮೊದಲು ಲ್ಯಾನಿಂಗ್ ಐರ್ಲೆಂಡ್ ವಿರುದ್ಧ 2014ರಲ್ಲಿ 126 ರನ್ಗಳಿಕೆ ಮಾಡಿದ್ದರು.
![Women T20I Match](https://etvbharatimages.akamaized.net/etvbharat/prod-images/eaa3t-qx4aaup4t_2707newsroom_1564237187_635.jpg)
ಈ ಪಂದ್ಯದಲ್ಲಿ ಇವರ ಅಜೇಯ 133 ರನ್ಗಳ ನೆರವಿನಿಂದ ತಂಡ 3 ವಿಕಟ್ ನಷ್ಟಕ್ಕೆ 226 ರನ್ಗಳಿಕೆ ಮಾಡಿ ಎದುರಾಳಿ ತಂಡಕ್ಕೆ 227 ರನ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನತ್ತಿದ್ದ ಆಂಗ್ಲರ ಪಡೆ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 133 ರನ್ಗಳಿಕೆ ಮಾಡಲು ಮಾತ್ರ ಶಕ್ತವಾಯಿತು. ಹೀಗಾಗಿ 93ರನ್ಗಳಿಂದ ಆಸ್ಟ್ರೇಲಿಯಾ ಗೆಲುವು ದಾಖಲು ಮಾಡಿತು. ಇದು ಇಲ್ಲಿಯವರೆಗಿನ ಟಿ20 ಪಂದ್ಯಗಳಲ್ಲಿ ಕಾಂಗರೂ ಪಡೆ ದಾಖಲು ಮಾಡಿರುವ ಅತಿದೊಡ್ಡ ಗೆಲುವಾಗಿದೆ.