ETV Bharat / sports

ಹೊಸದನ್ನು ಕಲಿಯುವ ಅಶ್ವಿನ್ ಜಾಣ್ಮೆ​, ಜಡೇಜಾ ಬ್ಯಾಟಿಂಗ್ ಸುಧಾರಣೆ ತಂಡದ ದೊಡ್ಡ ಬಲ: ರಹಾನೆ - ಜಡೇಜಾ ಬ್ಯಾಟಿಂಗ್

ರವಿಚಂದ್ರನ್ ಅಶ್ವಿನ್​ ಪ್ರಸ್ತುತ ಸರಣಿಯ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ. ಇನ್ನು ಜಡೇಜಾ ಎರಡನೇ ಟೆಸ್ಟ್​ನಲ್ಲಿ ಅರ್ಧಶತಕ ಸಿಡಿಸಿ ನಾಯಕ ರಹಾನೆ ಜೊತೆಗೆ ಶತಕದ ಜೊತೆಯಾಟ ನಡೆಸಿ ಭಾರತ 8 ವಿಕೆಟ್​ಗಳ ಜಯ ಸಾಧಿಸಲು ನೆರವಾಗಿದ್ದರು.

ಭಾರತ ಮತ್ತು ಆಸ್ಟ್ರೇಲಿಯಾ 3ನೇ ಟೆಸ್ಟ್​
ಅಶ್ವಿನ್​ ಜಡೇಜಾ
author img

By

Published : Jan 6, 2021, 6:16 PM IST

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲಿ ಸದಾ ಹೊಸ ವಿಷಯ ಕಲಿಯಲು ಬಯಸುವ ಆಶ್ವಿನ್ ಮತ್ತು ಹೆಚ್ಚು ಸುಧಾರಿತ ಬ್ಯಾಟ್ಸಮನ್​ ಆಗಿ ಮಾರ್ಪಡುತ್ತಿರುವ ಜಡೇಜಾ ಭಾರತ ಪರ ನಿಂತಿರುವುದು ನಮಗೆ ಹೆಚ್ಚಿನ ಬಲ ತಂದುಕೊಟ್ಟಿದೆ ಎಂದು ಟೀಮ್ ಇಂಡಿಯಾ ನಾಯಕ ರಹಾನೆ ತಿಳಿಸಿದ್ದಾರೆ.

ರವಿಚಂದ್ರನ್ ಅಶ್ವಿನ್​ ಪ್ರಸ್ತುತ ಸರಣಿಯ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ. ಇನ್ನು ಜಡೇಜಾ ಎರಡನೇ ಟೆಸ್ಟ್​ನಲ್ಲಿ ಅರ್ಧಶತಕ ಸಿಡಿಸಿ ನಾಯಕ ರಹಾನೆ ಜೊತೆಗೆ ಶತಕದ ಜೊತೆಯಾಟ ನಡೆಸಿ ಭಾರತ 8 ವಿಕೆಟ್​ಗಳ ಜಯ ಸಾಧಿಸಲು ನೆರವಾಗಿದ್ದರು.

ಅವರು (ಅಶ್ವಿನ್​) ಯಾವಾಗಲು ಹೊಸ ವಿಷಯಗಳನ್ನು ಕಲಿಯಲು ಎದುರು ನೋಡುತ್ತಿರುತ್ತಾರೆ. ಅವರು ಹೊಸ ಕೌಶಲ್ಯಗಳನ್ನು ಹೊಂದಿದ್ದಾರೆ. ಆದರೂ ಹೊಸದನ್ನು ಕಲಿಯುವ ಅವರ ಉತ್ಸಾಹ ಅವರನ್ನು ಮತ್ತಷ್ಟು ಅತ್ಯುತ್ತಮರನ್ನಾಗಿ ಮಾಡಿದೆ. ಅವರು ಮುಂದಿನ ಎರಡು ಟೆಸ್ಟ್​ಗಳಲ್ಲೂ ಇದೇ ಪ್ರದರ್ಶನವನ್ನು ಮುಂದುವರೆಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ರಹಾನೆ ಗುರುವಾರ ಮೂರನೇ ಟೆಸ್ಟ್​ಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅಶ್ವಿನ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಡೇಜಾರ ಬ್ಯಾಟಿಂಗ್​ ಕೌಶಲ್ಯದ ಸುಧಾರಣೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರವೀಂದ್ರ ಜಡೇಜಾ ಅವರು ಬ್ಯಾಟ್ಸ್​ಮನ್ ಆಗಿ ಪ್ರಗತಿ ಕಾಣುತ್ತಿದ್ದಾರೆ, ಇದು ತಂಡದ ದೃಷ್ಠಿಕೋನದಿಂದ ಬಹುದೊಡ್ಡ ಅಂಶವಾಗಿದೆ ಎಂದು ರಹಾನೆ ಹೇಳಿದ್ದಾರೆ.

ನಿಮ್ಮ 7ನೇ ಕ್ರಮಾಂಕದ ಬ್ಯಾಟ್ಸ್​ಮನ್​ ಕೂಡ ಬ್ಯಾಟ್​ ಮೂಲಕ ಉಪಯುಕ್ತ ರನ್​ ಕೊಡುಗೆ ನೀಡಿದರೆ ಉತ್ತಮ ಮೊತ್ತ ದಾಖಲಿಸಿಲು ತುಂಬಾ ಸುಲಭವಾಗುತ್ತದೆ. ಅದರಲ್ಲೂ ಅವರು ಫೀಲ್ಡಿಂಗ್​ನಲ್ಲಿ ಅದ್ಭುತ ಕ್ಯಾಚ್​​ ಪಡೆದಿರುವುದನ್ನು ಖಂಡಿತಾ​ ನೀವು ನೋಡಿರಬಹುದು. ಹಾಗಾಗಿ ಅವರು ತಂಡದಲ್ಲಿರುವುದು ತುಂಬಾ ನೆರವಾಗಲಿದೆ ಎಂದು ಜಡೇಜಾ ಬಗ್ಗೆ ರಹಾನೆ ಗುಣಗಾನ ಮಾಡಿದ್ದಾರೆ.

ಇದನ್ನು ಓದಿ:ಹುಕ್​ ಮತ್ತು ಫುಲ್​ ಶಾಟ್​ ಹೊಡೆಯುವುದರಲ್ಲಿ ರೋಹಿತ್​ಗಿಂತ ಉತ್ತಮರಿಲ್ಲ: ಕೊಹ್ಲಿ ಬಾಲ್ಯದ​ ಕೋಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.