ಲಂಡನ್: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಯಶಸ್ವಿ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ 2 ವಾರಗಳ ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಹಾಗಾಗಿ ರಾಯಲ್ಸ್ನ ಪ್ರಧಾನ ವೇಗಿ ಐಪಿಎಲ್ಗೆ ಮರಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
25 ವರ್ಷದ ಆರ್ಚರ್ ಐಪಿಎಲ್ನಲ್ಲಿ ರಾಜಸ್ಥಾನ ತಂಡದಲ್ಲಿದ್ದರು. ಸೋಮವಾರ ಮಧ್ಯದ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅದರಲ್ಲಿದ್ದ ಗಾಜಿನ ಚೂರನ್ನು ತೆಗೆಯಲಾಗಿದೆ.
ಜೋಫ್ರಾ ಆರ್ಚರ್ ಸೋಮವಾರ ಬಲಗೈ ಬೆರಳಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಮಧ್ಯದ ಬರಳಿನಿಂದ ಗಾಜಿನ ಚೂರೊಂದನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಫಿಶ್ ಟ್ಯಾಂಕ್ ಗಾಜು ಬಿದ್ದು ಆರ್ಚರ್ ಬಲಗೈಗೆ ಗಾಯ: ಆಶ್ಲೇ ಗೈಲ್ಸ್ ಸ್ಪಷ್ಟನೆ
ಪ್ರಸ್ತುತ ಆರ್ಚರ್ 2 ವಾರಗಳ ಕಾಲ ಪುನಶ್ಚೇತನ ಆರಂಭಿಸಿದ್ದಾರೆ. ಅವರು ತರಬೇತಿಗೆ ಮರಳುವ ಮುನ್ನ ಸಲಹೆಗಾರರು ಅವರನ್ನು ಪರಿಶೀಲಿಸಲಿದ್ದಾರೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ಸರಣಿಯ ವೇಳೆ ಅವರು ಭುಜ ನೋವಿಗೆ ಒಳಗಾಗಿದ್ದರು. ಈ ಬಗ್ಗೆ ಆರ್ಚರ್ ತರಬೇತಿಗೆ ಮರಳಿದ ನಂತರ ಪರಿಶೀಲಿಸಲಾಗುವುದು ಎಂದು ಬೋರ್ಡ್ ತಿಳಿಸಿದೆ.
ಏಪ್ರಿಲ್ 9ರಿಂದ 14ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಏಪ್ರಿಲ್ 12 ರಂದು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಮುಂಬೈನಲ್ಲಿ ರಾಜಸ್ಥಾನ್ ರಾಯಲ್ಸ್ ತನ್ನ ಅಭಿಯಾನ ಆರಂಭಿಸಲಿದೆ.