ETV Bharat / sports

ಆಸ್ಟ್ರೇಲಿಯಾ, ಪಾಕಿಸ್ತಾನ ಆಯ್ತು, ಇದೀಗ ನ್ಯೂಜಿಲ್ಯಾಂಡ್​ ಬಾಲಕನಿಂದ ಬುಮ್ರಾ ಬೌಲಿಂಗ್​ ಅನುಕರಣೆ... ವಿಡಿಯೋ

ಆಕ್ಲೆಂಡ್​ನಲ್ಲಿ ನ್ಯೂಜಿಲ್ಯಾಂಡ್​ ಬಾಲಕನೊಬ್ಬ ಬುಮ್ರಾ ಬೌಲಿಂಗ್​ ಶೈಲಿಯಲ್ಲಿ ಬೌಲಿಂಗ್​ ಅಭ್ಯಾಸ ಮಾಡುತ್ತಿರುವ ವಿಡಿಯೋ ವೈರಲ್​ ಆಗುತ್ತಿದೆ.

author img

By

Published : Feb 8, 2020, 2:14 PM IST

ಜಸ್ಪ್ರೀತ್​ ಬುಮ್ರಾ ಬೌಲಿಂಗ್​
ಜಸ್ಪ್ರೀತ್​ ಬುಮ್ರಾ ಬೌಲಿಂಗ್​

ಆಕ್ಲೆಂಡ್​: ಒಂದು ಕಾಲದಲ್ಲಿ ವೆಸ್ಟ್​ ಇಂಡೀಸ್​, ಆಸ್ಟ್ರೇಲಿಯಾ ವೇಗದ ಬೌಲರ್​ಗಳನ್ನು ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳ ಯುವ ಕ್ರಿಕೆಟಿಗರು ಅನುಕರಣೆ ಮಾಡುವುದು ರೂಢಿಯಲ್ಲಿತ್ತು. ಆದರೆ, ಇದೀಗ ಕಾಲ ಬದಲಾಗಿದೆ ಭಾರತ ಸ್ಟಾರ್​ ಬೌಲರ್​ ಬುಮ್ರಾ ಇದೀಗ ಭವಿಷ್ಯದ ವೇಗಿಗಳ ಮಾದರಿ ಬೌಲರ್​ ಆಗಿ ಪ್ರಸಿದ್ಧಿ ಪಡೆಯುತ್ತಿದ್ದಾರೆ.

ಹೌದು, ಕ್ರಿಕೆಟ್​ನಲ್ಲಿ ವೇಗದ ಬೌಲರ್​ಗಳೆಂದರೆ ಅದು ವೆಸ್ಟ್​ ಇಂಡೀಸ್​ ಎಂದೇ ಬಿಂಬಿತವಾಗಿತ್ತು. ನಂತರ ಪಾಕಿಸ್ತಾನ, ಆಸ್ಟ್ರೇಲಿಯಾ ತಂಡಗಳ ಬೌಲರ್​ಗಳು ವಿಶ್ವಪ್ರಸಿದ್ದರಾದರು. ಆದರೆ, ಭಾರತದ ಮಟ್ಟಿಗೆ ಕಪಿಲ್​ ದೇವ್​, ಜಾವಗಲ್​ ಶ್ರೀನಾಥ್ ಅ​ವರಂತಹ ವೇಗದ ಬೌಲರ್​ ಇದ್ದರೂ ಅವರನ್ನು ಇತರ ದೇಶಗಳ ಬೌಲರ್​ಗಳು ಅನುಸರಿಸುವ ಮಟ್ಟಿಗೆ ಇರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಭಾರತದ ವೇಗದ ಬೌಲಿಂಗ್ ವಿಶ್ವಮಟ್ಟದಲ್ಲಿ ಬಲಿಷ್ಠವಾಗಿದೆ. ಅದರಲ್ಲೂ ಜಸ್ಪ್ರೀತ್​ ಬುಮ್ರಾ ತಮ್ಮ ಅಸಾಂಪ್ರದಾಯಿಕ ಶೈಲಿಯ ವೇಗದ ಬೌಲಿಂಗ್​ನಿಂದ ವಿಶ್ವ ಕ್ರಿಕೆಟನ್ನೇ ಆಶ್ಚರ್ಯಕ್ಕೀಡು ಮಾಡಿದ್ದಾರೆ.

ಪ್ರಸ್ತುತ ವಿಶ್ವಕ್ರಿಕೆಟ್​ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಬುಮ್ರಾರ ಬೌಲಿಂಗ್​ ಶೈಲಿಯನ್ನು ವಿವಿಧ ದೇಶಗಳ ಬಾಲಕರು ಅನುಕರಣೆ ಮಾಡುತ್ತಿದ್ದಾರೆ. ಇಂದು ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ 2ನೇ ಏಕದಿನ ಪಂದ್ಯದ ವೇಳೆ 13 ವರ್ಷದ ಬಾಲಕನೊಬ್ಬ ಬುಮ್ರಾ ಶೈಲಿಯಲ್ಲಿ ಬೌಲಿಂಗ್​ ಮಾಡುವ ವಿಡಿಯೋ ವೈರಲ್​ ಆಗಿದೆ. ಬುಮ್ರಾ ಶೈಲಿಯಲ್ಲಿ ಬೌಲಿಂಗ್ ಮಾಡಿ ಇಂಟರ್​ನೆಟ್​ನಲ್ಲಿ ಸದ್ದು ಮಾಡಿದ ಕೆಲವು ಬಾಲಕರ ವಿಡಿಯೋಗಳು ಇಲ್ಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.