ಲಂಡನ್: ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ವೇಳೆ ಬಯೋ ಸೆಕ್ಯೂರ್ ನಿಯಮ ಉಲ್ಲಂಘನೆ ಮಾಡಿ, ಆರ್ಚರ್ 5 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದರು. ಈ ವೇಳೆ, ಅವರು ಆನ್ಲೈನ್ನಲ್ಲಿ ಜನಾಂಗೀಯ ನಿಂದನೆಗೊಳಗಾಗಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಸೌತಾಂಪ್ಟನ್ ಟೆಸ್ಟ್ ನಂತರ ಬಯೋಸೆಕ್ಯೂರ್ ತಾಣದಿಂದ ಹೊರ ಹೋಗುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದ ಜೋಫ್ರಾ ಆರ್ಚರ್ರನ್ನು ಇಂಗ್ಲೆಂಡ್ ತಂಡ ಎರಡನೇ ಟೆಸ್ಟ್ನಿಂದ ಕೈಬಿಟ್ಟಿತ್ತು. ಅಲ್ಲದೇ 5 ದಿನಗಳ ಕಾಲ ಕ್ವಾರಂಟೈನ್ ಮಾಡಿ ದಂಡ ಕೂಡ ವಿಧಿಸಲಾಗಿತ್ತು.
ಇದೀಗ ಕ್ವಾರಂಟೈನ್ ಪೂರೈಸಿರುವ ಅವರು ಎರಡು ಬಾರಿ ಕೋವಿಡ್ 19 ಟೆಸ್ಟ್ನಲ್ಲೂ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಆದರೆ ಕ್ವಾರಂಟೈನ್ನಲ್ಲಿದ್ದ ವೇಳೆ ಇನ್ಸ್ಟಾಗ್ರಾಂನಲ್ಲಿ ತಾವೂ ವರ್ಣಬೇಧದ ನಿಂದನೆಗಳನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ.
ಕ್ವಾರಂಟೈನ್ಲ್ಲಿದ್ದ ವೇಳೆ ಇನ್ಸ್ಟಾಗ್ರಾಂನಲ್ಲಿ ಜನಾಂಗಿಯ ನಿಂದನೆ ಹಾಗೂ ವರ್ಣಭೇದದ ನಿಂದನೆಗೆ ಒಳಗಾಗಿದ್ದೇನೆ. ಆದ್ದರಿಂದ ನಾನು ಎನಫ್ ಇಸ್ ಎನಫ್ ಸ್ಲೋಗನ್ ಜೊತೆ ಇದನ್ನು ಇಲ್ಲಿಗೆ ನಿಲ್ಲಿಸಲು ಬಯಸಿದ್ದೇನೆ.
ಕಳೆದ ವಾರ ಫುಟ್ಬಾಲ್ ಆಟಗಾರ ವಿಲ್ಫ್ರೈಡ್ ಝಾಹ ಅವರನ್ನು 12 ವರ್ಷದ ಬಾಲಕ ಆನ್ಲೈನ್ನಲ್ಲಿ ಹಿಯಾಳಿಸಿದ್ದ. ಇದೀಗ ನನಗೂ ಹೀಗೆ ಆಗಿದೆ. ಆದರೆ ನಾನು ಇದನ್ನು ಮುಂದುವರಿಸಲು ಬಿಡುವುದಿಲ್ಲ. ಹಾಗಾಗಿ ನಾನು ನನ್ನ ದೂರನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಕಳಹಿಸಿದ್ದೇನೆ. ಅದು ಸರಿಯಾದ ಪ್ರಕ್ರಿಯೆ ಮೂಲಕ ಹೋಗುತ್ತದೆ ಎಂಬ ವಿಶ್ವಾಸವನ್ನೂ ಹೊಂದಿದ್ದೇನೆ ಎಂದಿದ್ದಾರೆ.
ಇನ್ನು ಮೂರನೇ ಟೆಸ್ಟ್ ಜುಲೈ 24 ರಂದು ನಡೆಯಲಿದೆ. ಎರಡು ತಂಡಗಳು ತಲಾ ಒಂದು ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಿದೆ. ಇದೀಗ ಮೂರನೇ ಪಂದ್ಯ ಸರಣಿ ಗೆಲ್ಲಲು ಎರಡು ತಂಡಕ್ಕೆ ಅತಿ ಮುಖ್ಯವಾಗಿದೆ.