ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್ 7 ವರ್ಷಗಳ ಬಳಿ ಭಾರತದ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಸಿರಾಜ್ ಗಾಯಾಳು ಮೊಹಮ್ಮದ್ ಶಮಿ ಜಾಗಕ್ಕೆ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅವರು ಈ ಪಂದ್ಯದಲ್ಲಿ ಒಟ್ಟಾರೆ 36.3 ಓವರ್ ಎಸೆದಿದ್ದು, 77 ರನ್ ನೀಡಿ ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲ ಇನಿಂಗ್ಸ್ನಲ್ಲಿ ಸಿರಾಜ್ 2 ಮತ್ತು 2ನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದರು. ಅವರು ಈ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಅವರನ್ನು 2 ಇನ್ನಿಂಗ್ಸ್ನಲ್ಲೂ, ಮತ್ತು ಲಾಬುಶೇನ್ರನ್ನು ಮೊದಲ ಇನ್ನಿಂಗ್ಸ್ನಲ್ಲಿ , ನಥನ್ ಲಿಯೋನ್ ಮತ್ತು ಟ್ರಾವಿಸ್ ಹೆಡ್ರನ್ನು 2ನೇ ಇನ್ನಿಂಗ್ಸ್ನಲ್ಲಿ ಪೆವಿಲಿಯನ್ಗಟ್ಟಿದ್ದರು.
-
Mohammed Siraj gets into the act now as he has Green caught beautifully at mid wicket by Jadeja. Australia 180-8 now and lead by 49 runs. #TeamIndia #AUSvIND
— BCCI (@BCCI) December 29, 2020 " class="align-text-top noRightClick twitterSection" data="
Details - https://t.co/bG5EiYj0Kv pic.twitter.com/RITWMj3yNK
">Mohammed Siraj gets into the act now as he has Green caught beautifully at mid wicket by Jadeja. Australia 180-8 now and lead by 49 runs. #TeamIndia #AUSvIND
— BCCI (@BCCI) December 29, 2020
Details - https://t.co/bG5EiYj0Kv pic.twitter.com/RITWMj3yNKMohammed Siraj gets into the act now as he has Green caught beautifully at mid wicket by Jadeja. Australia 180-8 now and lead by 49 runs. #TeamIndia #AUSvIND
— BCCI (@BCCI) December 29, 2020
Details - https://t.co/bG5EiYj0Kv pic.twitter.com/RITWMj3yNK
ಹಿಂದೆ ಅಂದರೆ 2013 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಮೊಹಮ್ಮದ್ ಶಮಿ 9 ವಿಕೆಟ್ ಪಡೆದಿದ್ದರು. ಈ ಪಂದ್ಯದ ನಂತರ ಭಾರತದ ಪರ ಯಾವುದೇ ಬೌಲರ್ ಪದಾರ್ಪಣೆ ಟೆಸ್ಟ್ನಲ್ಲೇ 5 ವಿಕೆಟ್ ಪಡೆಯುವಲ್ಲಿ ಸಫಲರಾಗಿರಲಿಲ್ಲ. 2011ರಲ್ಲಿ ಆರ್ ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್ ಪಡೆದಿದ್ದರು.
ಇನ್ನು ಈ ಪಂದ್ಯದಲ್ಲಿ ಅಶ್ವಿನ್ 5(3+2), ಬುಮ್ರಾ 6 (4+2), ಜಡೇಜಾ 3(2+1) ಉಮೇಶ್ ಯಾದವ್ ಒಂದು ವಿಕೆಟ್ ಪಡೆದಿದ್ದಾರೆ.