ETV Bharat / sports

ಏಕಕಾಲದಲ್ಲಿ ಎರಡು ದೇಶಗಳೊಂದಿಗೆ ಕ್ರಿಕೆಟ್​ ಪ್ರಸ್ತಾವನೆ ವಿರೋಧಿಸುತ್ತೇನೆ: ಜಸ್ಟಿಂಗ್ ಲ್ಯಾಂಗರ್​ - ಕ್ರಿಕೆಟ್ ಆಸ್ಟ್ರೇಲಿಯಾ

ಫೆಬ್ರವರಿ 22ರಿಂದ ಮಾರ್ಚ್ 7ರ ವರೆಗೆ ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್​ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಆಡಲಿದೆ. ಇದೇ ಸಮಯಕ್ಕೆ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಯನ್ನಾಡುವ ಬಗ್ಗೆ ಪ್ರಸ್ತಾವನೆಯಿದೆ. ಆದರೆ ಈ ಆಲೋಚನೆಗೆ ತಮ್ಮ ವಿರೋಧವಿದೆ ಎಂದು ಲ್ಯಾಂಗರ್​ ತಿಳಿಸಿದ್ದಾರೆ.

ಜಸ್ಟಿಂಗ್ ಲ್ಯಾಂಗರ್​
ಜಸ್ಟಿಂಗ್ ಲ್ಯಾಂಗರ್​
author img

By

Published : Oct 15, 2020, 8:06 PM IST

ಮೆಲ್ಬೋರ್ನ್​: ಒಂದೇ ಸಮಯದಲ್ಲಿ ಟೆಸ್ಟ್ ಸರಣಿ ಮತ್ತು ಟಿ-20 ಸರಣಿ ನಡೆಸಲು ಚಿಂತಿಸುತ್ತಿರುವ ಕ್ರಿಕೆಟ್​ ಆಸ್ಟ್ರೇಲಿಯಾದ ಉದ್ಧೇಶವನ್ನು ತಾವೂ ವಿರೋಧಿಸುವುದಾಗಿ ಆಸ್ಟ್ರೇಲಿಯಾ ತಂಡದ ಕೋಚ್​ ಜಸ್ಟಿನ್ ಲ್ಯಾಂಗರ್​ ಹೇಳಿದ್ದಾರೆ.

ಫೆಬ್ರವರಿ 22ರಿಂದ ಮಾರ್ಚ್ 7ರ ವರೆಗೆ ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್​ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಆಡಲಿದೆ. ಇದೇ ಸಮಯಕ್ಕೆ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿಯನ್ನಾಡುವ ಬಗ್ಗೆ ಪ್ರಸ್ತಾವನೆಯಿದೆ. ಆದರೆ, ಈ ಆಲೋಚನೆಗೆ ತಮ್ಮ ವಿರೋಧವಿದೆ ಎಂದು ಲ್ಯಾಂಗರ್​ ತಿಳಿಸಿದ್ದಾರೆ.

" ಕ್ರಿಕೆಟ್ ಆಸ್ಟ್ರೇಲಿಯಾದ ಸಿಎಒಗೆ ಈ ವಿಚಾರ ಸ್ಪಷ್ಟವಾಗಿ ಗೊತ್ತಿದೆ. ಆದರೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ನನಗಿದು ಖಂಡಿತಾ ಏಕಕಾಲದಲ್ಲಿ 2 ಸರಣಿಯನ್ನಾಡುವುದು ಇಷ್ಟವಿಲ್ಲ" ಎಂದು ಸ್ಥಳೀಯ ರೇಡಿಯೋ ಸ್ಟೇಷನ್ ಸೆನ್ ಜೊತೆ ಮಾತನಾಡಿದ ಲ್ಯಾಂಗರ್ ತಿಳಿಸಿದ್ದಾರೆ.

ಮಾತು ಮುಂದುವರಿಸಿ, " ಒಂದೇ ಜಾಗದಲ್ಲಿ ಎರಡೆರಡು ಆಸ್ಟ್ರೇಲಿಯಾ ತಂಡಗಳನ್ನು ನೋಡಲು ನಾನು ಎಂದಿಗೂ ಇಷ್ಟಪಡಲಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವರ್ಷದಲ್ಲಿ ಕೋವಿಡ್​ 19 ನಿಂದ ಏನಾಗುತ್ತಿದೆ, ಅದರ ಸಂಕೀರ್ಣತೆಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನಮ್ಮದು ಒಂದೇ ದೇಶವಲ್ಲವೆ? ನಾವು ಎರಡು ದೇಶಗಳಲ್ಲ ಅಲ್ವ? ಲ್ಯಾಂಗರ್ ಪ್ರಶ್ನಿಸಿದ್ದಾರೆ.

ಒಂದೇ ಸಮಯದಲ್ಲಿ ಎರಡು ಅಂತಾರಾಷ್ಟ್ರೀಯ ಟೂರ್ನಿಗಳನ್ನಾಡಿದರೆ, ಎರಡು ಸರಣಿಯಲ್ಲಿನ ಮೌಲ್ಯ ಕುಸಿಯುತ್ತದೆ. ಜೊತೆಗೆ ಇದು ದೇಶಿ ಟೂರ್ನಮೆಂಟ್​ ಆಗಿರುವ ಶೆಫೀಲ್ಡ್​ ಶೀಲ್ಡ್​ ಟೂರ್ನಿಗೂ ಹೊಡೆತ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.