ETV Bharat / sports

ಕಿವೀಸ್​​​​ ವಿರುದ್ಧ 296 ರನ್​ಗಳ ಬೃಹತ್​​ ಜಯ ಸಾಧಿಸಿದ ಆಸ್ಟ್ರೇಲಿಯಾ - ನ್ಯೂಜಿಲ್ಯಾಂಡ್​-ಆಸ್ಟ್ರೇಲಿಯಾ ಟೆಸ್ಟ್​ ಸೆರಣಿ

ಪರ್ತ್​ನಲ್ಲಿ ನಡೆದ 3 ಟೆಸ್ಟ್​ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮಿಚೆಲ್​ ಸ್ಟಾರ್ಕ್​ ಹಾಗೂ ನಥನ್​ ಲಿಯಾನ್​ ಅವರ ಅದ್ಭುತ ಬೌಲಿಂಗ್​ ದಾಳಿಯ ನೆರವಿನಿಂದ ಕಿವೀಸ್​ ವಿರುದ್ಧ ಎರಡೂ ಇನ್ನಿಂಗ್ಸ್​ನಲ್ಲೂ ಪ್ರಾಬಲ್ಯ ಸಾಧಿಸಿದ ಆಸೀಸ್​ ಇನ್ನು ಒಂದು ದಿನ ಆಟ ಬಾಕಿ ಉಳಿದಿರುವಂತೆ ಜಯ ಸಾಧಿಸಿದೆ.

Australia beat New Zealand
author img

By

Published : Dec 16, 2019, 12:53 PM IST

ಪರ್ತ್​: ಕಿವೀಸ್ ವಿರುದ್ಧ ಆಸ್ಟ್ರೇಲಿಯಾ ಮೊದಲ ಟೆಸ್ಟ್​ ಪಂದ್ಯದಲ್ಲಿ 296 ರನ್​ಗಳ ಬೃಹತ್​ ಜಯ ಸಾಧಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಪರ್ತ್​ನಲ್ಲಿ ನಡೆದ 3 ಟೆಸ್ಟ್​ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮಿಚೆಲ್​ ಸ್ಟಾರ್ಕ್​ ಹಾಗೂ ನಥನ್​ ಲಿಯಾನ್​ ಅವರ ಅದ್ಭುತ ಬೌಲಿಂಗ್​ ದಾಳಿಯ ನೆರವಿನಿಂದ ಕಿವೀಸ್​ ವಿರುದ್ಧ ಎರಡೂ ಇನ್ನಿಂಗ್ಸ್​ನಲ್ಲೂ ಪ್ರಾಬಲ್ಯ ಸಾಧಿಸಿದ ಆಸೀಸ್​ ಇನ್ನು ಒಂದು ದಿನ ಆಟ ಬಾಕಿ ಉಳಿದಿರುವಂತೆ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ಮಾರ್ನಸ್​ ಲಾಬುಶೇನ್​(143) ಅವರ ಶತಕದ ನೆರವಿನಂದ 416 ರನ್ ​ಗಳಿಸಿತ್ತು. ಈ ಮೊತ್ತವನ್ನು ಹಿಂಬಾಲಿಸಿದ ನ್ಯೂಜಿಲ್ಯಾಂಡ್​ ಮಿಚೆಲ್​ ಸ್ಟಾರ್ಕ್​(52ಕ್ಕೆ 5) ದಾಳಿಗೆ ಸಿಲುಕಿ 166 ರನ್​ಗಳಿಗೆ ಆಲೌಟ್​ ಆಯಿತು. ರಾಸ್​ ಟೇಲರ್​ 80 ರನ್​ ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದರು.

250 ರನ್​ಗಳ ಬೃಹತ್​ ಮುನ್ನಡೆ ಪಡೆದ ಆಸೀಸ್​ ಎರಡನೇ ಇನ್ನಿಂಗ್ಸ್​ನಲ್ಲಿ 9 ವಿಕೆಟ್​ ಕಳೆದುಕೊಂಡು 217 ರನ್​ ಗಳಿಸಿದ್ದ ವೇಳೆ ಡಿಕ್ಲೇರ್​ ಘೋಷಿಸಿಕೊಂಡು 468 ರನ್​ಗಳ ಬೃಹತ್​ ಗುರಿ ನೀಡಿತು. ಕಿವೀಸ್​ ಪರ ಸೌಥಿ 5, ನೈಲ್​ ವ್ಯಾಗ್ನರ್​ 3 ವಿಕೆಟ್​ ಪಡೆದು ಮಿಂಚಿದರು.

418 ರನ್​ಗಳ ಗುರಿ ಪಡೆದ ನ್ಯೂಜಿಲ್ಯಾಂಡ್​ ಎರಡನೇ ಇನ್ನಿಂಗ್ಸ್​ನಲ್ಲೂ ಮಿಚೆಲ್​ ಸ್ಟಾರ್ಕ್​(45ಕ್ಕೆ 4) ಹಾಗೂ ನಥನ್​ ಲಿಯಾನ್​(63ಕ್ಕೆ 4) ದಾಳಿಗೆ ಸಿಲುಕಿ ಕೇವಲ 171 ರನ್​ಗಳಿಗೆ ಆಲೌಟ್​ ಆಗುವ ಮೂಲಕ 296 ರನ್​ಗಳ ಬೃಹತ್​ ಅಂತರದಿಂದ ಸೋಲು ಕಂಡಿತು.

ಈ ಮೂಲಕ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿತು. ಇತ್ತ ಆಸೀಸ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ತನ್ನ ಅಂಕವನ್ನು 216ಕ್ಕೆ ಏರಿಸಿಕೊಂಡಿದ್ದಲ್ಲದೆ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.