ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಏಷ್ಯಾಕಪ್ ರದ್ದುಗೊಂಡಿದೆ ಎಂದು ನಿನ್ನೆ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ಟೂರ್ನಾಮೆಂಟ್ ಮುಂದಿನ ವರ್ಷ ಜೂನ್ವರೆಗೆ ಮುಂದೂಡಿಕೆಯಾಗಿದೆ ಎಂದು ಏಷ್ಯಾ ಕ್ರಿಕೆಟ್ ಸಮಿತಿ ಅಧಿಕೃತ ಮಾಹಿತಿ ಹೊರಹಾಕಿದೆ.
-
⚠️ After careful consideration and evaluating the impact of the COVID-19 pandemic, the Executive Board of the ACC has decided to postpone the Asia Cup tournament that was scheduled for September 2020.
— AsianCricketCouncil (@ACCMedia1) July 9, 2020 " class="align-text-top noRightClick twitterSection" data="
For more 👉 https://t.co/XBQFh3O1ZO#ACC #AsiaCup2020 pic.twitter.com/Sdduyzc8mM
">⚠️ After careful consideration and evaluating the impact of the COVID-19 pandemic, the Executive Board of the ACC has decided to postpone the Asia Cup tournament that was scheduled for September 2020.
— AsianCricketCouncil (@ACCMedia1) July 9, 2020
For more 👉 https://t.co/XBQFh3O1ZO#ACC #AsiaCup2020 pic.twitter.com/Sdduyzc8mM⚠️ After careful consideration and evaluating the impact of the COVID-19 pandemic, the Executive Board of the ACC has decided to postpone the Asia Cup tournament that was scheduled for September 2020.
— AsianCricketCouncil (@ACCMedia1) July 9, 2020
For more 👉 https://t.co/XBQFh3O1ZO#ACC #AsiaCup2020 pic.twitter.com/Sdduyzc8mM
ಪ್ರಪಂಚದಾದ್ಯಂತ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಸೆಪ್ಟೆಂಬರ್ನಲ್ಲಿ ನಡೆಯಬೇಕಾಗಿರುವ ಟೂರ್ನಿ ಮುಂದೂಡಿಕೆಯಾಗಿದೆ ಎಂದು ಎಸಿಸಿ ತೀರ್ಮಾನ ಕೈಗೊಂಡಿದ್ದು, ಈ ಸಂಬಂಧ ಎಸಿಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದಿಂತೆ ಟ್ವೀಟ್ ಮಾಡಿರುವ ಮಂಡಳಿ, ಆಟಗಾರರು ಸೇರಿದಂತೆ ಎಲ್ಲರ ಸುರಕ್ಷತೆ ದೃಷ್ಠಿಯಿಂದ ಮುಂದಿನ ವರ್ಷದ ಜೂನ್ವರೆಗೆ ಟೂರ್ನಿ ನಡೆಸದಿರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಈ ಬಾರಿ ಪಾಕಿಸ್ತಾನ ಏಷ್ಯಾ ಕಪ್ ಅತಿಥ್ಯ ವಹಿಸಬೇಕಾಗಿತ್ತು. ಆದರೆ, ಭದ್ರತೆ ಕಾರಣ ಯುಎಇನಲ್ಲಿ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಇನ್ನು ಇದೇ ಕಾರಣಕ್ಕಾಗಿ ಸೆಪ್ಟೆಂಬರ್ನಲ್ಲಿ ನಡೆಸಬೇಕು ಎನ್ನಲಾಗಿರುವ ಐಪಿಎಲ್ ಹಾದಿ ಮತ್ತಷ್ಟು ಸುಗಮಗೊಂಡಿದೆ.