ETV Bharat / sports

ಆಸ್ಟ್ರೇಲಿಯಾ-ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್: 25 ಸಾವಿರ ಪ್ರೇಕ್ಷಕರಿಗೆ ಅವಕಾಶ

ಕೋವಿಡ್​ 19 ವ್ಯಾಪಕವಾಗಿದ್ದರೂ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಪ್ರೇಕ್ಷಕರನ್ನು ಕರೆ ತರಲೇಬೇಕು ಎಂಬ ಅಭಿಲಾಷೆಯಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸ್ಟೇಡಿಯಂನ ನಾಲ್ಕನೇ ಒಂದು ಭಾಗದ ಆಸನಗಳನ್ನು ಪ್ರೇಕ್ಷಕರಿಗೆ ಒದಗಿಸಿಕೊಡುವ ನಿರ್ಧಾರ ಮಾಡಿದೆ.​

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್

author img

By

Published : Oct 28, 2020, 4:18 PM IST

ಮೆಲ್ಬೋರ್ನ್​: ಸುಮಾರು ಒಂದು ಲಕ್ಷ ಆಸನಗಳ ವ್ಯವಸ್ಥೆಯಿರುವ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ ಬಾಕ್ಸಿಂಗ್ ಟೆಸ್ಟ್​ನಲ್ಲಿ ಸುಮಾರು 25,000 ವೀಕ್ಷಕರಿಗೆ ಅವಕಾಶ ಮಾಡಿಕೊಡಲು ಮೆಲ್ಬೋರ್ನ್ ಕ್ರಿಕೆಟ್​ ಗ್ರೌಂಡ್​ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿವೆ.

ಕೋವಿಡ್​ 19 ವ್ಯಾಪಕವಾಗಿದ್ದರೂ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಪ್ರೇಕ್ಷಕರನ್ನು ಕರೆ ತರಲೇಬೇಕು ಎಂದ ಹುಮ್ಮಸ್ಸಿನಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸ್ಟೇಡಿಯಂನ ನಾಲ್ಕನೇ ಒಂದು ಭಾಗದ ಆಸನಗಳನ್ನು ಪ್ರೇಕ್ಷಕರಿಗೆ ಒದಗಿಸಿಕೊಡುವ ನಿರ್ಧಾರ ಮಾಡಿದೆ.​

ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಕಳೆದು ಆರೇಳು ತಿಂಗಳಿಂದ ಆಸ್ಟ್ರೇಲಿಯಾದಲ್ಲಿ ಯಾವುದೇ ಕ್ರಿಕೆಟ್ ನಡೆದಿಲ್ಲ. ಇದೀಗ ಆಸ್ಟ್ರೇಲಿಯಾದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆರಂಭವಾಗಿದೆ. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಪ್ರೇಕ್ಷಕರ ಸಹಿತ ಪಂದ್ಯ ಆಯೋಜನೆಗೆ ಚಿಂತಿಸಲಾಗುತ್ತಿದೆ. ಅದಕ್ಕಾಗಿ ವಿಕ್ಟೋರಿಯಾ ಸರ್ಕಾರ, ಎಂಸಿಜಿ ಕ್ರಿಕೆಟ್ ಕ್ಲಬ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕೋವಿಡ್ ಸೇಫ್​ ಪ್ಲಾನ್ ಸಿದ್ಧಪಡಿಸುತ್ತಿದ್ದಾರೆ.

"ಹೊಸ ಕೋವಿಡ್ ಸೇಫ್ ಪ್ರೋಟೋಕಾಲ್‌ಗಳ ಅಡಿಯಲ್ಲಿ, ಈ ವರ್ಷದ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯವನ್ನು ಎಂಸಿಜಿಯಲ್ಲಿ ಆಯೋಜಿಸಲು ನಾವು ವಿಕ್ಟೋರಿಯಾದ ಸರ್ಕಾರ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಸೇರಿ ಕೆಲಸ ಮಾಡುತ್ತಿದ್ದೇವೆ"ಎಂದು ಎಂಸಿಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಟುವರ್ಟ್ ಫಾಕ್ಸ್ ತಿಳಿಸಿದ್ದಾರೆ.

"ಬಾರ್ಡರ್-ಗವಾಸ್ಕರ್ ಟೆಸ್ಟ್​ ಕ್ರಿಕೆಟ್​ನ ಪ್ರತಿಷ್ಠಿತ ಟ್ರೋಫಿಗಳಲ್ಲೊಂದು. ಈ ಸರಣಿಯಲ್ಲಿ ಪ್ರತಿಭಾವಂತ ಭಾರತ ತಂಡದ ವಿರುದ್ಧ ಜಸ್ಟಿನ್ ಲ್ಯಾಂಗರ್ ಮತ್ತು ಟಿಮ್ ಪೇನ್ ನೇತೃತ್ವದ ತಂಡದ ಆಟ ನೋಡಲು ಆಕರ್ಷಣೀಯವಾಗಿರುತ್ತದೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕಾರಿ ಚೇರ್​ ಅರ್ಲ್ ಎಡ್ಡಿಂಗ್ಸ್​ ಹೇಳಿದ್ದಾರೆ.​

ಭಾರತ, ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 27ರಿಂದ ಜನವರಿ 19ರವರೆಗೆ 3 ಟಿ20, 3 ಏಕದಿನ ಹಾಗೂ 4 ಟೆಸ್ಟ್​ ಪಂದ್ಯಗಳನ್ನಾಡಲಿದೆ. ಡಿಸೆಂಬರ್ 17ರಂದು ಅಡಿಲೇಡ್​ನಲ್ಲಿ ಡೇ ಅಂಡ್ ನೈಟ್ ಟೆಸ್ಟ್​ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.