ETV Bharat / sports

ಭಾರತದ ಕ್ರಿಕೆಟ್​ ಇತಿಹಾಸದಲ್ಲೇ ಈಗಿರುವ ಕೊಹ್ಲಿ ನೇತೃತ್ವದ ತಂಡ ಅತ್ಯಂತ ಶ್ರೇಷ್ಠ- ಗಾಯಕ್ವಾಡ್‌

1997ರಿಂದ 1999 ಅವಧಿಯಲ್ಲಿ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದ ಅಂಶುಮಾನ್​ ಗಾಯಕ್​ವಾಡ್​ ಭಾರತದ ಪರ 40 ಟೆಸ್ಟ್​ ಹಾಗೂ 15 ಏಕದಿನ ಪಂದ್ಯವನ್ನಾಡಿದ್ದಾರೆ. ಟೆಸ್ಟ್​ನಲ್ಲಿ 2 ಶತಕ ಹಾಗೂ 10 ಅರ್ಧಶತಕಗಳ ಸಹಿತ 1985 ರನ್​ಗಳಿಸಿದ್ದಾರೆ.

ಕೊಹ್ಲಿ ನೇತೃತ್ವದ ಭಾರತ ತಂಡ
ಕೊಹ್ಲಿ ನೇತೃತ್ವದ ಭಾರತ ತಂಡ
author img

By

Published : Jul 14, 2020, 7:40 PM IST

ನವದೆಹಲಿ : ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಸಾಗುತ್ತಿರುವ ಪ್ರಸ್ತುತ ತಂಡ ಭಾರತದ ಕ್ರಿಕೆಟ್​ ಇತಿಹಾಸದಲ್ಲೇ ಅತ್ಯುತ್ತಮ ತಂಡವಾಗಿದೆ ಎಂದು ಟೀಂ​ ಇಂಡಿಯಾ ಮಾಜಿ ಕೋಚ್​ ಅಂಶಮಾನ್​ ಗಾಯಕ್ವಾಡ್​ ಹೇಳಿದ್ದಾರೆ.

1997ರಿಂದ 1999 ಅವಧಿಯಲ್ಲಿ ಭಾರತ ತಂಡದ ಮುಖ್ಯ ಕೋಚ್​ ಆಗಿದ್ದ ಅಂಶುಮಾನ್​ ಗಾಯಕ್​ವಾಡ್,​ ಭಾರತದ ಪರ 40 ಟೆಸ್ಟ್​ ಹಾಗೂ 15 ಏಕದಿನ ಪಂದ್ಯವನ್ನಾಡಿದ್ದಾರೆ. ಟೆಸ್ಟ್​ನಲ್ಲಿ 2 ಶತಕ ಹಾಗೂ 10 ಅರ್ಧಶತಕಗಳ ಸಹಿತ 1985 ರನ್​ಗಳಿಸಿದ್ದಾರೆ.

ಭಾರತದ ಪರ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದುಕೊಡುವ ಮೂಲಕ ಈಗಾಗಲೇ ಅತ್ಯುತ್ತಮ ನಾಯಕನಾಗಿರುವ ಕೊಹ್ಲಿಯನ್ನು ಹಾಗೂ ಅವರ ತಂಡವನ್ನು ಭಾರತ ಕ್ರಿಕೆಟ್​ ಇತಿಹಾಸದ ಶ್ರೇಷ್ಠ ತಂಡ ಎಂದು ಗಾಯಕವಾಡ್​ ಹೇಳಿದ್ದಾರೆ.

ಅಂಶುಮಾನ್​ ಗಾಯಕ್ವಾಡ್​
ಅಂಶುಮಾನ್​ ಗಾಯಕ್ವಾಡ್​

ನೀವು ನನ್ನನು ಕೇಳಿದ್ರೆ, ವಿರಾಟ್​ ಕೊಹ್ಲಿ ಭಾರತದ ಅತ್ಯುತ್ತಮ ತಂಡವನ್ನು ಹೊಂದಿದ್ದಾರೆ ಎಂದು ಹೇಳುತ್ತೇನೆ. ಬ್ಯಾಟಿಂಗ್​, ಬೌಲಿಂಗ್​ ಅತ್ಯುತ್ತಮವಾಗಿದ್ದು, ತಂಡ ಸಮತೋಲನದಿಂದ ಕೂಡಿದೆ. ಈವರೆಗೆ ನಾವು ಉತ್ತಮ ವೇಗದ ಬೌಲಿಂಗ್​ ಹೊಂದಿರಲಿಲ್ಲ. ನಾವು ಕರಣ್​ ರೋಜರ್​, ಕಪಿಲ್ ದೇವ್‌ರಂತಹ ಶ್ರೇಷ್ಠ ಬೌಲರ್​ಗಳನ್ನು ಹೊಂದಿದ್ದೆವು. ಆದರೆ, ಅವರಿಂದ ಪಂದ್ಯ ಗೆಲ್ಲಲಾಗುತ್ತಿರಲಿಲ್ಲ. ಈ ಕೊಹ್ಲಿ ತಂಡದಲ್ಲಿನ ವೇಗಿಗಳಲ್ಲಿ ಆಯ್ಕೆಗಳಿವೆ. ಅವರು ತಂಡಕ್ಕೆ ಗೆಲುವನ್ನು ತಂದು ಕೊಡುತ್ತಿದ್ದಾರೆ ಎಂದು ಗಾಯಕ್ವಾಡ್​ ಖಾಸಗಿ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಧೋನಿ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಘೋಷಿಸಿದ ನಂತರ ವಿರಾಟ್ ಕೊಹ್ಕಿಗೆ 2014ರಲ್ಲಿ ಭಾರತದ ಟೆಸ್ಟ್ ನಾಯಕತ್ವವನ್ನು ನೀಡಲಾಯಿತು. ನಂತರ 2017ರಲ್ಲಿ ಏಕದಿನ ನಾಯಕತ್ವವನ್ನು ನೀಡಲಾಗಿದೆ. ಅಲ್ಲಿಂದ ಭಾರತ ತಂಡ ತವರಿನಲ್ಲಿ ಒಂದು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಹಾಗೂ ಟಿ20 ಸರಣಿ ಸೋತಿರುವುದು ಬಿಟ್ಟರೆ ಉಳಿದೆಲ್ಲಾ ಸರಣಿಗಳನ್ನು ಗೆದ್ದಿದೆ. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್​ ಸರಣಿ ಹಾಗೂ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾದಲ್ಲೂ ಟೆಸ್ಟ್​ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.