ಲೀಡ್ಸ್: ವಿಶ್ವ ಚಾಂಪಿಯನ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಪಡೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ, ಕಳೆದ 71 ವರ್ಷಗಳಿಂದ ನಿರ್ಮಾಣಗೊಳ್ಳದಂತಹ ಕಳಪೆ ದಾಖಲೆ ತನ್ನ ಹೆಸರಿಗೆ ಬರೆಯಿಸಿಕೊಂಡಿದೆ.
ಆ್ಯಶಸ್ ಟೆಸ್ಟ್ ಸರಣಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 179ರನ್‌ಗಳಿಗೆ ಆಲೌಟ್ ಆಯಿತು. ಇದಾದ ಬಳಿಕ ಬ್ಯಾಟ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡ ಕೇವಲ 67ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತು.
1948ರ ಬಳಿಕ ಇಂಗ್ಲೆಂಡ್ ತಂಡ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಷ್ಟೊಂದು ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿರುವುದು ಇದೇ ಮೊದಲಾಗಿದ್ದು, ಇದಕ್ಕೂ ಮುಂಚಿತವಾಗಿ 1887ರಲ್ಲಿ ಸಿಡ್ನಿ ಟೆಸ್ಟ್ನಲ್ಲಿ ಕೇವಲ 45ರನ್‌ಗಳಿಗೆ ಆಲೌಟ್ ಆಗಿತ್ತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನಿಂದ ದಾಖಲಾದ 12ನೇ ಅತಿ ಕನಿಷ್ಠ ಮೊತ್ತವಾಗಿದೆ. ಜೋಶ್ ಹೇಜಲ್‌ವುಡ್ ದಾಳಿಗೆ (30ಕ್ಕೆ 5 ವಿಕೆಟ್) ಕುಸಿದ ಇಂಗ್ಲೆಂಡ್ 27.5 ಓವರ್‌ಗಳಲ್ಲೇ 67 ರನ್‌ಗಳಿಗೆ ಸರ್ವಪತನವನ್ನು ಕಂಡಿತು.
ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಸಧ್ಯದ ಮಾಹಿತಿ ವರೆಗೂ ಎರಡನೇ ದಿನದಾಟದ ಅಂತ್ಯಕ್ಕೆ 6ವಿಕೆಟ್ ಕಳೆದುಕೊಂಡು 6ವಿಕೆಟ್ ಕಳೆದುಕೊಂಡು 171ರನ್ಗಳಿಕೆ ಮಾಡಿದ್ದು, 283ರನ್ ಮುನ್ನಡೆ ಪಡೆದುಕೊಂಡಿದೆ.
ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಜೋ ಡೆನ್ಲಿ(12)ರನ್ ಹೊರತುಪಡಿಸಿದರೆ ಬೇರೆ ಯಾವುದೇ ಪ್ಲೇಯರ್ ಎರಡು ಅಂಕಿ ರನ್ಗಳಿಕೆ ಮಾಡಿಲ್ಲ. ಆಸ್ಟ್ರೇಲಿಯಾ ಪರ ಹೇಜಲ್‌ವುಡ್ 5ವಿಕೆಟ್, ಕಮ್ಮಿನ್ಸ್ 3ವಿಕೆಟ್ ಹಾಗೂ ಜೇಮ್ಸ್ 2ವಿಕೆಟ್ ಪಡೆದು ಮಿಂಚಿದರು.
ಮೊದಲ ಇನ್ನಿಂಗ್ಸ್ನಲ್ಲಿ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 61ರನ್ ಹಾಗೂ ಮಾರ್ನೂಸ್ 74ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದರೆ, ಎರಡನೇ ಇನ್ನಿಂಗ್ಸ್ನಲ್ಲಿ ಮಾರ್ನೂಸ್ 53ರನ್ಗಳಿಕೆ ಮಾಡಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.